ಯುವಜನರ ವಿಭಾಗ

ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸಲು ಈ ಆಹಾರಗಳೇ ವಯಾಗ್ರ !

Pinterest LinkedIn Tumblr

ದಾಳಿಂಬೆ : ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿ ಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು.

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಮೊಟ್ಟೆಗಳು : ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ.

ಮೀನು : ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ 3 ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ.

ಕಪ್ಪು ಚಾಕಲೇಟು : ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಹೆಚ್ಚಾಗಿ ಕಪ್ಪು ಚಾಕಲೇಟು ಸೇವನೆಯಿಂದ ವೀರ್ಯದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು.

ಕಾಫಿ : ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ಶುಂಠಿ : ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ಬಿಸಿ ಹಾಲು : ಹಾಲು ತಾಜಾ ಹಾಗೂ ಕೊಬ್ಬು ಸಹಿತ ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ.

Comments are closed.