ಕರಾವಳಿ

ಮಹಿಳೆಯರೆದುರು ಅಸಭ್ಯ ವರ್ತನೆ, ವಿದ್ಯುತ್ ಕಂಬಕ್ಕೆ ಕಟ್ಟಿ ಯುವಕನಿಗೆ ಥಳಿತ

Pinterest LinkedIn Tumblr

ಕುಂದಾಪುರ: ಸಾರ್ವಜನಿಕರೆದುರು ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಮುಜುಗರವಾಗುವಂತೆ ಮಾಡುತ್ತಿದ್ದ ಎನ್ನಲಾದ ಅನ್ಯಕೋಮಿನ‌ ಯುವಕನನ್ನು ಸಾರ್ವಜನಿಕರು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕುಂದಾಪುರ ತಾಲೂಕು ಎಲ್.ಐ.ಸಿ ರಸ್ತೆಯಲ್ಲಿ ನಡೆದಿದೆ.

ಕುಂದಾಪುರದ ಪ್ರತಿಷ್ಟಿತ ಹೊಟೇಲ್ ಮಾಲಿಕನ ಪುತ್ರನಿಗೆ ಮಹಿಳೆಯರು ಸೇರಿದಂತೆ ಒಂದಷ್ಟು ಮಂದಿ ಥಳಿಸಿದ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಹಲವು‌ ಸಮಯಗಳಿಂದ ಅನುಚಿತ ವರ್ತನೆ ತೋರುತ್ತಿದ್ದ ಯುವಕನನ್ನು ಹಿಡಿದು ಥಳಿಸಿದ್ದು ಇದೇ ಸಂದರ್ಭ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ವಿವಾಹಿತನಾಗಿರುವ ಈತ ಕೊಂಚ ಮಾನಸಿಕ ಅಸ್ವಸ್ಥ ಎಂದು ಆತನ ಕುಟುಂಬಿಕರು‌ ಮಾಹಿತಿ ನೀಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ ಎಂಬ ಮಾಹಿತಿಯಿದೆ.

Comments are closed.