ಯುವಜನರ ವಿಭಾಗ

ಮದುವೆ ಆಗುವ ಮುನ್ನ ಹುಡುಗಿಯೊಂದಿಗೆ ಭೇಟಿಯಾಗುವಾಗ ಈ ವಿಷಯ ಅರಿತಿರಲೇಬೇಕು …!

Pinterest LinkedIn Tumblr

ಲವ್ ಮ್ಯಾರೇಜ್ ಆದರೆ ಇಬ್ಬರ ನಡುವೆ ಅದೆಷ್ಟೋ ಮಾತು ಕತೆ ನಡೆದಿರುತ್ತದೆ. ಆದರೆ ಅರೇಂಜ್ಡ್ ಮ್ಯಾರೇಜ್ ಆದರೆ ಮೊದಲಿಗೆ ಮಾತುಕತೆಯೇ ಇರೋಲ್ಲ. ಮದುವೆಗೆ ಮುನ್ನ ಅವರೊಂದಿಗೆ ಮಾತುಕತೆ ನಡೆಸಲು ಬಯಸಿದರೆ ಈ ಟಿಪ್ಸ್ ಪಾಲಿಸಿ…

ಸಮಯದ ಬಗ್ಗೆ ಅರಿವಿರಲಿ: ಅವರಿಗೆ ನೀವು ಎಷ್ಟು ಗಂಟೆಗೆ ಭೇಟಿಯಾಗತ್ತೀರಿ ಎಂದು ಹೇಳಿರುವಿರೋ, ಅದೇ ಸಮಯಕ್ಕೆ ಸರಿಯಾಗಿ ಭೇಟಿಯಾಗಿ. ತಡ ಮಾಡಿ ಹೋಗಬೇಡಿ.

ಚೆನ್ನಾಗಿ ರೆಡಿಯಾಗಿ: ಪ್ರತಿಯೊಬ್ಬ ಹುಡುಗಿಗೂ ತಮ್ಮ ಭಾವಿ ಪತಿ ತುಂಬಾ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬಾಸೆ ಇರುತ್ತದೆ. ಆದುದರಿಂದ ಆದಷ್ಟು ಚೆನ್ನಾಗಿ ರೆಡಿಯಾಗಿ ಹೋಗಿ.

ಬಾಗಿಲು ತೆರೆಯಿರಿ: ಹುಡುಗಿಯರಿಗೆ ಜೆಂಟಲ್ ಮ್ಯಾನ್ ಎಂದರೆ ತುಂಬಾ ಇಷ್ಟ. ಮೊದಲ ಬಾರಿಗೆ ಭಾವಿ ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋದಾಗ ಸಣ್ಣ ಪುಟ್ಟ ಕೆಲಸದಿಂದ ನಿಮ್ಮ ವ್ಯಕ್ತಿತ್ವ ಏನೆಂಬುದನ್ನು ತೋರಿಸಿ. ಅವರಿಗಾಗಿ ಬಾಗಿಲು ತೆರೆಯಿರಿ, ಕಾರಿನ ಬಾಗಿಲು ತೆರೆಯಿರಿ. ಇದು ಅವರಿಗೆ ನಿಮ್ಮ ಮೇಲೆ ಉತ್ತಮ ಭಾವನೆ ಮೂಡಿಸುತ್ತದೆ.

ಹೂವು ತೆಗೆದುಕೊಂಡು ಹೋಗಿ: ಹುಡುಗಿಯರಿಗೆ ಹೆಚ್ಚಾಗಿ ಹೂವೆಂದರೆ ಇಷ್ಟ. ಆದುದರಿಂದ ಮೊದಲ ಡೇಟ್‌ಗೆ ಹೋಗುವಾಗ ಹೂವು ತೆಗೆದುಕೊಂಡು ಹೋಗಿ. ಅವರಿಗೂ ತುಂಬಾ ಖುಷಿಯಾಗೋದರಲ್ಲಿ ಸಂಶಯವಿಲ್ಲ.

ಮೊಬೈಲ್ ಸೈಲೆಂಟ್ ಆಗಿರಲಿ: ಹೌದು. ಇದು ನೀವು ಮಾಡಲೇಬೇಕಾದ ಮೊದಲ ಕೆಲಸ. ಇಲ್ಲವೇ ಸ್ವಿಚ್ ಆಫ್ ಮಾಡಿ. ಮೊದಲ ಬಾರಿಗೆ ಭೇಟಿಯಾದಾಗ ನೀವು ಪದೇ ಪದೇ ಮೊಬೈಲ್‌ನಲ್ಲಿ ಮಾತನಾಡೋದು, ಮೆಸೇಜ್ ಮಾಡೋದು ಸರಿ ಇರೋಲ್ಲ.

ಅವರನ್ನು ಹೊಗಳಿ: ಅವರ ಜೊತೆ ಮನ ಬಿಚ್ಚಿ ಮಾತನಾಡಿ, ಜೊತೆಗೆ ಅವರ ಯಾವುದಾದರೂ ಗುಣ ನಿಮಗೆ ಇಷ್ಟವಾದರೆ ಹೇಳಿ. ಅವರಿಗೆ ಮೆಚ್ಚುಗೆಯಾಗುವಂತೆ ಮಾತನಾಡಿ.

Comments are closed.