ಕರಾವಳಿ

ಹಂಪನಕಟ್ಟೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ 4.80 ಕೋಟಿ ಅನುದಾನ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು ನಗರ ದಕ್ಷಿಣದ ಹಂಪನಕಟ್ಟೆ ಸರಕಾರಿ ಅಭ್ಯಾಸಿ ಪ್ರೌಢ ಶಾಲೆಯ ಆವರಣದಲ್ಲಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ 4.80 ಕೋಟಿ ರೂಪಾಯಿ ಅನುದಾನಕ್ಕೆ ಸರಕಾರದ ಅನುಮೋದನೆ ದೊರೆತಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಹಂಪನಕಟ್ಟೆ ಅಭ್ಯಾಸಿ ಪ್ರೌಢಶಾಲೆಯ ಆವರಣದಲ್ಲಿ ಕಾಲೇಜಿನ ನೂತನ ಕಟ್ಟಡದ ಬಹುಕಾಲದ ಬೇಡಿಕೆಗೆ ಸರಕಾರ 4.80 ಕೋಟಿ ಅನುದಾನಕ್ಕೆ ಪ್ರಾಥಮಿಕ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ. ಇದರಲ್ಲಿ 1. 02 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ತಕ್ಷಣವೇ ಈ ಕಾಮಗಾರಿಗೆ ಶಿಲಾನ್ಯಾಸ ಮಾಡಲಾಗುವುದು.

ಶಾಲೆ ಹಾಗೂ ಕಾಲೇಜುಗಳನ್ನು ಒಟ್ಟಾಗಿ 3 ಅಂತಸ್ತಿನಲ್ಲಿ ಕಟ್ಟುವ ಯೋಜನೆ ರೂಪಿಸಲಾಗಿದೆ. ಇನ್ನುಳಿದ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಹಂಪನಕಟ್ಟೆಯಲ್ಲಿ ಸರಕಾರಿ ಕಾಲೇಜು ಪ್ರಾರಂಭವಾಗುವುದರಿಂದ ಅನೇಕ ಬಡ ವಿಧ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬೇಡಿಕೆಯಂತೆ ಅನುದಾನ ಒದಗಿಸಿದ ಶಿಕ್ಷಣ ಸಚಿವರಾದ ಶ್ರೀ ಸುರೇಶ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿ ಕಾಮಾತ್ ಹೇಳಿದ್ದಾರೆ.

Comments are closed.