ಕರಾವಳಿ

ಸಮಾಜದ ಹಿತ ಕಾಪಾಡ ಬಲ್ಲ ಓರ್ವ ಧೀಮಂತ ನಾಯಕ ಶ್ರೀಕರ್ ಪ್ರಭು : ಶ್ರೀಮತಿ ಶ್ರೀಲತಾ ಗೋಪಾಲಕೃಷ್ಣ

Pinterest LinkedIn Tumblr

ಮಂಗಳೂರು : ಮಂಗಳೂರಿನ ಮಹಿಳೆಯರ ಗೌರವ ರಕ್ಷಣೆ ನನ್ನ ಪ್ರಥಮ ಆದ್ಯತೆ ಮತ್ತು ಇದನ್ನು ನೂರಕ್ಕೆ ನೂರರಷ್ಟು ಜವಾಬ್ದಾರಿಯುತವಾಗಿ ನಾನು ಮುಂದೆ ಶಾಸಕನಾಗಿ ನಿಭಾಯಿಸಲಿದ್ದೇನೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಹೇಳಿದ್ದಾರೆ.

ನಗರದ ಸಿ.ವಿ ನಾಯಕ್ ಹಾಲ್‌ನಲ್ಲಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡ ಮಹಿಳಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾನು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಈ ಸಂದರ್ಭ ಸಾಕಷ್ಟು ಜನರಿಗೆ ನನ್ನ ವೈಯಕ್ತಿಕ ನೆಲೆಯಿಂದ ಸಹಾಯ ಮಾಡಿದ್ದೇನೆ. ಅವರೆಲ್ಲರೂ ನನ್ನನ್ನು ಬೆಂಬಲಿಸುತ್ತಿದ್ದಾರೆ.ನಾನು ಮತದಾರರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ. ಮೊನ್ನೆ ಮೊನ್ನೆ ಬಂದವರಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಮವೇಶದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀಮತಿ ಶ್ರೀಲತಾ ಗೋಪಾಲಕೃಷ್ಣ ಅವರು ಮಾತನಾಡಿ, ಸಮಾಜದ ಹಿತ ಕಾಪಾಡಬಲ್ಲ ಓರ್ವ ನಾಯಕನ ಅಗತ್ಯ ನಮಗಿದೆ. ನಮ್ಮ ಸಮಸೈಗಳಿಗೆ ಪರಿಹಾರ ಕಂಡುಕೊಳ್ಳುವ ಜನಪ್ರತಿನಿದಿ ನಮಗೆ ಬೇಕಿದೆ. ಮಹಿಳೆಯ ಶೋಷಣೆ ನಿಲ್ಲಿಸ ಬೇಕು. ಮಹಿಳೆಯರಿಗೆ ಉತ್ತಮ ಸ್ಥಾನಮಾನ ಕಲ್ಪಿಸುವಂತ ಓರ್ವ ಯೋಗ್ಯ ಜನನಾಯ ನಮಗೆ ಬೇಕು. ಈ ಎಲ್ಲಾ ಗುಣ, ಸಾಮಾರ್ಥ್ಯ ಶ್ರೀಕರ್ ಪ್ರಭು ಅವರಿಗಿದೆ. ಚಿಕ್ಕಂದಿನಿಂದ ಅವರ ಬಗ್ಗೆ ಅವರ ಕೆಲಸ ಕಾರ್ಯಗಳ ಬಗ್ಗೆ ಚೆನ್ನಾಗಿ ಅರಿತಿದ್ದೇನೆ. ಶ್ರೀಕರ್ ಪ್ರಭು ಅವರಂತಹ ಓರ್ವ ಸಭ್ಯ, ನಾಯಕತ್ವಗುಣವಿರುವ ಜನಪ್ರತಿನಿದಿ ನಮಗೆ ಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಶ್ರೀಕರ್ ಅವರನ್ನು ಬೆಂಬಲಿಸುವ ಮೂಲಕ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.

್ಇನ್ನೋರ್ವ ಅತಿಥಿ ಶ್ರೀಮತಿ ಮಂಜುಳಾ ಬಿ, ಮಾತನಾಡಿ, ಅಪತ್ಕಾಲದಲ್ಲಿ ಸಹಾಯಹಸ್ತ ನೀಡುವ ಮೂಲಕ ಜನರ ಕಷ್ಟ,ನೋವುಗಳಿಗೆ ಸ್ಪಂದಿಸುವ ಉತ್ತಮ ಗುಣ ನಡತೆ ಇರುವಂತಹ ವ್ಯಕ್ತಿ ಶ್ರೀಕರ್ ಪ್ರಭು. ಬಹಳ ಹಿಂದೆ ಸ್ವತಹ ನನ್ನ ಮನೆಗೆ ಸಂಬಂದ ಪಟ್ಟಂತಹ ಕಾನೂನು ಸಮಸೈಯನ್ನು ಯಾವೂದೇ ಪ್ರತಿಫಲಾಪೇಕ್ಷೆ ಇಲ್ಲದೇ ಪರಿಹರಿಸಿದಂತಹ ಪ್ರಭು ಅವರಿಗೆ ನಾನು ಅಭಾರಿಯಾಗಿದ್ದೇನೆ. ಓರ್ವ ಜನನಾಯಕನಿಗಿರುವ ಎಲ್ಲಾ ಗುಣಗಳನ್ನು ಹೊಂದಿರುವ ಪ್ರಭು ಅವರಿಗೆ ಮತದಾನ ಮಾಡಲು ಮೊದಲ ಬಾರಿಗೆ ಮತದಾನದ ಅವಕಾಶ ಲಭಿಸಿರುವಂತಹ ನನ್ನ ಮಗಳು ಬೆಳಗಾವಿಯಿಂದ ಬರುವುದಾಗಿ ಹೇಳುತ್ತಿದ್ದಾಳೆ. ಇದು ನನಗೆ ತುಂಬಾ ಹೆಮ್ಮೆಯನ್ನುಂಟು ಮಾಡಿದೆ.ಒಬ್ಬ ಉತ್ತಮ ಪ್ರತಿನಿಧಿಯಾಗಿರುವ ಪ್ರಭು ಅವರನ್ನು ಪ್ರತಿಯೊಬ್ಬರು ಬೆಂಬಲಿಸಬೇಕೆಂದು ಈ ಮೂಲಕ ನಾನು ಮನವಿ ಮಾಡುತ್ತಿದ್ದೇನೆ ಎಂದು ಹೇಳಿದರು.

ಶ್ರೀಕರ ಪ್ರಭು ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದವರು. ಆದರೂ ಅವರನ್ನು ಬಿಜೆಪಿಯಿಂದ ಉಚ್ಛಾಟಿಸಿದ್ದಾರೆ. ಬಿಜೆಪಿಯಿಂದ ಅವರನ್ನು ಉಚ್ಛಾಟಿಸಿದ ಬಳಿಕ ಶ್ರೀಕರ ಪ್ರಭುವನ್ನು ಬಿಜೆಪಿಯ ಬಂಡಾಯ ಅಭ್ಯರ್ಥಿ ಎನ್ನುವ ನೈತಿಕ ಹಕ್ಕು ಬಿಜೆಪಿಯವರಿಗಿಲ್ಲ. ಶ್ರೀಕರ ಪ್ರಭು ಸ್ವತಂತ್ರ ಅಭ್ಯರ್ಥಿ ಎಂದು ಹೇಳಬೇಕಾಗಿದೆ. ಅವರು ಬಿಜೆಪಿಯ ವಿವಿಧ ಹುದ್ದೆಯಲ್ಲಿ ದುಡಿದು ಸಂಸತ್ ಸದಸ್ಯರಾಗುವ ಅರ್ಹತೆಯಿರುವ ವ್ಯಕ್ತಿ ಎಂದು ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ನತ್ತೋರ್ವ ಅತಿಥಿ ಪ್ರಸನ್ನ ರವಿ ತಿಳಿಸಿದರು.

ಸಮಾವೇಶದಲ್ಲಿ ಅತಿಥಿಗಳಾಗಿ ಚಿತ್ರಕಲಾ ಪ್ರಭು, ಗೀತಾ ಪಿ.ಶೆಟ್ಟಿ,ವೀಣಾ ಸುರೇಶ್, ಜ್ಯೋತಿ ಶೆಟ್ಟಿ, ಪ್ರಸನ್ನ ರವಿ, ಸುಲಕ್ಷಣ ಪ್ರಭು, ದಿವ್ಯಶ್ರೀ, ಮಾಯಾನಾಯಕ್, ಉಮಾವತಿ,,ಕೆ.ವಿ.ವಿಜಯ ಪ್ರಭು,ಕೆ.ಪಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶ್ರೀಕರ ಪ್ರಭು ಅಭಿಮಾನಿ ಬಳಗದ ಅಧ್ಯಕ್ಷರಾದ ಕೆ. ಪಿ. ಶೆಟ್ಟಿ ಬೇಡೆಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು.

Comments are closed.