ಪ್ರಮುಖ ವರದಿಗಳು

ಗಂಡ-ಹೆಂಡತಿ ಜೊತೆಯಾಗಿ ಮಲಗದೆ ಇದ್ದರೆ ಕಾಡುವ ಸಮಸ್ಯೆ ಏನು ಗೊತ್ತೇ..?

Pinterest LinkedIn Tumblr

ವೈವಾಹಿಕ ಸಂಬಂಧ ಉತ್ತಮವಾಗಿದ್ದಷ್ಟು ದಾಂಪತ್ಯ ಚೆನ್ನಾಗಿರುತ್ತದೆ. ದಾಂಪತ್ಯಕ್ಕೆ ಬೇಕಾಗಿರುವುದು ಪ್ರೀತಿ, ವಿಶ್ವಾಸ, ನಂಬಿಕೆ. ಇದರಲ್ಲಿ ಯಾವುದು ಒಂದು ಚೂರು ಹೆಚ್ಚು ಕಡಿಮೆಯಾದರೂ ಸಂಬಂಧ ಏರುಪೇರಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರಬೇಕಾದರೆ ಸೆಕ್ಸ್, ರೊಮ್ಯಾನ್ಸ್ ಕೂಡಾ ಮುಖ್ಯ. ರೊಮ್ಯಾಂಟಿಕ್ ಆಗಿರಲು ಇಲ್ಲಿವೆ ಟಿಪ್ಸ್ ಗಳು.

ಗಂಡ-ಹೆಂಡತಿ ಯಾವಾಗಲು ಜೊತೆಯಾಗಿ ಮಲಗಬೇಕು. ಮದುವೆಯಾದ ನಂತರ ಜೊತೆಯಾಗಿ ಮಲಗುವುದು ಸಾಮಾನ್ಯ. ಜೊತೆಯಾಗಿ ಮಲಗಿದರೆ ಬಾಂಧವ್ಯ ವೃದ್ಧಿಯಾಗುತ್ತದೆ. ಆದರೆ ವರ್ಷ ಕಳೆದಂತೆ ಪತಿ ಪತ್ನಿ ಬೇರೆ ಬೇರೆಯಾಗಿ ಮಲಗಲು ಆರಂಭಿಸುತ್ತಾರೆ. ಇದರಿಂದ ಸಂಬಂಧ ಹೆಚ್ಚು ಬಿಗಡಾಯಿಸುತ್ತದೆ. ಜೊತೆಯಾಗಿ ಮಲಗದೆ ಇದ್ದರೆ ಏನು ಸಮಸ್ಯೆ ಕಾಡುತ್ತದೆ ತಿಳಿಯಿರಿ.

ಸಂಬಂಧ ಸಪ್ಪೆಯಾಗುತ್ತದೆ : ನೀವು ಬೇರೆ ಬೇರೆಯಾಗಿ ಮಲಗಲು ಆರಂಭಿಸಿದರೆ ಸಂಬಂಧದಲ್ಲಿ ರೋಮ್ಯಾನ್ಸ್ ಉಳಿಯೋದಿಲ್ಲ. ಇಬ್ಬರ ನಡುವೆ ಆಕರ್ಷಣೆ ಕಡಿಮೆಯಾಗುತ್ತದೆ. ಎಲ್ಲವೂ ಸಪ್ಪೆಯಾಗುತ್ತದೆ. ಸಂಗಾತಿಯ ಸ್ಪರ್ಶ ಕೂಡ ರೋಮಾಂಚನವನ್ನುಂಟು ಮಾಡುವುದಿಲ್ಲ.

ಆತ್ಮೀಯತೆ ಇರುವುದಿಲ್ಲ : ಇಬ್ಬರು ಜೊತೆಯಾಗಿ ಮುದ್ದು ಮಾಡದೆ ಇದ್ದರೆ, ರೊಮ್ಯಾನ್ಸ್ ಮಾಡದೆ ಇದ್ದರೆ ಅಲ್ಲಿ ಆತ್ಮೀಯತೆಗೆ ಅವಕಾಶವೇ ಇರುವುದಿಲ್ಲ. ಆತ್ಮೀಯತೆ ಇರದೇ ಇದ್ದರೆ ಆ ರಿಲೇಷನ್ ಶಿಪ್ ಉಳಿಯೋದು ಕಷ್ಟ.

ಇತರರ ಮೇಲೆ ಆಕರ್ಷಣೆ : ಇದರಿಂದ ಪತಿ ಇತರರ ಕಡೆಗೆ ಆಕರ್ಷಕರಾಗಬಹುದು. ಅವರು ನಿಮ್ಮಲ್ಲಿ ಸಿಗದ ಸುಖವನ್ನು ಬೇರೆ ಕಡೆಯಿಂದ ಪಡೆಯಲು ಇಷ್ಟಪಡುತ್ತಾರೆ. ಇದು ಬಿರುಕಿಗೆ ಕಾರಣವಾಗುತ್ತದೆ.

ಜಗಳ : ಎಲ್ಲಿ ಪ್ರೀತಿ, ಆತ್ಮೀಯತೆ ಇರುವುದಿಲ್ಲವೋ ಅಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಇದರಿಂದ ಇಬ್ಬರ ನಡುವೆ ಜಗಳ ಶುರುವಾಗುತ್ತದೆ. ಒಬ್ಬರ ಮುಖ ಒಬ್ಬರು ನೋಡಲು ಕಿರಿಕಿರಿ ಶುರುವಾಗುತ್ತದೆ. ಹೀಗಾಗಲು ಅವಕಾಶ ಕೊಡಬೇಡಿ.

Comments are closed.