ಯುವಜನರ ವಿಭಾಗ

ಲೈಂಗಿಕ ಜೀವನವನ್ನು ಮತ್ತಷ್ಟು ಸದೃಢಗೊಳಿಸಲು ಇಲ್ಲಿದೆ ಕೆಲ ಸುಲಭ ಸೂತ್ರಗಳು!

Pinterest LinkedIn Tumblr

ಎಷ್ಟೇ ಆರೋಗ್ಯಯುತವಾಗಿದ್ದರೂ ಕೆಲವರು ಲೈಂಗಿಕ ಜೀವನದಲ್ಲಿ ತೃಪ್ತಿ ಹೊಂದಲು ಸಾಧ್ಯವಾಗುವುದೇ ಇಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿರುತ್ತವೆ. ವ್ಯಕ್ತಿಯ ಆಹಾರ ಕ್ರಮ, ನಿತ್ಯದ ಚಟುವಟಿಕೆ, ಮಲಗುವ ಕ್ರಮ ಹೀಗೆ ಎಲ್ಲವೂ ಪ್ರಭಾವ ಬೀರುತ್ತದೆ. ನಿತ್ಯದ ಆಹಾರದ ಜೊತೆ ಒಂದಷ್ಟು ಪೌಷ್ಟಿಕ ಅಂಶಗಳನ್ನು ಸೇವನೆ ಮಾಡಿದರೆ ನಿಮ್ಮ ಲೈಂಗಿಕ ಜೀವನದಲ್ಲಿ ಸಾಕಷ್ಟು ಬದಲಾವಣೆ ತರಬಹುದು.

ಕೆಲ ದುಶ್ಚಟಗಳು ಸೆಕ್ಸ್​​ ಜೀವನಕ್ಕೆ ಮಾರಕವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ದುಶ್ಚಟಗಳಿಂದ ಸಂಭೋಗ ಶಕ್ತಿ ಕಡಿಮೆ ಆಗಲಿದೆಯಂತೆ. ನಿಮ್ಮ ಪರ್ಫಾರ್ಮೆನ್ಸ್ ಕಡಿಮೆ ಆಗಿ, ಪ್ರೀತಿ ಪಾತ್ರರರಿಗೆ ತೃಪ್ತಿ ನೀಡಲು ವಿಫಲರಾಗಬಹುದು! ಲೈಂಗಿಕ ಜೀವನವನ್ನು ಮತ್ತಷ್ಟು ಸುಂದರಗೊಳಿಸಲು ಇಲ್ಲಿದೆ ಕೆಲ ಸುಲಭ ಸೂತ್ರಗಳು.

ಸದಾ ಆ್ಯಕ್ಟಿವ್ ಆಗಿರಿ:
ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳಲಿದೆ. ಅಚ್ಚರಿ ಎಂದರೆ, ಹೃದಯದ ಆರೋಗ್ಯ ಚೆನ್ನಾಗಿದ್ದರೆ ಲೈಂಗಿಕ ಜೀವನವೂ ಉತ್ತಮವಾಗಿರುತ್ತದೆ. ಹಾಗಾಗಿ, ನಿತ್ಯ ಒಂದಷ್ಟು ಹೊತ್ತು ವ್ಯಾಯಾಮ ಮಾಡಿದರೆ, ಸೆಕ್ಸ್ ಲೈಫ್ ಚೆನ್ನಾಗಿರುತ್ತದೆ ಎನ್ನುತ್ತಾರೆ ವೈದ್ಯರು.

ಇವುಗಳನ್ನು ಸೇವಿಸಿ:
ಕೆಲ ತರಕಾರಿ ಹಾಗೂ ಹಣ್ಣುಗಳು ನಿಮ್ಮ ಸೆಕ್ಸ್ ಜೀವನನ್ನು ಉತ್ತಮವಾಗಿಸಬಹುದು. ಆಹಾರದಲ್ಲಿ ಈರುಳ್ಳಿ ಹಾಗೂ ಶುಂಟಿಯನ್ನು ಹೆಚ್ಚೆಚ್ಚು ಸೇವನೆ ಮಾಡಬೇಕು. ನಿತ್ಯ ಕನಿಷ್ಠ ಎರಡು ಬಾಳೇ ಹಣ್ಣು, ಮೆಣಸು ಹಾಗೂ ಕಾಳು ಮೆಣಸು ನಿಮ್ಮ ಆಹಾರದಲ್ಲಿದ್ದರೆ ನೀವು ಲೈಂಗಿಕ ಪ್ರಕ್ರಿಯೆಯಲ್ಲಿ ತೃಪ್ತಿ ಹೊಂದಬಹುದು ಎನ್ನುತ್ತಾರೆ ವೈದ್ಯರು. ಇನ್ನು, ಮೊಟ್ಟೆಯಲ್ಲಿ ಬಿ-ವಿಟಮಿನ್ ಹೆಚ್ಚಿರುವುದರಿಂದ ಅವುಗಳನ್ನು ಸೇವಿಸಬೇಕು ಎಂದು ಸೂಚನೆ ನೀಡುತ್ತಾರೆ ವೈದ್ಯರು.

ಒತ್ತಡ ಕಡಿಮೆ ಮಾಡಿಕೊಳ್ಳಿ:
ಒತ್ತಡದಲ್ಲಿ ಸೆಕ್ಸ್ ಮಾಡಲು ಮುಂದಾದರೆ ನಿಮಗೆ ಅದರಲ್ಲಿ ಸಂತೃಪ್ತಿ ಸಿಗದು. ಹಾಗಾಗಿ, ರಿಲ್ಯಾಕ್ಸ್ ಮೂಡ್ನಲ್ಲಿ ಲೈಂಗಿಕ ಪ್ರಕ್ರಿಯೆಯಲ್ಲಿ ತೊಡಗಿದರೆ ಹೆಚ್ಚು ತೃಪ್ತಿ ಸಿಗಲಿದೆಯಂತೆ. ಹಾಗಾಗಿ ನಿತ್ಯ ಧ್ಯಾನ ಮಾಡಬೇಕು ಎಂಬುದು ವೈದ್ಯರ ಸೂಚನೆ.

ದುಶ್ಚಟಗಳನ್ನು ಬದಿಗೊತ್ತಿ:
ಮದ್ಯ ಸೇವನೆ ನಿಮ್ಮ ಲೈಂಗಿಕ ಕ್ರಿಯೆ ಮೇಲೆ ದುಷ್ಪರಿಣಾಮ ಬೀಳಲಿದೆಯಂತೆ! ಈ ವಿಚಾರವನ್ನು ನಂಬಲೇ ಬೇಕು. ಕೆಲವರು ಕುಡಿದು ಸೆಕ್ಸ್ ಮಾಡಲು ಇಷ್ಟಪಡುತ್ತಾರೆ. ಆದರೆ, ಮದ್ಯ ಸೇವನೆ ಮಾಡಿದರೆ ಸೆಕ್ಸ್ ಪರ್ಫಾರ್ಮೆನ್ಸ್ ಕುಗ್ಗಬಹುದು ಎನ್ನುವ ಎಚ್ಚರಿಕೆ ನೀಡುತ್ತಾರೆ ತಜ್ಞರು.

ಸೂರ್ಯನ ಬೆಳಕಿಗೆ ಮೈವೊಡ್ಡಿ:
ಬೆಳಗ್ಗೆ ಸೂರ್ಯನ ಕಿರಣಕ್ಕೆ ಮೈವೊಡ್ಡಿದರೆ ನಿಮ್ಮ ಲೈಂಗಿಕ ಶಕ್ತಿ ಹೆಚ್ಚಲಿದೆ. ಚಳಿಗಾಲದಲ್ಲಿ ಮೆಲಾಟೊನಿನ್ ಹೆಸರಿನ ಹಾರ್ಮೋನ್ ಹೆಚ್ಚು ಉತ್ಪತ್ತಿಯಾಗುತ್ತದೆ. ಬಿಸಿಲಿಗೆ ಮೈವೊಡ್ಡಿದರೆ, ಇದರ ಉತ್ಪನ್ನ ಕಡಿಮೆ ಆದರೆ ಸೆಕ್ಸ್ ಲೈಫ್ ಉತ್ತಮಗೊಳ್ಳುತ್ತದೆ ಎನ್ನುತ್ತಾರೆ.

ಹಸ್ತಮೈಥುನದ ಅಭ್ಯಾಸವಿರಲಿ:
ಹಸ್ತಮೈಥುನ ಮಾಡುವುದರಿಂದ ಸಮಸ್ಯೆ ಉಂಟಾಗುತ್ತದೆ ಎಂಬುದು ಅನೇಕರ ತಪ್ಪು ನಂಬಿಕೆ. ಆದರೆ, ಹಸ್ತಮೈಥುನ ಮಾಡುವುದರಿಂದ ಯಾವುದೇ ಸಮಸ್ಯೆ ಎದುರಾಗದು ಎನ್ನುತ್ತಾರೆ ವೈದ್ಯರು. ಇದು ಕೂಡ ಲೈಂಗಿಕ ಜೀವನವನ್ನು ಉತ್ತಮಗೊಳಿಸಲು ಸಹಕಾರಿಯಾಗಲಿದೆಯಂತೆ.

Comments are closed.