ಕರಾವಳಿ

ಆಗಸದಲ್ಲಿ ಸಂಜೆ ವೇಳೆ ಕೌತುಕ – ಸರತಿಸಾಲಿನಲ್ಲಿ ಗೋಚರಿಸಿದ ಬೆಳಕಿನ ಸರಮಾಲೆಗಳು..!

Pinterest LinkedIn Tumblr

ಬೆಂಗಳೂರು: ಕರ್ನಾಟಕದ ಹಲವೆಡೆ ಸಂಜೆ 7.30ರ ಸುಮಾರಿನಲ್ಲಿ ಆಗಸದಲ್ಲಿ ನಕ್ಷತ್ರಗಳ ಸರಮಾಲೆಗಳಂತೆ ತೇಲಿಹೋಗುವ ವಿದ್ಯಮಾನ ಗೋಚರಿಸಿದೆ. ಅದನ್ನು ಗಮನಿಸಿದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಾವು ಕಂಡಿದ್ದನ್ನು ಹಂಚಿಕೊಂಡಿದ್ದು ಹೆಚ್ಚಿನ ವಿವರಗಳನ್ನು ಕೇಳಿದ್ದಾರೆ.

ಬಾಹ್ಯಾಕಾಶದಲ್ಲಿ ಏಕಾಏಕಿ ಬೆಳಕಿನ ಸಾಲು ಹೀಗೆ ಹರಿದು ಹೋಗಿರುವುದು ನೀಡಿದ ಜನರಿಗೆ ಇದು ಹೊಸ ಅನುಭವ ಎನಿಸಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಈ ಕೌತುಕ ಕಂಡಿರುವುದಾಗಿ ಜನರು ಹೇಳಿಕೊಂಡಿದ್ದಾರೆ. ಅನೇಕರು ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಏಕಕಾಲಕ್ಕೆ 50 ಸಣ್ಣಸಣ್ಣ ದೀಪಗಳು ಕಂಡು ಮಾಯವಾಗಿವೆ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಬಾಹ್ಯಾಕಾಶದಲ್ಲಿ ಹಾದು ಹೋಗಿರುವುದು ಏನು ಎನ್ನುವುದನ್ನು ವಿಜ್ಞಾನಿಗಳು ಇನ್ನೂ ಸ್ಪಷ್ಟಪಡಿಸಬೇಕಿದೆ.

ಉಡಿಪಿ, ಉತ್ತರ ಕನ್ನಡದ ಕಡಲ ತೀರ ಮತ್ತು ಶಿವಮೊಗ್ಗ ಮೊದಲಾದ ಪ್ರದೇಶದಲ್ಲಿ ಗೋಚರಿಸಿದ ಬೆಳಕಿನ ಸರಮಾಲೆಯು ವಾಸ್ತವವಾಗಿ ಉಪಗ್ರಹಗಳ ಸರಣಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಉಪಗ್ರಹಗಳ ಮೂಲಕ ಇಂಟರ್ನೆಟ್‌ ಸೇವೆಯನ್ನು ಒದಗಿಸುವ ಎಲೋನ್ ಮಸ್ಕ್ ಒಡೆತನದ ಕಂಪೆನಿ ಕ್ಯಾಲಿಫೋರ್ನಿಯಾದಿಂದ 52 ಸ್ಟಾರ್‌ಲಿಂಕ್ ಉಪಗ್ರಹಗಳನ್ನು ಶನಿವಾರ ಉಡಾವಣೆ ಮಾಡಿತ್ತು.ಈ ರಾಕೆಟ್​ಗಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ.

Comments are closed.