ಕ್ರೀಡೆ

ಮತ್ತೆ ಬ್ಯಾಟ್​ ಹಿಡಿದು ಮೈದಾನದಲ್ಲಿ ಅಬ್ಬರಿಸಲಿರುವ ಯುವರಾಜ್​ ಸಿಂಗ್​

Pinterest LinkedIn Tumblr


ನವದೆಹಲಿ: ಟೀಂ ಇಂಡಿಯಾ ಆಟಗಾರ ಯುವರಾಜ್ ಸಿಂಗ್​ ಅವರು ಇತ್ತೀಚಿಗೆ ತಮ್ಮ ವೃತ್ತಿ ಜೀವನದ ಬದುಕಿಗೆ ವಿದಾಯ ಘೋಷಣೆ ಮಾಡಿದ್ದರು. ಆದರೆ, ಈಗ ಮತ್ತೆ ಅವರು ಮೈದಾನದಲ್ಲಿ ಇಳಿಯಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

ಹೌದು ಟಿ-20 ಫ್ರ್ಯಾಂಚೈಸ್ ಟೊರೊಂಟೊ ನ್ಯಾಷನಲ್ಸ್​ನಲ್ಲಿ ಗ್ಲೋಬಲ್ ಟಿ-20 ಕೆನಡಾ ತಂಡದವನ್ನು ಯುವರಾಜ್​ ಸಿಂಗ್ ಅವರು ಪ್ರತಿನಿಧಿಸಲಿದ್ದಾರೆ. ಈ ವಿಷಯವನ್ನು ಗ್ಲೋಬಲ್​ ಟಿ-20 ಕೆನಡಾ ಅಧಿಕೃತ ಟ್ವಿಟರ್​ನಲ್ಲಿ ಬಹಿರಂಗಪಡಿಸಿದ್ದಾರೆ.

ಅಲ್ಲದೇ ವಿದೇಶಿ ಟಿ-20 ಲೀಗ್‌ಗಳಲ್ಲಿ ಯುವರಾಜ್​ ಸಿಂಗ್​ ಅವರು ಆಡಲು ಅವಕಾಶ ನೀಡುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಮನವಿ ಮಾಡಿದ್ದರು. ಆದರೆ ಬಿಸಿಸಿಐ ಯುವರಾಜ್​ ಸಿಂಗ್​ಗೆ ಅನುಮತಿ ನೀಡಿರಲಿಲ್ಲ.

2018ರಲ್ಲಿ ನಡೆದ ಟಿ 20 ಟೂರ್ನಿನಲ್ಲಿ ಶಾಹೀದ್ ಆಫ್ರಿದಿ, ಡ್ವೇನ್ ಬ್ರಾವೋ, ಕ್ರೀಸ್​ಗೇಲ್​, ಕ್ರೀಸ್​ ಲ್ಯಾನ್​, ಲಸೀತ್​ ಮಾಲಿಂಗಾ, ಡೇವಿಡ್​ ಮಿಲ್ಲರ್, ಸುನಿಲ್​ ನರೈನ್, ಆಡ್ರೆಲ್​ ರೇಸೆಲ್​, ಡಾರೆನ್ ಸಾಮ್ಮಿ ಮತ್ತು ಸ್ಟೀವನ್​ ಸ್ಮಿತ್​ ಅವರು ಈ ಟೂರ್ನಿಯಲ್ಲಿ ಆಡಿದ್ದರು.

ಈ ಟೂರ್ನಿಯೂ ಜುಲೈ 25 ರಿಂದ ಆಗಸ್ಟ್​ 11ರೊಳಗೆ ಗ್ಲೋಬಲ್ ಟಿ-20 ಕೆನಡಾ ನಡೆಯಲಿದೆ.

Comments are closed.