ಕರಾವಳಿ

ಸಾ.ಶ. 1113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ಅಪರೂಪದ ವಿಗ್ರಹ ನಾಶಗೈದ ದುಷ್ಕರ್ಮಿಗಳು

Pinterest LinkedIn Tumblr

ರಾಜ್ಯದ ದೊಡ್ಡ ಪರಂಪರೆ, ಇತಿಹಾಸ ನಾಶವಾಗಿದೆ. ಹೊಯ್ಸಳರ ವಿಷ್ಣುವರ್ಧನನ ಕಾಲದ ಸಾ.ಶ. 1113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯದ ದಕ್ಷಿಣ ಗರ್ಭಗೃಹದಲ್ಲಿದ್ದ ಮಹಾಕಾಳಿ ಅಥವಾ ದಕ್ಷಿಣ ಭದ್ರಕಾಲಿ ಅಮ್ಮನವರ ವಿಗ್ರಹವನ್ನು ದುಷ್ಕರ್ಮಿಗಳು ತಡರಾತ್ರಿ ಒಡೆದು ಹಾಕಿದ್ದಾರೆ.

ಇಂತಹ ಪರಮ‌ನೀಚ ಕೃತ್ಯಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗಳಿಂದ ದಂಡಿಸಬೇಕಿದೆ. ಇಂತಹ ಒಂದು ಭದ್ರಕಾಳಿಯ ವಿಗ್ರಹ ಅಪರೂಪದಲ್ಲಿ ಅಪರೂಪವಾಗಿತ್ತು. ಇದರ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( ASI) ಇದಕ್ಕೆ ಉತ್ತರಿಸಿ, ಜವಾಬು ನೀಡಬೇಕಿದೆ.

ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳಬೇಕಿದೆ. ಸಾಲದ್ದಕ್ಕೆ ಪರಂಪರೆಯ ಸಪ್ತಾಹವನ್ನು ಆಚರಿಸುತ್ತಿರುವ ಈ ವಾರದಲ್ಲಿ ಇದು ರಾಜ್ಯಕ್ಕೆ, ಪರಂಪರೆಗೆ ಆದ ದೊಡ್ಡ ನಷ್ಟವಾಗಿದೆ ಎಂದು ಡಾ. ಶಲ್ವಪ್ಪಿಳ್ಳೈ ಅಯ್ಯಂಗಾರ್ ಎಂಬವರು ಅತ್ಯಂತ ದು:ಖದಿಂದ ತಮ್ಮ ಖೇದ ವ್ಯಕ್ತಪಡಿಸಿದ್ದಾರೆ.

Comments are closed.