ಯುವಜನರ ವಿಭಾಗ

ನಿಮ್ಮ ಸುಂದರ ಸಂಬಂಧ ಚೆನ್ನಾಗಿರಬೇಕಾದರೆ ಇವುಗಳನ್ನು ಮಾಡಲೇಬೇಡಿ…!

Pinterest LinkedIn Tumblr

ನಮ್ಮ ಸಂಬಂಧ ಸುಂದರವಾಗಿರಬೇಕು, ಸಂತೋಷದಿಂದ ಇರಬೇಕು ಎಂದು ಪ್ರತಿಯೊಬ್ಬ ಜೋಡಿಯೂ ಬಯಸುತ್ತಾರೆ. ಆದರೆ ಇಂಥ ಜೀವನ ಸುಲಭದಲ್ಲಿ ಸಿಗುವುದಿಲ್ಲ, ಅದಕ್ಕೆ ನಾವು ಪ್ರಯತ್ನಿಸಬೇಕು. ಸುಂದರ ಸಂಸಾರವನ್ನು ಕಟ್ಟುವುದು ದಂಪತಿಯ ಕೈಯಲ್ಲಿದೆ. ಇದಕ್ಕೆ ಸಮರ್ಪಣೆ ಭಾವನೆ ಮುಖ್ಯ.

ತಮ್ಮ ಸಂಬಂಧ ಸುಂದರವಾಗಿರಬೇಕೆಂದು ಬಯಸುವವರು ಈ ರೀತಿ ಮಾಡಲೇಬಾರದು.

1. ಮತ್ತೊಬ್ಬರ ಜತೆ ಹೋಲಿಕೆ ಮಾಡುವುದು ಮಾಡಬಾರದು. ನಮ್ಮ ಬದುಕನ್ನು ಮತ್ತೊಬ್ಬರ ಜತೆ ಹೋಲಿಕೆ ಮಾಡುವುದರಿಂದ ಇರುವ ಸಂತೋಷ ಹಾಳಾಗುತ್ತದೆ. ಆದ್ದರಿಂದ ನಮ್ಮ ಬದುಕನ್ನು ಮತ್ತಷ್ಟು ಸುಂದರವಾಗಿ ಕಟ್ಟಿಕೊಳ್ಳುವುದರ ಬಗ್ಗೆ ಯೋಚಿಸಬೇಕೇ ಹೊರತು, ಮತ್ತೊಬ್ಬರ ಬದುಕಿನೊಂದಿಗೆ ಹೋಲಿಕೆ ಮಾಡಬಾರದು.

2. ಸಂಗಾತಿ ಬಗ್ಗೆ ಕುಟುಂಬ ಹಾಗೂ ಸ್ನೇಹಿತರ ಬಳಿ ದೂರಬಾರದು. ನಿಮಗೆ ಯಾವುದಾದರೂ ವಿಷಯಕ್ಕೆ ಅಸಮಧಾನ ಉಂಟಾದರೆ ಅವರ ಬಳಿಯೇ ನೇರವಾಗಿ ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು.

3. ಸಂಸಾರ ಎಂದ ಮೇಲೆ ಸಣ್ಣ-ಪುಟ್ಟ ಮುನಿಸು ಬರುವುದು ಸಹಜ. ಆದರೆ ಮತ್ತೊಬ್ಬರ ವ್ಯಕ್ತಿತ್ವಕ್ಕೆ ಘಾಸಿ ಆಗುವ ಪದಗಳನ್ನು ಬಳಸುವುದು, ಹೀಯಾಳಿಸುವುದು ಮಾಡಬಾರದು.

4. ನಾನೇ ಸರಿ ಎಂದು ವರ್ತಿಸುವುದರಿಂದ ಸಂಸಾರದಲ್ಲಿ ಕಲಹ ಉಂಟಾಗುವುದು. ಒಬ್ಬರು ಮತ್ತೊಬ್ಬರ ಭಾವನೆಯನ್ನು ಅರ್ಥ ಮಾಡಿಕೊಳ್ಳಬೇಕು.

5. ಸಿನಿಮಾ ಅಥವಾ ಕತೆಗಿಂತ ನಿಜ ಜೀವನ ಭಿನ್ನವಾಗಿರುತ್ತದೆ, ಆದ್ದರಿಂದ ಸಂಸಾರ ಬಗ್ಗೆ ಸುಂದರ ಕನಸುಗಳಿರಲಿ, ಆದರೆ ಭ್ರಮೆ ಬೇಡ.

6. ಸುಂದರ ಸಂಸಾರಕ್ಕೆ ಹಣಕಾಸಿನ ನಿರ್ವಹಣೆ ಕೂಡ ಬಹುಮುಖ್ಯ.

7. ನಮ್ಮ ಸಂಗಾತಿ 24 ಗಂಟೆ ನಮ್ಮ ಜತೆಯೇ ಇರಬೇಕೆಂದು ಬಯಸುವುದು ಸರಿಯಲ್ಲ. ಅವರ ಸ್ನೇಹಿತರ ಜತೆ ಸಮಯ ಕಳೆಯಲು ಬಿಡಬೇಕು, ಅವರ ಉತ್ತಮ ಹವ್ಯಾಸವನ್ನು ಪ್ರೋತ್ಸಾಹಿಸಬೇಕು.

8. ಮನೆ ಜವಾಬ್ದಾರಿಯ ವಿಷಯದಲ್ಲಿ ಲಿಂಗಬೇಧ ಮಾಡಬಾರದು, ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಬೇಕು.

9. ನಾವು ಬಯಸಿದಂತೆ ಸಂಗಾತಿ ನಡೆದುಕೊಳ್ಳಬೇಕೆಂಬ ಆಲೋಚನೆಯನ್ನು ಮೊದಲು ಬಿಡಬೇಕು. ಪ್ರತಿಯೊಬ್ಬರಲ್ಲೂ ಕೆಲವೊಂದು ಮೈನಸ್‌ಪಾಯಿಂಟ್‌ಇರುತ್ತದೆ, ಆದ್ದರಿಂದ ಹೊಂದಾಣಿಕೆಯಿಂದ ಬಾಳಿದರೆ ಮಾತ್ರ ಸಂಬಂಧ ಸುಂದರವಾಗಿ ಅರಳುವುದು, ಇಲ್ಲದಿದ್ದರೆ ಮನಸುಗಳು ಮುದುಡಿ ಹೋಗುವುದು.

Comments are closed.