ಕರಾವಳಿ

ಮುಸ್ಲಿಂ ಕುಟುಂಬದಿಂದ ಕೋಟ ಅಮೃತೇಶ್ವರಿ ದೇವಸ್ಥಾನದಲ್ಲಿ ತುಲಾಭಾರ ಸೇವೆ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕೋಟದ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬವೊಂದು ತುಲಾಭಾರ ಸೇವೆ ಸಲ್ಲಿಸಿದ ವಿಡಿಯೋ ವೈರಲಾಗಿದ್ದು ಬಾರೀ ಸುದ್ದಿಯಾಗಿದೆ.

ಹಲವುಮಕ್ಕಳ ತಾಯಿ ಎಂದು ಪ್ರಖ್ಯಾತಿಯಾದ ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮೂಲತಃ ಕೋಟದವರಾದ ಪ್ರಸ್ತುತ ಉಡುಪಿ ವಾಸಿಗಳಾದ ಮುಸ್ಲಿಂ ಕುಟುಂಬದ ಮಹಿಳೆ ಮಗುವಿನೊಂದಿಗೆ ಆಗಮಿಸಿ ತುಲಾಭಾರ ಸೇವೆ ಮಾಡಿಸುವ ಮೂಲಕ ಹರಕೆ ಸಲ್ಲಿಸಿದ್ದಾರೆ.

ಶ್ರೀ ಅಮೃತೇಶ್ವರಿ ದೇವಸ್ಥಾನದಲ್ಲಿ ಮುಸ್ಲಿಂ ಕುಟುಂಬ ಹರಕೆ ಹೊತ್ತಿದ್ದು, ಸದ್ಯ ಹರಕೆ ತೀರಿಸುವ ಸಲುವಾಗಿ ದೇವಸ್ಥಾನದಲ್ಲಿ ತುಲಾಭಾರ ಸೇವೆ ನೀಡಿದ್ದಾರೆ. ಆ ವಿಡಿಯೋವನ್ನು ಯಾರೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಧಾರ್ಮಿಕ ಸೌಹಾರ್ಧತೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.