ಯುವಜನರ ವಿಭಾಗ

ಪ್ರತಿಯೊಂದು ಹುಡುಗಿಯರಿಗೂ ಜೀವನದಲ್ಲಿ ಬರುತ್ತೆ ಸೀಕ್ರೆಟ್‌ ಕ್ರಶ್‌ಗಳು…!

Pinterest LinkedIn Tumblr

ಕೆಲವು ಹುಡುಗಿಯರು ಲವ್‌ ಮಾಡದೇ ಇರಬಹುದು… ಅಥವಾ ಲವ್‌ ಮಾಡಲು ಇಷ್ಟವಿಲ್ಲದೇ ಇರಬಹುದು. ಹಾಗಂದ ಮಾತ್ರಕ್ಕೆ ಅವರಿಗೆ ಕ್ರಶ್‌ ಆಗಲ್ಲ ಎಂದು ಏನು ಇಲ್ಲ. ಪ್ರತಿಯೊಬ್ಬ ಹುಡುಗಿಯರಿಗೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಕ್ರಶ್‌ ಆಗಿಯೇ ಆಗುತ್ತದೆ. ಅದು ಸೀನಿಯರ್‌ ಸ್ಟೂಡೆಂಟ್‌ ಇರಬಹುದು, ಟೀಚರ್‌, ಬಾಸ್‌ ಯಾರೇ ಇರಬಹುದು ಒಂದು ರೀತಿಯ ಆಕರ್ಷಣೆ ಉಂಟಾಗುತ್ತದೆ.

ಕ್ರಶ್‌ ಎಂದರೆ ಅದು ಪ್ರೀತಿಯೇ ಆಗಬೇಕು ಎಂದೇನಿಲ್ಲ. ಆತ ನಿಮ್ಮ ಎದುರಿಗೆ ಬಂದಾಗ ಮಾತ್ರ ನಿಮಗೆ ಆತ ನೆನಪಾಗುತ್ತಾನೆ. ಆತನ ಒಂದು ಕಣ್ಣೋಟಕ್ಕೆ ನೀವು ತಡವರಿಸುತ್ತೀರಿ.. ಆತ ಈಗಾಗಲೇ ಎಂಗೇಜ್‌ ಆಗಿರಬಹುದು ಅಥವಾ ಅವನಿಗೆ ಮದುವೆಯೇ ಆಗಿರಬಹುದು. ಇದ್ಯಾವುದು ನಿಮಗೆ ಬೇಕಾಗಿರಲ್ಲ. ಆತ ಒಂದು ಬಾರಿ ಸ್ಮೈಲ್‌ ಕೊಟ್ಟರೆ ಅಷ್ಟೇ ಸಾಕು. ಇದನ್ನೆ ಕ್ರಶ್‌ ಎಂದು ಹೇಳುತ್ತೇವೆ.

ಬಾಸ್ : ನೀವು ಕೆಲಸ ಮಾಡುತ್ತಿರುವ ಕಚೇರಿಯ ಬಾಸ್‌ ಸ್ಮೈಲಿಂಗ್‌, ಹಾಟ್‌ ಆ್ಯಂಡ್‌ ಫಿಟ್‌ ಆಗಿದ್ದರೆ ಯಾರು ತಾನೆ ಅವರಿಗೆ ಫಿದಾ ಆಗೋದಿಲ್ಲ ಹೇಳಿ. ನ್ಯಾಚುರಲ್‌ ಆಗಿಯೇ ಅಂತಹ ಬಾಸ್‌ ಮೇಲೆ ಕ್ರಶ್‌ ಆಗಿ ಬಿಡುತ್ತದೆ. ಈ ರೀತಿಯಾಗಿದ್ದರೆ ನಿಮಗೆ ಕೆಲಸ ಮಾಡಲು ಮೋಟಿವೇಟ್‌ ಆಗುತ್ತದೆ. ಒಂದು ವೇಳೆ ಅವರು ಸಹ ನಿಮ್ಮನ್ನು ನೋಟಿಸ್‌ ಮಾಡುತ್ತಿದ್ದಾರೆ ಅಂದ್ರೆ ವಾವ್‌…. ಇನ್ನೇನೂ ಬೇಕು ಅಲ್ವಾ..?

ಸಹೋದರನ ಫ್ರೆಂಡ್‌ : ಇದು ಒಂದು ತರಹದ ಬ್ರದರ್‌ ಕ್ರಶ್. ಅಂದರೆ ಅಣ್ಣನ ಜೊತೆ ಯಾವಾಗಲೂ ಮನೆಗೆ ಬರೋವಂತಹ ಆ ಫ್ರೆಂಡ್‌ ಹೆಚ್ಚಾಗಿ ಎಲ್ಲಾ ಹುಡುಗಿಯರ ಲೈಫ್‌ನಲ್ಲಿ ಬಂದೇ ಬರುತ್ತಾರೆ. ಅಣ್ಣನ ಜೊತೆ ಇರುವಾಗ ಅವರ ಕಂಪನಿಯೂ ನಿಮಗೆ ಹೆಚ್ಚು ಖುಶಿ ಕೊಡುತ್ತದೆ.

ಟೀಚರ್‌ : ಮನೆ ಬಿಟ್ಟರೆ ನವು ಹೆಚ್ಚಾಗಿ ಟೈಮ್‌ ಕಳೆಯೋದು ಎಂದರೆ ಅದು ಸ್ಕೂಲ್‌ ಅಥವಾ ಕಾಲೇಜಿನಲ್ಲಿ ಅಲ್ವಾ..? ಕಾಲೇಜಿಗೆ ಆಗ ತಾನೆ ಬಂದ ಹೊಸ ಯಂಗ್‌ ಟೀಚರ್‌ ನಿಮಗೆ ಇಷ್ಟವಾಗಿ ಬಿಡುತ್ತಾರೆ. ಅವರ ಸಲಹೆ, ಅವರ ಪ್ರೀತಿ ಎಲ್ಲವೂ ನಿಮ್ಮನ್ನು ಅವರೆಡೆಗೆ ಆಕರ್ಷಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇದು ಲೈಫ್‌ನ್ನು ಹಾಳು ಮಾಡುತ್ತದೆ. ಯಾಕೆಂದರೆ ಅವರ ಕಡೆಗೆ ಗಮನ ಸೆಳೆದರೆ ನಂತರ ನಿಮಗೆ ಪಾಠದ ಕಡೆ ಗಮನ ಹೋಗದೇ ಇರಬಹುದು.

ನಿಮ್ಮ ಬೆಸ್ಟ್ ಫ್ರೆಂಡ್‌ನ ಬಾಯ್‌ಫ್ರೆಂಡ್ : ನಿಮ್ಮ ಬೆಸ್ಟ್‌ ಫ್ರೆಂಡ್‌ನ ರಿಲೇಶನ್‌ಶಿಪ್‌ನಲ್ಲಿ ನೀವು ಮೂರನೇ ಚಕ್ರವಾಗಿ ಕೆಲಸ ಮಾಡುತ್ತೀರಿ. ಆಕೆ ತನ್ನ ಬಾಯ್‌ಫ್ರೆಂಡ್‌ ಬಗ್ಗೆ ಎಲ್ಲಾ ವಿಷಯಗಳನ್ನೂ ಸಹ ನಿಮ್ಮ ಬಳಿ ಹಂಚಿಕೊಳ್ಳುತ್ತಾಳೆ. ಆತ ಅವಳಿಗೆ ತೋರಿಸುವ ಪ್ರೀತಿ, ಆತನ ಗುಣಗಳನ್ನೆಲ್ಲಾ ನೀವು ಸೀಕ್ರೆಟ್‌ ಆಗಿ ಇಷ್ಟಪಡಲು ಆರಂಭಿಸುತ್ತೀರಿ. ಆತನು ನಿಮ್ಮ ಕ್ರಶ್‌ ಆಗಿ ಬಿಡುತ್ತಾನೆ. ಆದರೆ ಇದನ್ನೆಲ್ಲಾ ನಿಮ್ಮ ಬೆಸ್ಟ್‌ ಫ್ರೆಂಡ್‌ ಬಳಿ ಹೇಳೋ ಹಾಗಿಲ್ಲ. ಆದರೆ ನಿಮ್ಮ ಈ ಕ್ರಶ್‌ ಪ್ರೀತಿಗೆ ತಿರುಗಿ ನಿಮ್ಮ ಬೆಸ್ಟ್ ಫ್ರೆಂಡ್‌ನ ಸಂಬಂಧ ಹಾಳು ಮಾಡಲು ಬಯಸಿದ್ದರೆ ಅದು ತಪ್ಪಾಗುತ್ತದೆ.

ದೂರದ ಸಂಬಂಧಿ : ಫ್ಯಾಮಿಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭೇಟಿಯಾದ ಯಾರೋ ದೂರದ ಸಂಬಂಧಿ. ಯಾವುದೋ ಒಂದೋ ಎರಡು ಸಸಂದರ್ಭಗಳಲ್ಲಿ ಮಾತ್ರ ಅವರನ್ನು ಭೇಟಿಯಾಗಲು ಸಾಧ್ಯ. ಆವಾಗ ಅಲ್ಲಿ ಅವನ ಇರುವಿಕೆಗಾಗಿ ನಿಮ್ಮ ತುಂಟ ಕಣ್ಣುಗಳು ಹುಡುಕಾಟ ಆರಂಭಿಸುತ್ತದೆ.

ಸಹ ಪ್ರಯಾಣಿಕ : ಎಲ್ಲೋ ದೂರದ ಸ್ಥಳಕ್ಕೆ ಪ್ರಯಾಣ ಮಾಡುವ ಸಂದರ್ಭ ನಿಮ್ಮ ಬಳಿ ಬಂದು ಕುಳಿತುಕೊಳ್ಳುವ ಸಹ ಪ್ರಯಾಣಿಕ ಹ್ಯಾಂಡ್‌ಸಮ್‌ ಆಗಿದ್ದು ನಿಮಗೆ ಏನಾದರೊಂದು ಸಹಾಯ ಮಾಡುತ್ತಿದ್ದರೆ ನಿಮಗೆ ಹಾಯ್‌ ಹಾಯ್‌ ಎನಿಸದೇ ಇರದು. ಆ ಜರ್ನಿ ನಿಮ್ಮ ಜೀವನದ ಸ್ನರಣೀಯ ಜರ್ನಿಯಾಗಲೂಬಹುದು.

Comments are closed.