ಯುವಜನರ ವಿಭಾಗ

ದಾಂಪತ್ಯ ಜೀವನದ ಬಗ್ಗೆ ನೀವು ಇದನ್ನು ತಿಳಿದುಕೊಳ್ಳಲೇಬೇಕು…!

Pinterest LinkedIn Tumblr

ಪ್ರತಿಯೊಬ್ಬರು ತಮ್ಮ ದಾಂಪತ್ಯ ಜೀವನ ಅನ್ಯೋನ್ಯತೆ ಮತ್ತು ಸಂತಸದಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಅದಕ್ಕೆ ವೈವಾಹಿಕ ಸಂಬಂಧ ಸುಖಕರವಾಗಿರಲು ಕೆಲವು ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಕೆಲ ಬದಲಾವಣೆಗಳನ್ನು ಮಾಡುವುದರಿಂದ ದಾಂಪತ್ಯ ಜೀವನವನ್ನು ಉತ್ತಮ ಪಡಿಸಿಕೊಳ್ಳಬಹುದು. ದಾಂಪತ್ಯ ಜೀವನವು ಉತ್ತಮವಾಗಿರಲು ಅನುಸರಿಸಬೇಕಾದ ಕೆಲ ಸಲಹೆಗಳು ಇಂತಿವೆ.

1. ವೈವಾಹಿಕ ಜೀವನದ ಆರಂಭದಲ್ಲಿ ದಂಪತಿಗಳು ಅನ್ಯೋನತೆಯಿಂದ ಇರುತ್ತಾರೆ. ಕ್ರಮೇಣ ಸಣ್ಣಪುಟ್ಟ ವಿಚಾರಗಳಿಗೂ ವೈಮನಸ್ಸು ಮೂಡುತ್ತದೆ. ವೈಮನಸ್ಯದಿಂದಾಗಿ ದಂಪತಿಗಳಲ್ಲಿ ವಿರಸ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಸಂಗಾತಿಯೊಡನೆ ವಾದ ಬೆಳೆಸಬೇಡಿ. ಪರಿಸ್ಥಿತಿ ತಿಳಿಯಾದ ಬಳಿಕ ವಾಸ್ತವವನ್ನು ವಿವರಿಸುವ ಪ್ರಯತ್ನ ಮಾಡಿ. ಜಗಳಕ್ಕೆ ಕಾರಣವಾದ ವಿಷಯವನ್ನು ಮರುದಿನ ಸಂಪೂರ್ಣವಾಗಿ ವಿವರಿಸಿ ತಿಳಿ ಹೇಳುವುದು ಉತ್ತಮ.

2. ಸಂಬಂಧಗಳಲ್ಲಿ ಪಾರದರ್ಶಕತೆ ಇರುವುದು ಒಳ್ಳೆಯದು. ಆದರೆ ಪ್ರಾಮಾಣಿಕ ಪಾರದರ್ಶಕತೆ ನಿಮ್ಮ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಕೆಲ ವಿಷಯಗಳನ್ನು ನೆಮ್ಮದಿಯ ದೃಷ್ಟಿಯಿಂದ ಮರೆಮಾಚ ಬೇಕಾಗುತ್ತದೆ. ನಿಮ್ಮ ಸಂಗಾತಿ ಇಷ್ಟಪಡದ ವಿಷಯಗಳನ್ನು ಹಂಚಿಕೊಳ್ಳುವುದು ಕೂಡ ಸಂಬಂಧ ಹದಗೆಡಲು ಕಾರಣವಾಗುತ್ತದೆ. ಪರಸ್ಪರ ಹೊಂದಾಣಿಕೆಯ ವಿಷಯಗಳನ್ನು ಮಾತ್ರ ಚರ್ಚಿಸುವುದರಿಂದ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬಹುದು.

3. ಕೆಲವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಂತೆ ಸ್ನೇಹಿತರಿಂದ ದೂರವಾಗುತ್ತಾರೆ. ಬಳಿಕ ಅದೇ ಸ್ನೇಹವನ್ನು ತನ್ನ ಸಂಗಾತಿಯಿಂದ ಬಯಸುತ್ತಾರೆ. ಇದು ದೊಡ್ಡ ಭಿನ್ನಾಪ್ರಾಯಕ್ಕೆ ಎಡೆ ಮಾಡಿ ಕೊಡುತ್ತದೆ. ಸ್ನೇಹಿತರ ಸ್ನೇಹ ಮತ್ತು ಸಂಗಾತಿಯ ಪ್ರೀತಿಯಲ್ಲಿ ದೊಡ್ಡ ವ್ಯತ್ಯಾಸಗಳಿವೆ. ಈ ಎರಡು ಸಂಬಂಧಗಳು ಭಿನ್ನವಾಗಿರುತ್ತದೆ. ಇದನ್ನು ತಿಳಿಯದಿದ್ದರೆ ಕೂಡ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಳ್ಳುತ್ತದೆ.

4. ಟಿವಿ ನೋಡಿ ನಿಮ್ಮ ದಾಂಪತ್ಯ ಜೀವನವನ್ನು ಕಲ್ಪನೆ ಮಾಡಿಕೊಳ್ಳಬೇಡಿ. ಏಕೆಂದರೆ ಟಿವಿಗಳಲ್ಲಿ ಬರುವ ಪಾತ್ರಗಳು ಕೇವಲ ಕಲ್ಪಿತವಾಗಿರುತ್ತದೆ. ಈ ಸತ್ಯಾಂಶವನ್ನು ನೀವು ಅರಿತುಕೊಂಡಲ್ಲಿ ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.

Comments are closed.