ಕರಾವಳಿ

ಮಂಗಳೂರಿನ ಬಿ. ಸುಶ್ಮಿತಾ ಆಚಾರ್‌ಗೆ ಏಶಿಯನ್ ಎಜುಕೇಶನ್ ಅವಾರ್ಡ್

Pinterest LinkedIn Tumblr

ಮಂಗಳೂರು : ಶಿಕ್ಷಣ ಸಮುದಾಯಕ್ಕೆ ನೀಡಿರುವ ಕೊಡುಗೆಗಾಗಿ ನೀಡಲಾಗುವ ( In Recognition of contribution to Education community ) ” ಏಶಿಯನ್ ಎಜುಕೇಶನ್ ಅವಾರ್ಡ್ “ನ್ನು ಮಂಗಳೂರು ಬೋಳೂರಿನ ಬಿ. ಸುಶ್ಮಿತಾ ಆಚಾರ್ ಪಡೆದಿದ್ದಾರೆ.

ಇತ್ತೀಚೆಗೆ ದೆಹಲಿಯಲ್ಲಿ ಜರುಗಿದ ಏಶಿಯನ್ ಎಜುಕೇಶನ್ ಅವಾರ್ಡ್ ಎಂಡ್ ವರ್ಚುವಲ್ ಕಾನ್ಫರೆನ್ಸ್-2020, ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.

ಬಂಟ್ವಾಳ ಮಾಧವ ಆಚಾರ್ಯ ಮತ್ತು ಶುಭಾ ದಂಪತಿಗಳ ಪುತ್ರಿಯಾಗಿರುವ ಸುಶ್ಮಿತಾ ಚೆನ್ನೈ ನ ಕಿಂಗ್ಸ್ ಕಾರ್ನರ್ ಸ್ಟೋನ್ ಇಂಟರ್ನಾಷನಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದು , ನ್ಯಾಶನಲ್ ಎಜುಕೇಶನ್ ಪಾಲಿಸಿಯ ಅಂಬಾಸಿಡರ್ ಆಗಿಯೂ, ಕರ್ನಾಟಕ ಹಾಗು ತಮಿಳುನಾಡಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸುತ್ತಿರುವರು.

ಈಕೆ ತನ್ನ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಅಮೃತ ವಿದ್ಯಾಲಯದಲ್ಲಿ, ಪ.ಪೂ.ಶಿಕ್ಷಣವನ್ನು ಶಾರದಾ ಪ.ಪೂ. ಕಾಲೇಜು, ಬಿ.ಕಾಂ.ಪದವಿಯನ್ನು ಬೆಸೆಂಟ್ ಮಹಿಳಾ ಕಾಲೇಜಿನಲ್ಲೂ, ಎಂ.ಕಾಂ.ನ್ನು ಕೆನರಾ ಕಾಲೇಜು ಹಾಗು ಎಂ.ಬಿ.ಎ. (Interdisciplinary) ಪದವಿಯನ್ನು ಎಸ್.ಐ.ಎಮ್.ಎಸ್. ನಲ್ಲೂ ಪೂರ್ತಿಗೊಳಿಸಿದ್ದಾರೆ.

ಪ್ರಸ್ತುತ ಡಾಕ್ಟರೇಟ್ ಆಫ್ ಫಿಲಾಸಫಿ ಯನ್ನು ಹಿಮಾಲಯನ್ ಯುನಿವರ್ಸಿಟಿ ಕಾಮರ್ಸ್ ಎಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಮುಂದುವರೆಸುತ್ತಿದ್ದಾರೆ.

Comments are closed.