ಯುವಜನರ ವಿಭಾಗ

ಹುಡುಗಿಯರ ಸೌಂದರ್ಯದ ಜೊತೆಗೆ ಈ ಗುಣಗಳನ್ನೂ ಹುಡುಗರು ಹೆಚ್ಚು ಇಷ್ಟಪಡುತ್ತಾರೆ..!

Pinterest LinkedIn Tumblr

ಸುಂದರವಾದ ಹುಡುಗಿಯರ ಹಿಂದೆ ಹುಡುಗರು ಇರುತ್ತಾರೆ ಎಂಬುದು ಸತ್ಯ. ಆದರೆ ನಿಜವಾಗಲೂ ಹುಡುಗರ ಮನಸ್ಸು ಗೆಲ್ಲಲು ಸೌಂದರ‍್ಯ ಮಾತ್ರ ಇದ್ದರೆ ಸಾಲದು. ಕೆಲವು ಗುಣಗಳು ಕೂಡ ತಾವು ಇಷ್ಟ ಪಡುವ ಹುಡುಗಿಯಲ್ಲಿ ಇರಲೇಬೇಕು ಎಂಬುದು ಹಲವು ಹುಡುಗರ ಅಭಿಪ್ರಾಯ. ಮೇಕಪ್‌, ದಿರಿಸು ಸೇರಿದಂತೆ ಇನ್ನಿತರ ಅಂಶಗಳನ್ನೊಳಗೊಂಡ ಬಾಹ್ಯ ಸೌಂದರ‍್ಯ ಮೊದಲ ನೋಟಕ್ಕೆ ಹುಡುಗರನ್ನು ಆಕರ್ಷಿಸುತ್ತದೆ ಅಂತಾದರೂ ಪ್ರೀತಿಯಲ್ಲಿ ಬೀಳಲು ಬೇರೆಯೇ ಗುಣಗಳು ಇಷ್ಟವಾಗುತ್ತವೆಯಂತೆ. ಅಂತಹ ಗುಣಗಳು ಯಾವವು ಗೊತ್ತಾ?

ನಗು
ಹೆಣ್ಣಿನ ಅಂದ ಹೆಚ್ಚುವುದೇ ಸುಂದರ ನಗುವಿನಲ್ಲಿ. ನಗು ಗೆಳೆತನದ ದಾರಿಯನ್ನು ತೆರೆಯುತ್ತದೆ. ಆದರೆ ಅದು ಕೃತಕ ನಗುವಾಗಿರಬಾರದು ಅಷ್ಟೆ. ಅಂತರಾಳದಿಂದ ಬರುವ ನಗುವಿನಲ್ಲಿ ನೈಜ ವ್ಯಕ್ತಿತ್ವ ಅಡಗಿರುತ್ತದೆ.

ವಿಶಾಲ ಮನೋಭಾವ
ಸಂಶಯ ಮನೋಪ್ರವೃತ್ತಿ, ಸಂಕುಚಿತ ಮನೋಭಾವದ ಹೆಣ್ಣನ್ನು ಗಂಡು ಯಾವತ್ತೂ ಬಯಸುವುದಿಲ್ಲ. ವಿಶಾಲ ಮನೋಭಾವದ ಅಲೋಚನೆ, ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುವ ಹೆಣ್ಣಿನ ಕಡೆಗೆ ಗಂಡು ಮೆಚ್ಚುಗೆಯಿಂದ ನೋಡುತ್ತಾನೆ.

ಆತ್ಮವಿಶ್ವಾಸ
ಆತ್ಮವಿಶ್ವಾಸ ಇರುವ ಹೆಣ್ಣು ಬೇಗನೆ ಆಕರ್ಷಿತಳಾಗುತ್ತಾಳೆ. ಆದರೆ ಹೆಚ್ಚಿನ ಹೆಣ್ಣು ಮಕ್ಕಳಲ್ಲಿ ಇದರ ಕೊರತೆ ಕಂಡು ಬರುತ್ತದೆ. ಅದಕ್ಕೆ ಅವರು ಬೆಳೆದು ಬಂದ ಪರಿಸರ ಕೂಡ ಕಾರಣ. ಆದರೆ ಅದನ್ನು ಮೀರಿ ಹೆಣ್ಣು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಯಾರನ್ನೋ ಆಕರ್ಷಿಸಬೇಕು ಅಂತಲ್ಲ, ಜೀವನವನ್ನು ಎದುರಿಸುವ ಶಕ್ತಿ ಅವಳಲ್ಲಿ ಇರಬೇಕು.

ಧನಾತ್ಮಕ ಚಿಂತನೆ
ನಕಾರಾತ್ಮಕ ವ್ಯಕ್ತಿತ್ವದವರೊಂದಿಗೆ ಜೀವನ ಸಾಗಿಸುವುದು ಕಷ್ಟ. ಪಾಸಿಟಿವ್‌ಚಿಂತನೆಗಳು, ಪಾಸಿಟಿವ್‌ಲುಕ್‌ಒಟ್ಟಿನಲ್ಲಿ ಎಲ್ಲವೂ ಹೆಣ್ಣಿನಲ್ಲಿ ಪಾಸಿಟಿವ್‌ಆಗಿದ್ದರೆ, ಗಂಡು ಸದಾ ಆ ಹೆಣ್ಣಿಗೆ ಆಕರ್ಷಿತನಾಗಿರುತ್ತಾನೆ. ಯಾವುದೇ ವಿಷಯವನ್ನು ಪಾಸಿಟಿವ್‌ಆಗಿ ತಿಳಿದುಕೊಳ್ಳುವ ಹುಡುಗಿಯರಿಗೆ ಹುಡುಗರು ಕ್ಲೀನ್‌ಬೋಲ್ಡ್‌ಆಗುತ್ತಾರೆ.

ಹಾಸ್ಯ ಪ್ರವೃತ್ತಿ
ಅಳು ಮುಂಜಿಗಿಂತ ಹಾಸ್ಯ ಪ್ರವೃತ್ತಿಯ ಹುಡುಗಿಯರನ್ನು ಕಂಡರೆ ಹುಡುಗರಿಗೆ ಇಷ್ಟ. ಹಾಸ್ಯ ಪ್ರವೃತ್ತಿ ಎಲ್ಲರಲ್ಲೂ ಇರುವಂಥದಲ್ಲ. ಇದು ನಿಮ್ಮ ಜಾಣ್ಮೆಯನ್ನು ಹಾಗೂ ನಿಮ್ಮ ಬುದ್ಧಿಶಕ್ತಿಯನ್ನು ಸೂಚಿಸುತ್ತದೆ. ಹಾಸ್ಯ ಪ್ರವೃತ್ತಿ ಇರುವ, ತನ್ನ ಬಗ್ಗೆಯೇ ಹಾಸ್ಯ ಮಾಡಬಲ್ಲ ಹಾಗೂ ಕಷ್ಟದ ಸಮಯದಲ್ಲೂ ಆರಾಮವಾಗಿ ಅಂತಹ ಸನ್ನಿವೇಶಗಳನ್ನು ನಿಭಾಯಿಸಬಲ್ಲ ಹುಡುಗಿಯರನ್ನು ಇಷ್ಟ ಪಡುತ್ತಾರೆ.

ಭಿನ್ನ ವ್ಯಕ್ತಿತ್ವ
ನಾವು ಹುಡುಗರಿಗೆ ಇಷ್ಟವಾಗಲು ಹೀಗೇ ಇರಬೇಕೆಂದು ನಿಮ್ಮಲ್ಲಿ ತಪ್ಪು ಕಲ್ಪನೆ ಬೆಳೆಸಿಕೊಳ್ಳಬೇಡಿ. ನಿಮ್ಮಲ್ಲಿರುವ ಕೆಲ ಭಿನ್ನ ವ್ಯಕ್ತಿತ್ವ ಕೂಡ ಹುಡುಗರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಆದ್ದರಿಂದ ನೀವು ನೀವಾಗಿಯೇ ಇರಿ.

ಹೊಂದಾಣಿಕೆ ಮನೋಭಾವ
ಪ್ರತಿ ವಿಷಯಕ್ಕೂ ವಾದ ಮಾಡುವ, ಹಠ ಹಿಡಿಯುವ ಹೆಣ್ಣು ಯಾವ ಗಂಡಿಗೂ ಇಷ್ಟವಾಗೋಲ್ಲ. ಬದಲಾಗಿ ತುಸು ಹೊಂದಾಣಿಕೆ ಮಾಡಿಕೊಳ್ಳುವ ನೇಚರ್‌ಇದ್ದರೆ ಗಂಡು ಫುಲ್‌ಫಿದಾ ಆಗುತ್ತಾನೆ.

Comments are closed.