ಯುವಜನರ ವಿಭಾಗ

ಮೊಬೈಲ್ ಬಳಕೆಯಿಂದ ಯುವಕರ ತಲೆಮೇಲೆ ಕೊಂಬು ಬೆಳೆಯುತ್ತಿದೆ

Pinterest LinkedIn Tumblr

ಮೊಬೈಲ್​ ಬಳಕೆ ಇಂದು ಗಣನೀಯವಾಗಿ ಏರಿಕೆ ಆಗಿದೆ. ಯಾವುದೋ ದೂರದ ಊರಿನಲ್ಲಿ ಕುಳಿತವರ ಜೊತೆ ನಾವು ಇಲ್ಲಿಂದಲೇ ಸಂವಹನ ಮಾಡಬಹುದು. ಆದರೆ, ಮೊಬೈಲ್​ ಬಳಕೆಯಿಂದ ಹೃದಯಕ್ಕೆ ಹಾನಿ ಉಂಟಾಗಲಿದೆ ಎನ್ನುವ ವಿಚಾರವನ್ನು ಈಗಾಗಲೇ ವೈದ್ಯಲೋಕ ಸಂಶೋಧಿಸಿದೆ. ಈಗ ತಿಳಿದುಬಂದಿರುವ ಹೊಸ ವಿಚಾರ ಏನೆಂದರೆ, ಅತಿಯಾದ ಮೊಬೈಲ್​ ಬಳಕೆಯಿಂದ ತಲೆ ಬುರುಡೆ ಹಿಂಭಾಗದಲ್ಲಿ ಕೊಂಬು ಕೂಡ ಬೆಳೆಯುತ್ತಿದೆಯಂತೆ. ಈ ವಿಚಾರ ವಿಶ್ವಕ್ಕೆ ಸವಾಲಾಗಿದೆ.

 

ಇತ್ತೀಚೆಗೆ ಆಸ್ಟ್ರೇಲಿಯಾದ ಕ್ವೀನ್​ಲ್ಯಾಂಡ್​ನ ಸನ್​ಶೈನ್​ ಕೋಸ್ಟ್​ ವಿಶ್ವವಿದ್ಯಾಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಇಂದಿನ ಪೀಳಿಗೆಯವರ ತಲೆ ಬುರುಡೆಯ ಹಿಂಭಾಗದಲ್ಲಿ ಕೋಡಿನ ಮಾದರಿಯ ಅಂಗವೊಂದು ಬೆಳೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕೋಡು ಬೆಳೆಯಲು ಮೊಬೈಲ್​ ಬಳಕೆ ಅಧಿಕವಾಗಿದ್ದೆ ಕಾರಣ ಎನ್ನಲಾಗಿದೆ.

 

ಅಧ್ಯಯನ ಹೇಳುವ ಪ್ರಕಾರ, ಇಂದಿನ ಯುವಜನತೆ ಮೊಬೈಲ್ ​ಅನ್ನು ಸದಾ ಹಿಡಿದಿರುತ್ತಾರೆ. ಮೊಬೈಲ್​ ನೋಡಲು ಕತ್ತನ್ನು ಕೆಳಮುಖ ಮಾಡಿಕೊಳ್ಳಬೇಕು. ಇದರಿಂದ ಬೆನ್ನು ಮೂಳೆಯ ಬದಲಾಗಿ ತಲೆ ಹಿಂಭಾಗದಲ್ಲಿರುವ ಸ್ನಾಯುವಿಗೆ ಭಾರ ವರ್ಗಾವಣೆ ಆಗುತ್ತದೆ. ನಿಧಾನವಾಗಿ ಮೂಳೆ ಆಕಾರದ ಅಂಗ ಬೆಳೆದುಕೊಳ್ಳುತ್ತದೆ ಎಂದು ಅಧ್ಯಯನ ಹೇಳಿದೆ. ಈ ಕೋಡಿನ ಉದ್ದ 3-5 ಮಿಲಿಮೀಟರ್​ವರೆಗೆ ಬೆಳೆಯಲಿದೆ.

 

ಕಳೆದ ವರ್ಷ ಈ ಸಂಶೋಧನೆ ನಡೆಸಲಾಗಿತ್ತು. 18-86 ವರ್ಷದ 1,200 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇವರಲ್ಲಿ ಶೇ. 33 ಜನರಿಗೆ ತಲೆಯ ಹಿಂಭಾಗದಲ್ಲಿ ಕೋಡು ಬೆಳೆದಿರುವ ವಿಚಾರ ತಿಳಿದುಬಂದಿದೆ.

 

“ಈ ಕೋಡು ಒಂದು ದಿನ ಅಥವಾ ಒಂದು ವರ್ಷದಲ್ಲಿ ಬೆಳೆಯುವಂಥದ್ದಲ್ಲ. ಇದಕ್ಕೆ ಅನೇಕ ವರ್ಷಗಳೇ ಹಿಡಿಯುತ್ತವೆ. ಚಿಕ್ಕ ವಯಸ್ಸಿನಿಂದಲೂ ಮೊಬೈಲ್​ ಬಳಕೆ ಮಾಡುತ್ತಿದ್ದರೆ ಈ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು,” ಎನ್ನುತ್ತಾರೆ ಅಧ್ಯಯನಕಾರರು.

 

Comments are closed.