ಕರಾವಳಿ

ಹತ್ರಾಸ್‍ ಘಟನೆ ಬಗ್ಗೆ ಬೊಬ್ಬೆ ಹಾಕಿದವರಿಗೆ ಮತಾಂತರಕ್ಕೆ ಒಪ್ಪದ್ದಕ್ಕೆ ನಡುರಸ್ತೆಯಲ್ಲಿ ಹತ್ಯೆಗೀಡಾದ ನಿಖಿತಾ ಕೂಗು ಕೇಳಿಸಲಿಲ್ಲವೇ?

Pinterest LinkedIn Tumblr

__ ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಜೊತೆಗೆ ಕಾಂಗ್ರೆಸ್ ಸೇರಿದಂತೆ ಹಲವಾರು ಸಂಘಟನೆಗಳು ಹತ್ರಾಸ್‍ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು.

ರಾಜ್ಯದ ವಿವಿದೆಡೆಗಳಲ್ಲಿ ಕಾಂಗ್ರೆಸ್ ಸಮಿತಿ ಪ್ರತಿಭಟನೆ ನಡೆಸಿ, ಯುವತಿಗೆ ಶ್ರದ್ಧಾಂಜಲಿ ಅರ್ಪಿಸುವ ಜೊತೆಗೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ ಘಟನೆ ನಡೆದ ಬಳಿಕ ಹತ್ರಾಸ್‍ನಲ್ಲಿ ಹತ್ಯೆಗೀಡಾದ ಯುವತಿಯನ್ನು ಅಕೆಯ ಸಹೋದರನೇ ಕೊಲೆ ಮಾಡಿಸಿದ್ದು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿತ್ತು.

ಈ ವಿಷಯ ಈಗ ಬರೆಯಲು ಕಾರಣ, ಕಳೆದ ಸೋಮವಾರ ಕಾಲೇಜಿನಿಂದ ಹೊರಕ್ಕೆ ಬರುತ್ತಿದ್ದ ಯುವತಿ ಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್​ನಲ್ಲಿ ನಡೆದಿತ್ತು. ಇದರ ಭಯಾನಕ ವಿಡಿಯೋ ಕೂಡ ವೈರಲ್​ ಆಗಿತ್ತು.

https://twitter.com/i/status/1320926170716663808

ಪರೀಕ್ಷೆ ಮುಗಿಸಿ ಕಾಲೇಜಿನಿಂದ ಹೊರಬರುತ್ತಿದ್ದ ನಿಖಿತಾ ತೋಮರ್ ಎಂಬ 21 ವರ್ಷದ ಯುವತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.ಯುವತಿಯ ಕಾಲೇಜಿನ ಹೊರಗಡೆ ವಾಹನದಲ್ಲಿ ಬಂದಿದ್ದ ಆರೋಪಿ ಆಕೆಯನ್ನು ಬಲವಂತಾಗಿ ಕಾರೊಳಗೆ ಹಾಕಿ ಅಪಹರಿಸಲು ಯತ್ನಿಸಿದ್ದಾನೆ.

ಈ ವೇಳೆ ಯುವತಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆರೋಪಿಗೆ ಮತ್ತೊಬ್ಬ ಸಾಥ್ ನೀಡಿದ್ದು, ಯುವತಿ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿಗಳು ಯುವತಿ ಮೇಲೆ ಗುಂಡು ಹಾರಿಸಿ ವಾಹನ ಹತ್ತಿ ಪರಾರಿಯಾಗಿದ್ದಾರೆ. ಇತ್ತ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದರಿಂದ ಯುವತಿ ಮೃತಪಟ್ಟಿದ್ದಾಳೆ.

ಬಳಿಕ ಇದೊಂದು ಲವ್​ ಜಿಹಾದ್ ಪ್ರಕರಣ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು. ಯುವತಿಯನ್ನು ಮಸ್ಲಿಂ ಧರ್ಮಕ್ಕೆ ಮತಾಂತರ ಮಾಡುವ ಸಂಚು ನಡೆದಿತ್ತು. ಆದರೆ ಆಕೆ ಒಪ್ಪದಿದ್ದ ಕಾರಣ, ಮೊದಲು ಅಪಹರಣ ಮಾಡಲು ನೋಡಿದ್ದಾರೆ, ಅದು ಸಾಧ್ಯವಾಗದಿದ್ದ ಹಿನ್ನೆಲೆಯಲ್ಲಿ ಯುವತಿಗೆ ಶೂಟ್​ಔಟ್​ ಮಾಡಿದ್ದಾರೆ ಎಂದು ಮಾಹಿತಿ ತನಿಖೆಯಿಂದ ಹೊರಬಿದ್ದಿತ್ತು.

ಫರೀದಾಬಾದ್‌ನ ಬಲ್ಲಭಗಢದ ಕಾಲೇಜಿನಲ್ಲಿ ಬಿ.ಕಾಂ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದ ನಿಖಿತಾಗೆ ಈಗ ಶೂಟ್​ಔಟ್​ ಪ್ರಕರಣದ ಪ್ರಮುಖ ಆರೋಪಿ ತೌಸೀಫ್‌ ಜತೆ 2018ರಿಂದಲೂ ಸ್ನೇಹ ಇತ್ತು. ತೌಸೀಫ್‌ ಇಸ್ಲಾಂಗೆ ಮತಾಂತರ ಆಗುವಂತೆ ನಿಖಿತಾಗೆ ಒತ್ತಡ ಹಾಕಿದ್ದ. ಆದರೆ ಆಕೆ ಇದಕ್ಕೆ ಒಪ್ಪದೆ ಇದ್ದಿದ್ದರಿಂದ ಈ ರೀತಿ ಕೊಲೆ ಮಾಡಲಾಗಿದೆ.

ಪರೀಕ್ಷೆ ಮುಗಿಸಿ ಬರುವುದನ್ನೇ ತೌಸೀಫ್‌ ತನ್ನ ಸ್ನೇಹಿತ ರೇಹಾನ್‌ ಜತೆ ಕಾರಿನಲ್ಲಿ ಕೂತು ಹೊಂಚು ಹಾಕುತ್ತಿದ್ದ. ಆಕೆ ಹೊರಗೆ ಬರುತ್ತಿದ್ದಂತೆಯೇ ಅಪಹರಣ ಮಾಡಿ ಕರೆದುಕೊಂಡು ಹೋಗುವ ಪ್ಲ್ಯಾನ್​ ಮಾಡಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದೊಂದು ಲವ್‌ ಜಿಹಾದ್‌ ಕೊಲೆ ಎಂದು ನಿಖಿತಾ ಸಹೋದರ ಈಗಾಗಲೇ ಆರೋಪ ಮಾಡಿದ್ದಾರೆ.

ಇಲ್ಲಿ ಮತಾಂತರಕ್ಕೆ ಒಪ್ಪದ್ದಕ್ಕೆ ಒಂದು ಜೀವ ನಡು ರಸ್ತೆಯಲ್ಲಿ ಪ್ರಾಣಬಿಟ್ಟಿದೆ. ಆದರೆ ಈ ಬಗ್ಗೆ ಎಲ್ಲಿಯೂ ಆಕ್ರೋಷ ವ್ಯಕ್ತಪಡಿಸುವುದು ಅಥವಾ ಪ್ರತಿಭಟನೆ ನಡೆಸುವುದು ಕಂಡು ಬರುತ್ತಿಲ್ಲ. ಹತ್ರಾಸ್‍ ಪ್ರಕರಣದಲ್ಲಿ ಹಲವಾರು ಸಂಘಟನೆಗಳಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅಲ್ಲಲ್ಲಿ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಯೋಗಿಯವರ ವಿರುದ್ಧ ಆಕ್ರೋಷ ಹೊರಹಾಕಿದ ಕಾಂಗ್ರೆಸ್ ಕೂಡ ಈ ಪ್ರಕರಣದಲ್ಲಿ ಬಾಯಿ ಬಿಟ್ಟಿಲ್ಲ.

ಹತ್ರಾಸ್‍ ಪ್ರಕರಣದ ಬಗ್ಗೆ ವ್ಯಾಪಕ ಅಕ್ರೋಷ ವ್ಯಕ್ತಪಡಿಸಿದವರಿಗೆ ನಡು ರಸ್ತೆಯಲ್ಲಿ ಹತ್ಯೆಗೀಡಾದ ನಿಖಿತಾ ತೋಮರ್ ಕೂಗು ಕೇಳಲ್ಲಿಲ್ಲವೇ?. ಹಾಗಾದರೆ ಈ ಹುಡುಗಿಯ ಜೀವಕ್ಕೆ ಬೆಲೆ ಇಲ್ಲವೇ? ಇಲ್ಲಿ ಇಬ್ಬರೂ ಜೀವ ಕಳೆದುಕೊಂಡಿದ್ದಾರೆ. ಇಬ್ಬರ ಜೀವ ಕೂಡ ಅಮುಲ್ಯವೇ. ಆದರೆ ನಿಖಿತ ಹತ್ಯೆ ಮಾಡಿದವರು ಮತ್ತೊಂದು ಧರ್ಮದವರು. ಇವರನ್ನು ಎದುರು ಹಾಕಿಕೊಂಡರೆ ಓಟು ಬ್ಯಾಂಕ್‌ಗೆ ತೊಂದರೆಯಾಗ ಬಹುದು ಎಂಬ ಭಯದಿಂದ ಯಾರೂ ಕೂಡ ಈ ಘಟನೆ ಬಗ್ಗೆ ಮಾತನಾಡುತ್ತಿಲ್ಲವೇ? ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಈ ಅನುಮಾನಸ್ಪದ ಪ್ರಶ್ನೆಗಳಿಗೆ ಸಾರ್ವಜನಿಕರೇ ಉತ್ತರ ನೀಡುವ ಮೂಲಕ ಈ ಹುಡಿಗೆಗೆ ನ್ಯಾಯ ಸಿಗಬಹುದೇ?

Comments are closed.