ಪಠಾಣ್ಕೋಟ್: ಕಥುವಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ದೋಷಿಗಳು ಎಂದು ಪರಿಗಣಿಸಿ, ಪಠಾಣ್ಕೋಟ್ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
ಘಟನೆ ನಡೆದ ಒಂದು ವರ್ಷದ ಬಳಿಕ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಸಂಜ್ಹಿ ರಾಮ್, ದೀಪ್ ಖಜೌರಿಯಾ ಹಾಗೂ ಪರ್ವೇಶ್ ಅವರಿಗೆ ಐಪಿಸಿ ಸೆಕ್ಷನ್ 302(ಕೊಲೆ), 376D(ಗ್ಯಾಂಗ್ ರೇಪ್), ಹಾಗೂ 120B(ಕೊಲೆ ಪಿತೂರಿ) ಆಧಾರದ ಮೇಲೆ ಹಾಗೂ ಆನಂದ ದತ್ತ, ತಿಲಕ್ ರಾಜ್ ಹಾಗೂ ಸುರೆಂದರ್ ವರ್ಮಾ ಅವರುಗಳಿಗೆ ಸೆಕ್ಷನ್ 201(ಸಾಕ್ಷ್ಯನಾಶ) ಅಡಿ ದೋಷಿಗಳು ಎಂದು ಪ್ರಕಟಿಸಿದೆ.
ಏಳನೇ ಆರೋಪಿ ವಿಶಾಲ್ ಜಂಗ್ರೋಟ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ. ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗುವುದು ರಂದು ದೋಷಿಗಳ ಪರ ವಕೀಲ ಎಸ್ಕೆ ಸಾವ್ನೆ ಹೇಳಿಕೆ ನೀಡಿದ್ದಾರೆ.
ಜಮ್ಮುವಿನ ಕಥುವಾ ಭಾಗದಿಂದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಗೆ ಮಂಪರು ಬರುವಂತೆ ಡ್ರಗ್ ನೀಡಲಾಗಿ, ಹಲವಾರು ಬಾರಿ ಅತ್ಯಾಚಾರ ನಡೆಸಲಾಗಿತ್ತು ಎಂದು ಪೊಲೀಸರು ತಮ್ಮ ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರು ಮಂದಿಯನ್ನು ದೋಷಿಗಳು ಎಂದು ಪ್ರಕಟಿಸಿರುವ ನ್ಯಾಯಾಲಯ, ಸೋಮವಾರ ಮಧ್ಯಾಹ್ನದ ಬಳಿಕ ಶಿಕ್ಷೆ ಪ್ರಮಾಣ ಪ್ರಕಟಿಸುವ ಸಾಧ್ಯತೆಗಳಿವೆ. ವಿಶಾಲ್ ಅವರು, ಘಟನೆ ವೇಳೆ ಬೇರೆ ರಾಜ್ಯದಲ್ಲಿರುವುದು ಸಾಕ್ಷಾಧಾರಗಳಿಂದ ದೃಡಪಟ್ಟ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ ಎಂದು ವಕೀಲ ವಿನೋದ್ ಮಹಾಜನ್ ತಿಳಿಸಿದ್ದಾರೆ.
2018 ಮೇನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆಯನ್ನು ಪಠಾಣ್ಕೋಟ್ ಸ್ಥಳೀಯ ನ್ಯಾಯಾಲಯಕ್ಕೆ ಹಸ್ತಾಂತರಗೊಂಡಿತ್ತು. ನ್ಯಾಯಾಲಯದ ವಿಚಾರಣೆಗಳನ್ನು ಸಂಪೂರ್ಣವಾಗಿ ವೀಡಿಯೋ ಮಾಡಲಾಗಿದೆ. ಕಳೆದ ವಾರ ಎರಡೂ ಭಾಗದ ವಕೀಲರು ತಮ್ಮ ವಾದಗಳನ್ನು ಮಂಡಿಸಿದ್ದರು.
2019 ಜನವರಿ 10 ರಂದು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಲೆಮಾರಿ ಜನಾಂಗ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಕಥುವಾದಲ್ಲಿನ ಗ್ರಾಮದೇವಸ್ಥಾನದದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿತ್ತು. 2018 ಮೇ 31ರಿಂದ ಪಠಾಣ್ಕೋಟ್ ಸ್ಥಳೀಯ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಿತ್ತು