ಕರ್ನಾಟಕ

‘777 ಚಾರ್ಲಿ’ ವೀಕ್ಷಿಸಿದ ಸಿಎಂ ಬೊಮ್ಮಾಯಿ; ಸತ್ತ ತನ್ನ ಶ್ವಾನವನ್ನು ನೆನೆದು ಭಾವುಕರಾದ ಮುಖ್ಯಮಂತ್ರಿ..!

Pinterest LinkedIn Tumblr

ಬೆಂಗಳೂರು: ಭಾರೀ ಪ್ರಶಂಸೆಗೆ ಪಾತ್ರವಾಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ 777 ಚಾರ್ಲಿ ಚಿತ್ರವನ್ನ ಮುಖ್ಯಮಂತ್ರಿ ಬಸವರಾಜ್ ಎಸ್ ಬೊಮ್ಮಾಯಿ ಅವರು ವೀಕ್ಷಿಸಿದ್ದಾರೆ.

ನಗರದ ಒರಾಯನ್ ಮಾಲ್ ಪಿವಿಆರ್ ನಲ್ಲಿ ವಿಶೇಷ ಪ್ರದರ್ಶಶದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ, ಬಿ ಸಿ ನಾಗೇಶ, ಉಡುಪಿ ಶಾಸಕ ರಘುಪತಿ ಭಟ್, ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಚಿತ್ರದ ನಿರ್ದೇಶಕ ಕಿರಣ್ ರಾಜ್, ನಾಯಕ ನಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇನ್ನು ಸಿನಿಮಾ ಮುಗಿದ ನಂತರ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ , ತುಂಬಾ ಭಾವುಕರಾಗಿ ಸಿನಿಮಾವನ್ನು ಹೊಗಳಿದ್ದಾರೆ. ನಾನು ಶ್ವಾನಪ್ರಿಯ. ಈ ಸಿನಿಮಾ ನೋಡಿದಾಗ ಸತ್ತ ನನ್ನ ನಾಯಿ ನೆನಪಾಯಿತು. ಈಗ ದಿಯಾ ಎನ್ನುವ ನಾಯಿ ಸಾಕುತ್ತಿದ್ದೇನೆ. ಚಾರ್ಲಿ ರೀತಿ ದಿಯಾ ನಾಯಿ ಮನೆಗೆ ಬಂದಾಗ ತಬ್ಬಿಕೊಳ್ಳುತ್ತೆ ಎಂದು ಹೇಳಿದ್ದಾರೆ.

ಚಾರ್ಲಿ ಪಾತ್ರದಲ್ಲಿ ನಾಯಿಯೊಂದು ಕಾಣಿಸಿಕೊಂಡಿದ್ದು ಉತ್ತಮ ಕಥೆ ಹೊಂದಿರುವ ಸಿನಿಮಾ ಅತ್ಯುತ್ತಮ ಸಂದೇಶ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹ ಶ್ವಾನಪ್ರಿಯರಾಗಿದ್ದು ಗೃಹಸಚಿವರಾಗಿದ್ದಾಗ ಅವರು ಸಾಕಿದ್ದ ನಾಯಿ ಸನ್ನಿ ಸಾವನ್ನಪ್ಪಿದಾಗ ಭಾವುಕರಾಗಿದ್ದರು.

Comments are closed.