ಯುವಜನರ ವಿಭಾಗ

ಈ ವಿಷಯದಲ್ಲಿ ಪರಿಣಿತನಾಗಿರುವ ಹುಡುಗನೇ ಬೇಕೆನ್ನುತ್ತಿದ್ದಾರೆ ಹುಡುಗಿಯರು !

Pinterest LinkedIn Tumblr

ಮದುವೆಯಾಗಲು ಹುಡುಗಿ ನೋಡಲು ಹೋದ ಸಂದರ್ಭದಲ್ಲಿ ‘ ಹುಡುಗಿಗೆ ಅಡುಗೆ ಬರುತ್ತಾ’ ಎಂಬ ಕಾಲ ಹೋಯ್ತು. ಈಗ ಹುಡುಗಿಯರು ‘ಅಡುಗೆ ಬರುವ ಹುಡುಗ ಸಾಕು’ ಅಂತಿದ್ದಾರಂತೆ. ಸೋ, ಮದುವೆಯಾಗುವ ಪ್ಲಾನ್ ಇರುವ ಹುಡುಗರೇ ಏನಕ್ಕೂ ಅಡುಗೆ ಮಾಡಲು ಕಲಿಯುವುದು ಒಳ್ಳೆಯದು.

ಹೌದು ಎಂಎ ಎನ್ನುವ ಪ್ರಸಿದ್ಧ ವರವಧು ಅನ್ವೇಷಣಾ ಕೇಂದ್ರವೊಂದು ಮಹಿಳೆಯರು ಸಂಬಂಧದಲ್ಲಿ ಏನನ್ನು ಬಯಸುತ್ತಾರೆ ಎನ್ನುವುದರ ಕುರಿತು ಆನ್‌ಲೈನ್‌ ಸಮೀಕ್ಷೆಯೊಂದನ್ನು ನಡೆಸಿತ್ತು. ಇದರಲ್ಲಿ 25-34 ವರ್ಷದೊಳಗಿನ ಸುಮಾರು 6,800 ರಷ್ಟು(ಶೆ, 47ರಷ್ಟು ಮಹಿಳೆಯರು, ಶೇ. 53ರಷ್ಟು ಪುರುಷರು) ಭಾಗವಹಿಸಿದ್ದರು.

ಅವರ ಬಳಿ ಸಂಗಾತಿಯಾಗುವವರ ಹತ್ತಿರ ಏನನ್ನು ನಿರೀಕ್ಷಿಸುತ್ತೀರ? ಎಂಬ ಪ್ರಶ್ನೆಗೆ ಶೇ. 36ರಷ್ಟು ಮಹಿಳೆಯರು ಮದುವೆಯಾಗ ವಯಸುವ ಹುಡುಗನ ನಿಮ್ಮದು ಅವಿಭಕ್ತ ಕುಟುಂಬವೇ ಅಥವಾ ವಿಭಕ್ತ ಕುಟುಂಬವೇ? ಎಂದು ಕೇಳಿದರೆ 30% ಮಹಿಳೆಯರು ನನ್ನ ಕರಿಯರ್‌ಗೆ ಸಪೋರ್ಟಿವ್‌ ಆಗಿರುತ್ತೀರಾ? ಎಂದು ಕೇಳುತ್ತಾರೆ, ಇನ್ನು ಶೇ. 26ರಷ್ಟು ಮಹಿಳೆಯರು ನಿಮಗೆ ಅಡುಗೆ ಬರುತ್ತಾ? ಎಂದು ಕೇಳುತ್ತಾರೆ ಎಂದು ಸಮೀಕ್ಷೆ ಹೇಳಿದೆ.

ಆದರೆ ಈ ನಂಬರ್‌ ಹುಡುಗಿಯರ ವಿಷಯದಲ್ಲಿ ಭಿನ್ನವಾಗಿದೆ. ಶೇ. 36ರಷ್ಟು ಹುಡುಗರು ನನ್ನ ಕುಟುಂಬದ ಜತೆ ವಾಸಿಸಲು ಇಷ್ಟಪಡ್ತೀಯಾ? ಎಂದು ಕೇಳಿದರೆ ಶೇ. 34ರಷ್ಟು ಮದುವೆಯ ನಂತರ ಕೆಲಸ ಮಾಡುವ ಪ್ಲಾನ್ ಇದೆಯಾ? ಎಂದು ಕೇಳ್ತಾರಂತೆ ಶೇ. 19ರಷ್ಟು ಹುಡುಗರು ಮಾತ್ರ ಅಡುಗೆ ಬರುತ್ತಾ? ಎಂದು ಕೇಳ್ತಾರಂತೆ.

ಇನ್ನು ಮೊದಲ ಬಾರಿ ನೋಡಿದಾಗ ಏಕೆ ಇಷ್ಟವಾದರು ಎಂದು ಕೇಳಿದ ಪ್ರಶ್ನೆಗೆ ಪುರುಷ ಮತ್ತು ಮಹಿಳೆಯರು ಒಂದೇ ರೀತಿಯ ಉತ್ತರ ನೀಡಿದ್ದಾರೆ.

ಶೇ. 64ರಷ್ಟು ಜನರು ಅವರ ಲುಕ್‌(ಬಾಹ್ಯರೂಪ) ಎಂದು ಹೇಳಿದರೆ ಶೇ. 53ರಷ್ಟು ಜನರು ಕರಿಯರ್‌ ನೋಡಿ ಅಂದಿದ್ದಾರೆ, ಶೇ. 23 ಜನರು ಮಾತ್ರ ಸಮಾನ ಮನಸ್ಕರು ಆದ ಕಾರಣ ಎಂದು ಹೇಳಿದ್ದಾರೆ.

Comments are closed.