ಕರಾವಳಿ

ಕೊಲ್ಲೂರು ಮೂಕಾಂಬಿಕೆಗೆ ನವರಾತ್ರಿ ಪ್ರಯುಕ್ತ ಚಿನ್ನದ ರಥದಲ್ಲಿ ರಥೋತ್ಸವ

Pinterest LinkedIn Tumblr

ಉಡುಪಿ: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ರಥೋತ್ಸವ ಸಂಪನ್ನಗೊಂಡಿತು. ಈ ಬಾರಿ ಕೊರೊನಾ ಕಾರಣದಿಂದಾಗಿ ರಥೋತ್ಸವಕ್ಕೆ ಹೆಚ್ಚಿನ ಭಕ್ತರು ಇರಲಿಲ್ಲ. ಸೀಮಿತ ಸಂಖ್ಯೆಯಲ್ಲಿ ಭಕ್ತರು, ಅರ್ಚಕ ಹಾಗೂ ಸಿಬ್ಬಂದಿ ವರ್ಗದವರು ಮಾತ್ರವೇ ರಥೋತ್ಸವಕ್ಕೆ ಸಾಕ್ಷಿಯಾದರು.

ನವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಜನ ಭಕ್ತರು ಭಾಗಿಯಾಗುತ್ತಿದ್ದರು. ಆದರೆ ಈ ವರ್ಷ ಕೋವಿಡ್ ಕಾರಣದಿಂದಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳ ಭಕ್ತರು ಇರಲಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಿಂದ ಬರುವ ಭಕ್ತರು ಕೊರೊನಾ ನಿರ್ಬಂಧದಿಂದ ಆಗಮಿಸಿರಲಿಲ್ಲ.

ಚಿನ್ನದ ರಥೋತ್ಸವ…
ಇನ್ನು ವರ್ಷಂಪ್ರತಿ ನವರಾತ್ರಿಯ ಸಂದರ್ಭ ದೇವಳದಲ್ಲಿ ಪುಷ್ಪ ರಥೋತ್ಸವ ಮಾಡುವುದು ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಚಿನ್ನದ ರಥದಲ್ಲಿ ದೇವರ ಮೂರ್ತಿಯನ್ನಿಟ್ಟು ರಥೋತ್ಸವ ನಡೆಸಲಾಯಿತು. ಕಳೆದ ಎಂಟೂ ದಿನಗಳಲ್ಲಿ ದೇವರಿಗೆ ಸಲ್ಲಬೇಕಾದ ವಿಶೇಷ ಪೂಜೆ ಪುನಸ್ಕಾರ ಮತ್ತು ಧಾರ್ಮಿಕ ವಿಧಿಗಳನ್ನಷ್ಟೇ ಪೂರೈಸಲಾಗಿದೆ

Comments are closed.