ಕರಾವಳಿ

ಮರಾಠಿ ನ್ಯೂಸ್ ಚಾನೆಲ್ ಆಯೋಜಿಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡತಿ ಅವಿಷ್ಕ್ ಎನ್ ಪುತ್ರನ್‌ರಿಗೆ ಪ್ರಥಮ ಸ್ಥಾನ

Pinterest LinkedIn Tumblr

ಮುಂಬಯಿ : ಮುಂಬಯಿಯ ಮರಾಠಿ ಲೋಕಶಾಯಿ ನ್ಯೂಸ್ ಚಾನೆಲ್ ಆಯೋಜಿಸಿದ ಕೊರೋನಾ – 19 ಚಿತ್ರಕಲಾ ಸ್ಪರ್ಧೆಯಲ್ಲಿ ಕನ್ನಡತಿ ಮುಂಬಯಿ ವರ್ಲಿಯ ಎಂ. ಎಂ. ಬಿ. ಜಿ. ಇ. ಎಂ. ಶಾಲೆಯ 9 ನೇ ತರಗತಿಯ ವಿದ್ಯಾರ್ಥಿನಿ ಅವಿಷ್ಕ್ ಎನ್ ಪುತ್ರನ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿರುವರು.

ಈಕೆಯನ್ನು ವರ್ಲಿ‍ಯ ಶಾಸಕ ಸುನಿಲ್ ಸಿಂದೆ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಮುಂಬಯಿಯ ವರ್ಲಿಯ ಕಾರ್ಕಳದ ನೆಲ್ಲಿ ಕಾರ್ ನ ನಾರಾಯಣ ಬಿ ಪುತ್ರನ್ ಮತ್ತು ವರ್ಲಿ ಅಪ್ಪಾಜಿ ಬಿಡು ಫೌಂಡೇಶನ್ನ ಮಹಿಳಾ ವಿಭಾಗದ ಕಾರ್ಯದರ್ಶಿ ಸುಜಾತಾ ಎನ್ ಪುತ್ರನ್ ದಂಪತಿಯ ಸುಪುತ್ರಿ ಅವಿಷ್ಕ್ ಎನ್ ಪುತ್ರನ್ ಬಾಲ್ಯದಿಂದಲೇ ಓದಿನ ಜೊತೆ ಚಿತ್ರಕಲೆ, ನೃತ್ಯ, ಡಿಸೈನಿಂಗ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನನ್ನು ಆಸಕ್ತಿಯಿಂದ ತೊಡಗಿಸಿಕೊಂಡಿರುವರು. ಈಕೆಯ ಸಾಧನೆಗೆ ಸಹೋದರ ಆಕಾಶ್ ಪುತ್ರನ್ ಸಹಕರಿಸುತ್ತಾ ಬಂದವರು.

ಅವಿಷ್ಕ್ಎನ್ ಪುತ್ರನ್ ಅವರಿಗೆ ಅಪ್ಪಾಜಿ ಫೌಂಡೇಶನ್ ಸ್ಥಾಪಕ ರಮೇಶ್ ಗುರುಸ್ವಾಮಿ ಮತ್ತು ಟ್ರಸ್ಟಿಗಳು. ಪದಾಧಿಕಾರಿಗಳು. ಮಹಿಳಾ ವಿಭಾಗದ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿರುವರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.