ಯುವಜನರ ವಿಭಾಗ

ನಿಮಗೆ ಇನ್ನು ಲವ್ ಆಗಿಲ್ಲ ಅಂದರೆ ಕಾರಣ ಏನಾಗಿರಬಹುದು ? ಇಲ್ಲಿದೆ ಆ ಕಾರಣಗಳು…

Pinterest LinkedIn Tumblr

ಕೆಲವು ವ್ಯಕ್ತಿಗಳು ಇರುತ್ತಾರೆ. ಅವರು ಸಿಂಗಲ್‌ ಆಗಿದ್ದುಕೊಂಡು ಲೈಫ್‌ನ್ನು ತುಂಬಾನೆ ಎಂಜಾಯ್‌ ಮಾಡುತ್ತಾರೆ. ಅವರು ತಮ್ಮ ಪರ್ಸನಲ್‌ ಬೆಳವಣಿಗೆಯ ಬಗ್ಗೆ ತುಂಬಾನೆ ಕೇರ್‌ ತೆಗೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವು ವ್ಯಕ್ತಿಗಳಿರುತ್ತಾರೆ. ಅವರಿಗೆ ಲವ್‌ ಮಾಡಬೇಕು ಎಂಬ ಮನಸ್ಸಿರುತ್ತದೆ. ಆದರೆ ಲವ್‌ ಆಗೋದೆ ಇಲ್ಲ. ಯಾಕೆ ಹೀಗೆ ಅನ್ನೋದು ನಿಮಗೆ ಗೊತ್ತಾ?

ನಿಮಗಿನ್ನು ಬೆಸ್ಟ್‌ ಅನ್ನುವ ವ್ಯಕ್ತಿ ಸಿಕ್ಕಿಲ್ಲ. ಅಂತವರ ಬರುವಿಕೆಗಾಗಿ ನೀವು ಕಾಯುತ್ತಿರುತ್ತೀರಿ.
ವ್ಯಕ್ತಿಯ ಆಯ್ಕೆಯ ಕುರಿತು ಗೊಂದಲ ಇರುತ್ತದೆ.
ತುಂಬಾನೆ ನೋಡಿ ಪರ್‌ಫೆಕ್ಟ್‌ ಅನಿಸಿರೋರನ್ನು ಆಯ್ಕೆ ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೀರಿ.
ಫೀಲಿಂಗ್ಸ್‌ನಲ್ಲಿ ಬದಲಾವಣೆ ತರಬೇಕು. ನಿಮ್ಮನ್ನು ನೀವು ಸುಧಾರಣೆ ಮಾಡಬೇಕು.
ಕೆಲವೊಮ್ಮೆ ರಿಜೆಕ್ಟ್‌‌ ಆಗುವ ಭಯದಿಂದಲೂ ಸಹ ಲವ್‌ ಆಗೋದಿಲ್ಲ.
ಇನ್ನೂ ಕೆಲವು ಹುಡುಗಿಯರು ಎಂತಹ ಹುಡುಗರನ್ನು ಇಷ್ಟಪಡುತ್ತಾರೆ ಎಂದರೆ, ಆ ಹುಡುಗ ಆಕೆಯ ಕಡೆಗೆ ತಿರುಗಿಯೇ ನೋಡೋದಿಲ್ಲ. ಹೀಗೆ ಆದರೆ ಲವ್‌ ಆಗೋದು ಹೇಗೆ ಅಲ್ವಾ?
ಇತರರಿಂದ ನೀವು ಹೆಚ್ಚಾಗಿ ಸಲಹೆಗಳನ್ನು ಪಡೆಯುತ್ತಿರುತ್ತೀರಿ. ಇದುವೆ ನಿಮ್ಮ ಜೀವನದಲ್ಲಿ ಮುಳುವಾಗುತ್ತದೆ.
ಅಮ್ಮ – ಅಪ್ಪನ ಮಾತನ್ನ ವಿರೋಧಿಸಲಾಗದ ಭಯದಲ್ಲಿ ಲವ್‌ ಮಾಡೋದಿಲ್ಲ.
ಕೆಲವೊಮ್ಮೆ ಹೈಜಿನ್‌ ಅಥವಾ ಡ್ರೆಸ್ಸಿಂಗ್‌ ವಿಷಯದಿಂದಲೇ ನಿಮ್ಮನ್ನು ಯಾರು ಪ್ರೀತಿ ಮಾಡಲು ಮುಂದೆ ಬರೋದಿಲ್ಲ.
ನಾನು ಪರ್‌ಫೆಕ್ಟ್‌ ಆಗಿರಬೇಕೆಂದು ತುಂಬಾ ಪ್ರಯತ್ನಿಸುವುದರಿಂದ ಕೂಡ ಲವ್‌ ಮಾಡೋದಿಲ್ಲ.
ಯಾವುದೆ ವಿಷಯ ಸೋಶಿಯಲ್ ಆಗೋದು ನಿಮಗೆ ಇಷ್ಟವಿಲ್ಲದೆ ಇರುವ ಕಾರಣದಿಂದಲೂ ಲವ್‌ ಆಗಿರದೆ ಇರಬಹುದು.
ನಿಮ್ಮ ಆ್ಯಟಿಟ್ಯೂಡ್‌ ಸರಿಯಾಗಿರದೆ ಇರಬಹುದು.
ಜೀವನದಲ್ಲಿ ಸರಿಯಾದ ರೀತಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ರೂಪದಲ್ಲಿ ಸೆಟಲ್‌ ಆಗಿರದೆ ಇದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮನ್ನು ಲವ್‌ ಮಾಡಲು ಯಾರೂ ಮುಂದೆ ಬರೋದಿಲ್ಲ.
ನೀವು ನಿಮ್ಮ ನ್ಯಾಚುರಲ್‌ ಬ್ಯೂಟಿಯನ್ನು ಅಡಗಿಸಿಡುತ್ತೀರಿ. ಆದರೆ ಕೆಲವು ವ್ಯಕ್ತಿಗಳಿಗೆ ನ್ಯಾಚುರಲ್‌ ಬ್ಯೂಟಿ ಇಷ್ಟವಿರುತ್ತದೆ.

Comments are closed.