ಕರಾವಳಿ

ನಿಮಗೆ “ಸತ್ತಕೊನೆ” ನೋಡಬೇಕೆ? ಕೂಡಲೇ ಯೂಟ್ಯೂಬ್ ಓಪನ್ ಮಾಡಿ

Pinterest LinkedIn Tumblr

ಮಂಗಳೂರು : ಗ್ಲಾಮರ್ ವ್ಯೂವ್ ಪ್ರೊಡಕ್ಷನ್ಸ್ ಮತ್ತು ಐನ್ ಕ್ರಿಯೇಷನ್ಸ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬಹು ನಿರೀಕ್ಷಿತ ‘ ಸತ್ತಕೊನೆ ‘ ಕಿರುಚಿತ್ರ ಮಂಗಳೂರು ಮಿರರ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ.

ಫಾರ್ಚೂನ್ ಸೇಫ್ಟೀ ಗ್ಲಾಸ್ ಸಂಸ್ಥೆಯ ಸುರೇಶ್ ನಾಯ್ಕ್ ಚಿತ್ರವನ್ನು ಬಿಡುಗಡೆಗೊಳಿಸಿದರು. ಪಡುಬಿದ್ರೆಯಲ್ಲಿರುವ ಸಂಸ್ಥೆಯ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ‘ಸತ್ತಕೊನೆ’ ಕಿರುಚಿತ್ರ ತಂಡವೂ ಉಪಸ್ಥಿತಿಯಿತ್ತು.

ಚಿತ್ರದ ಕುರಿತು ಅನಿಸಿಕೆ ವ್ಯಕ್ತಪಡಿಸಿದ ಸುರೇಶ್ ನಾಯ್ಕ್ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಕೆಲಸ ಈ ಕಿರುಚಿತ್ರದ ಮೂಲಕ ನಡೆದಿದೆ.

ಹಲವು ಚಿತ್ರ ದಿಗ್ಗಜರ ಹಾಗೂ ನಿರ್ಮಾಪಕರ ಮೆಚ್ಚುಗೆಗೆ ಪಾತ್ರವಾಗಿರುವ ಈ ಕಿರುಚಿತ್ರ ಕ್ಲಬ್ಬಿ ಆನ್ ಲೈನ್ ಮಿನಿ ಮೂವಿ ಫೆಸ್ಟಿವಲ್, ಕೋಲ್ಹಾಪುರ್ ಫಿಲ್ಮ್ ಫೆಸ್ಟಿವಲ್ ಹಾಗೂ ಡಿ.ಡಿ. ಚಂದನದಲ್ಲಿ ಪ್ರದರ್ಶನ ಕಂಡಿದೆ.

ಹಾಗೂ ಕರ್ನಾಟಕ ರಾಜ್ಯ ಸರಕಾರದ ಕಿರುಚಿತ್ರ ಪ್ರಶಸ್ತಿಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಸಂತಸದ ವಿಚಾರ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸಮಾರಂಭದಲ್ಲಿ ಕಿರುಚಿತ್ರದ ನಾಯಕಿ, ಒಂದು ಮೊಟ್ಟೆ ಕಥೆ ಖ್ಯಾತಿಯ ಶೈಲಶ್ರೀ ಮುಲ್ಕಿ, ಚಿತ್ರ ನಿರ್ದೇಶಕ ಯಶ್ ರಾಜ್, ಡಿ.ಒ.ಪಿ ಹಾಗೂ ಸಂಕಲನಕಾರ ಹರ್ಷಿತ್ ಬಲ್ಲಾಳ್, ಕಥೆ, ಸಂಭಾಷಣೆ,ಸಾಹಿತ್ಯ ಬರೆದಿರುವ ಸಂದೇಶ್ ಬಿಜೈ, ಸಮನಾ ಸುರೇಶ್, ಧನುಷ, ದಿಶಾ, ಉಡುಪಿ ಅಮಿನ್ ಬೇರಿಂಗ್ ಕಂಪನಿಯ ಲಕ್ಷ್ಮಣ್. ಬಿ. ಅಮಿನ್, ಗಣೇಶ್ ರೇಡಿಯೇಟರ್ಸ್ ಮಾಲಕ ಕರುಣಾಕರ್, ಪ್ರಿನ್ಸ್ ಹೇರ್ ಆರ್ಟ್ ನ ರಮೇಶ್ ಸುವರ್ಣ, ಅಶೋಕ್ ಬೈಲೂರು ಮೊದಲಾದವರು ಉಪಸ್ಥಿತರಿದ್ದರು.

Comments are closed.