ರಾಷ್ಟ್ರೀಯ

ಡಿಸೆಂಬರ್‌ನಲ್ಲಿ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಮದುವೆ ! ಹುಡುಗ ಯಾರು ಗೊತ್ತೇ…?

Pinterest LinkedIn Tumblr

ನವದೆಹಲಿ: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ (26) ಅವರು, ಉದ್ಯಮಿ ಅಜಯ್‌ ಪಿರಾಮಲ್‌ ಅವರ ಪುತ್ರ ಆನಂದ್‌ ಅವರನ್ನು ಮದುವೆಯಾಗಲಿದ್ದಾರೆ.

ಇಶಾ ಮತ್ತು ಆನಂದ್‌, ದೀರ್ಘ ಸಮಯದಿಂದ ಸ್ನೇಹಿತರಾಗಿದ್ದಾರೆ. ಎರಡೂ ಕುಟುಂಬಗಳ ಮಧ್ಯೆ ನಾಲ್ಕು ದಶಕಗಳ ಒಡನಾಟ ಇದೆ. ಈ ಮದುವೆ ಡಿಸೆಂಬರ್‌ನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ಪಡೆಯಲು ಕಳಿಸಿದ ಇ–ಮೇಲ್‌ಗೆ ಪಿರಾಮಲ್‌ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಆನಂದ್‌ ಅವರು ಪಿರಾಮಲ್‌ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಇಶಾ, ರಿಲಯನ್ಸ್‌ ಜಿಯೊ ಮತ್ತು ರಿಲಯನ್ಸ್‌ ರಿಟೇಲ್‌ನ ನಿರ್ದೇಶಕ ಮಂಡಳಿಯಲ್ಲಿ ಇದ್ದಾರೆ.

Comments are closed.