ಕರಾವಳಿ

ನಟಿ ಸಂಯುಕ್ತ ಹೆಗ್ಡೆ ಪ್ರಕರಣ : ವಿಡೀಯೋ ದಾಖಲೆ ನೀಡಿದ ತಕ್ಷಣ ಕ್ಷಮೆಯಾಚಿಸಿದ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ( ವಿಡೀಯೋ ವರದಿ)

Pinterest LinkedIn Tumblr

ಮಂಗಳೂರು/ ಬೆಂಗಳೂರು : ಚಿತ್ರನಟಿ ಸಂಯುಕ್ತ ಹೆಗ್ಡೆ ಬೆಂಗಳೂರಿನ ಪಾರ್ಕ್ ಒಂದರಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ನಡೆದ ಹಲ್ಲೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಸಂಯುಕ್ತ ಹೆಗ್ಡೆ ಸ್ನೇಹಿತರ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರದರ್ಶಿಸಿದ ಕವಿತಾ ರೆಡ್ಡಿ ಕ್ಷಮೆ ಕೇಳಿದ್ದಾರೆ.

ಘಟನೆ ಸಂದರ್ಭ ತಮ್ಮ ಮೇಲಿನ ನೈತಿಕ ಪೊಲೀಸ್‌ಗಿರಿ ಆರೋಪಕ್ಕೆ ಉತ್ತರಿಸಿದ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ, “ಇಂತಾ ಹೇಳಿಕೆ ಸಂಪೂರ್ಣವಾಗಿ ಮೂರ್ಖತನವಾಗಿದ್ದು, ಸಾರ್ವಜನಿಕವಾಗಿ ಬಟ್ಟೆ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡಿದ್ದನ್ನು ಪ್ರಶ್ನಿಸಿದ್ದೇನೆ ಹಾಗೂ ಪೋಲಿಸರಿಗೆ ದೂರು ನೀಡಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದರು.

ಆದರೆ ಇದೀಗ ಕವಿತಾ ರೆಡ್ಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಯುಕ್ತ ಹೆಗ್ಡೆ ಆರೋಪಿಸಿ, ಹಲ್ಲೆ ನಡೆಸುವ ವಿಡೀಯೋ ಕ್ಲಿಪ್ಪಿಂಗ್ ದಾಖಲೆಗಳನ್ನು ಪೊಲೀಸರಿಗೆ ನೀಡಿದ ಬಳಿಕ ಸಡನ್ ಆಗಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕವಿತಾ ರೆಡ್ಡಿ, “ನಾನು ಮೊದಲಿನಿಂದಲೂ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದೇನೆ. ಅದರ ಭಾಗವಾಗಿಯೆ ನನ್ನ ಕ್ರಿಯೆಗಳು ರೂಪುಗೊಂಡಿದ್ದವು. ನಿನ್ನೆಯ ವಾದವು ನನ್ನ ಉದ್ವೇಗಗೊಂಡ ವರ್ತನೆಯಿಂದ ಕೊನೆಯಾಯಿತು. ಇದು ನನ್ನ ಸಮಸ್ಯೆ. ಒಬ್ಬ ನಾಗರೀಕ ಪ್ರಜೆಯಾಗಿ ಮತ್ತು ಪ್ರಗತಿಪರ ಮಹಿಳೆಯಾಗಿ, ಸಂಯಕ್ತ ಹೆಗ್ಡೆ ಮತ್ತು ಅವರ ಗೆಳತಿಯರಲ್ಲಿ ನಾನು ಪ್ರಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

ವ್ಯಾಯಾಮ ಮಾಡುತ್ತಿದ್ದಾಗ ನೈತಿಕ ಪೊಲೀಸ್‌ಗಿರಿ ಆರೋಪ:

ಸೆಪ್ಟಂಬರ್ 4, ಶುಕ್ರವಾರ ಸಂಜೆ ಅಗರ ಕೆರೆಯ ಉದ್ಯಾನ ವನದಲ್ಲಿ ಸಂಯುಕ್ತಾ ಹೆಗ್ಡೆ ತನ್ನ ಸ್ನೇಹಿತೆಯರ ಜತೆ ವ್ಯಾಯಾಮ ಮಾಡುತ್ತಿದ್ದಾಗ ಕೆಲವರು ಆಕೆ ಧರಿಸಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕವಿತಾ ರೆಡ್ಡಿಯನ್ನು ಕರೆಸಿದ್ದರು.

ಇದೇ ವಿಚಾರದಲ್ಲಿ ಬಳಿಕ ವಾಗ್ವಾದ ನಡೆದಿತ್ತು. ಇಡೀ ಘಟನೆಯನ್ನು ಸಂಯುಕ್ತಾ ತನ್ನ ಇನ್ಸ್‌ಟಾ ಗ್ರಾಂ ಖಾತೆಯಲ್ಲಿ ಲೈವ್‌ ಮಾಡಿದ್ದು, ಕೆಲವರು ಸಂಯುಕ್ತಾ ಡ್ರಗ್ಸ್‌ ಸೇವಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ಸಂಯುಕ್ತಾ ನಿರಾಕರಿಸಿದ್ದರು. ಜೊತೆಗೆ ವೀಡಿಯೋದಲ್ಲಿ ಕವಿತಾ ರೆಡ್ಡಿ ಹಲ್ಲೆ ಮಾಡಲು ಮುಂದಾಗಿದ್ದುದು ಕೂಡ ಸೆರೆಯಾಗಿತ್ತು. ಇವೆಲ್ಲ ಪೊಲೀಸ್‌ ಸಿಬಂದಿ ಸಮ್ಮುಖದಲ್ಲಿಯೇ ನಡೆದಿತ್ತು.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಆಗರ ಕೆರೆಯ ಪಕ್ಕದ ಉದ್ಯಾನವನದಲ್ಲಿ ಇಬ್ಬರು ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಕವಿತಾ ರೆಡ್ಡಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂಯುಕ್ತ ಹೆಗ್ಡೆ ಆರೋಪಿಸಿದ್ದರು. ಉದ್ಯಾನವನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಧರಿಸಿದ್ದ ಬಟ್ಟೆಗೆ ಕಾಂಗ್ರೆಸ್‌ ಪಕ್ಷದ ವಕ್ತಾರೆ ಕವಿತಾ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದ ವಿವಾದ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಕವಿತಾ ರೆಡ್ಡಿ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಂಯುಕ್ತಾ ಹೆಗ್ಡೆ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾನು “ಸ್ನೇಹಿತರೊಂದಿಗೆ ವ್ಯಾಯಾಮ ಮಾಡುತ್ತಿದ್ದಾಗ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ಮಾಡಿದ್ದಾಗಿ ನನ್ನ ವಿರುದ್ಧ ಆರೋಪಿಸಿ ಎಐಸಿಸಿ ಸದಸ್ಯೆ ಕವಿತಾ ರೆಡ್ಡಿ ಹಾಗೂ ಅವರ ನೇತೃತ್ವದ ಜನರ ಗುಂಪು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೇ ಅಲ್ಲಿ ನೆರೆದಿದ್ದ ಜನರು ನಾವು ಡ್ರಗ್ಸ್ ಸೇವಿಸಿದ್ದೇವೆ ಎಂದು ಆರೋಪಿಸಿ ನನ್ನ ವಿರುದ್ದ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿದ್ದ ಓರ್ವ ವ್ಯಕ್ತಿ ನಾವು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ನಮ್ಮನ್ನು ಬೆದರಿಸಿರುವುದಾಗಿ ನಟಿ ಸಂಯುಕ್ತ ಹೆಗ್ಡೆ ದೂರಿನಲ್ಲಿ ತಿಳಿಸಿದ್ದರು.

ಈ ಎಲ್ಲಾ ಘಟನೆಯ ವಿಡಿಯೋ ದೃಶ್ಯಾವಳಿಯನ್ನು ಸಂಯುಕ್ತ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಲೈವ್‌ ನಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಕವಿತಾ ರೆಡ್ಡಿ ಹಲ್ಲೆ ಮಾಡಲು ಯತ್ನಿಸಿರುವುದು ಹಾಗೂ ವಿಡಿಯೋದಲ್ಲಿ ಕವಿತಾ ರೆಡ್ಡಿ ಯುವತಿಯನ್ನು ದೂಡುತ್ತಿರುವುದು ದಾಖಲಾಗಿತ್ತು.

ಹಾಗೂ ಅಲ್ಲಿ ನೆರೆದಿದ್ದ ಜನರು ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ದ ಘೋಷಣೆ ಕೂಗಿರುವುದು ಹಾಗೂ ವ್ಯಕ್ತಿಯೊಬ್ಬ ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸುವುದಾಗಿ ಅವರನ್ನು ಬೆದರಿಸಿರುವುದು ಎಲ್ಲಾ ಘಟನೆಗಳು ವಿಡಿಯೋದಲ್ಲಿ ದಾಖಲಾಗಿತ್ತು.

ಇನ್ನು ಕವಿತಾ ರೆಡ್ಡಿಯನ್ನು ಬಂಧಿಸುವಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದರು. ಹಿರಿಯ ನಟ ಜಗ್ಗೇಶ್, ನಟಿ ರಮ್ಯಾ, ನಿರ್ದೇಶಕರಾದ ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್, ನಟಿ ಪಾರುಲ್ ಯಾದವ್ ಮತ್ತು ಮೇಘನಾ ಗಾಂವ್ಕರ್ ಸೇರಿದ್ದಂತೆ ಕಲಾವಿದರು ಮತ್ತು ರಾಜಕಾರಣಿಗಳು ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದರು.

ಹಿನ್ನೆಲೆಯಲ್ಲಿ, ಇದೀಗ ಕವಿತಾ ರೆಡ್ಡಿಗೆ ಮಾಡಿದ ತಪ್ಪಿನ ಅರಿವಾಗಿ ಕ್ಷಮೆ ಕೇಳಿ, ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಘಟನೆ ನಡೆದ ದಿನದ ಲೈವ್ ವಿಡೀಯೋ:

https://www.instagram.com/tv/CEtwP4plMhN/?utm_source=ig_embed&utm_campaign=loading

Comments are closed.