ಮನೋರಂಜನೆ

ನಟಿ ಕಂಗನಾ ರನೌತ್‌ಗೆ ‘ವೈ ಶ್ರೇಣಿಯ ಭದ್ರತೆ; 2 ಕಮಾಂಡೋಗಳು, ಪೊಲೀಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಗಳ ಭದ್ರತಾ ವ್ಯವಸ್ಥೆ

Pinterest LinkedIn Tumblr

ನವದೆಹಲ್ಲಿ: ನಟಿ ಕಂಗನಾ ರನೌತ್‌ಗೆ ‘ವೈ ಶ್ರೇಣಿಯ ಭದ್ರತೆಯನ್ನು ಕೇಂದ್ರ ಅನುಮೋದಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ವೈ ಶ್ರೇಣಿಯು 1 ಅಥವಾ 2 ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 11 ಸಿಬ್ಬಂದಿಗಳ ಭದ್ರತಾ ವ್ಯವಸ್ಥೆಯನ್ನು ಹೊಂದಿರುತ್ತದೆ.

ಹಿಮಾಚಲ ಪ್ರದೇಶ ಸರ್ಕಾರವು ರಾಜ್ಯದಲ್ಲಿ ರನೌತ್‌ಗೆ ಭದ್ರತೆ ಒದಗಿಸಲು ನಿರ್ಧರಿಸಿದ ಒಂದು ದಿನದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ನಟಿ ಕಂಗನಾ ಮುಂಬೈಗೆ ಭೇಟಿ ನೀಡುವ ಸಮಯದಲ್ಲಿ ಅವರುಗೆ ವೈ ಶ್ರೇಣಿಯ ಭದ್ರತೆ ನಿಡಲು ಯೋಚಿಸುತ್ತಿದೆ. ಶಿಮ್ಲಾದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡುವಾಗ ಮುಖ್ಯಮಂತ್ರಿ ಇದನ್ನು ಬಹಿರಂಗಪಡಿಸಿದ್ದಾರೆ.

“ಕಂಗನಾ ಅವರು ಹಿಮಾಚಲ ಪ್ರದೇಶದ ಮಗಳಾಗಿದ್ದು ಪ್ರಸಿದ್ಧ ವ್ಯಕ್ತಿಯಾಗಿರುವುದರಿಂದ ಅವರಿಗೆ ಭದ್ರತೆಯನ್ನು ಒದಗಿಸುವುದು ನಮ್ಮ ಕರ್ತವ್ಯ” ಎಂದು ಹಿಮಾಚಲ ಪ್ರದೇಶ ಸಿಎಂ ಹೇಳಿದರು.

ಈ ನಡುವೆ ಮುಂಬೈ ಮತ್ತು ಮಹಾರಾಷ್ಟ್ರದ ವಿರುದ್ಧ ಮಾಡಿದ ಟೀಕೆಗಳಿಗೆ ನಟಿ ಕ್ಷಮೆಯಾಚಿಸಬೇಕು ಎಂದು ಭಾನುವಾರ ಶಿವಸೇನೆ ಸಂಸದ ಸಂಜಯ್ ರೌತ್ ಒತ್ತಾಯಿಸಿದ್ದರು.

ಕಂಗನಾ ಇತ್ತೀಚೆಗೆ ಟ್ವೀಟ್ ನಲ್ಲಿ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದರು “ಮುಂಬೈ ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಂತೆ ಏಕೆ ಬದಲಾಗಿದೆ?” ಕಂಗನಾ ಇತ್ತೀಚೆಗೆ ಟ್ವೀಟ್ ನಲ್ಲಿ ಕೇಳಿದ್ದು, ಸೆಪ್ಟೆಂಬರ್ 1ರ ವರದಿಯೊಂದನ್ನು ಟ್ಯಾಗ್ ಮಾಡಿ, ಅಲ್ಲಿ ನಗರ ಪೊಲೀಸರಿಂದ ಭಯವಿದ್ದು ನಾನು ಮುಂಬೈಗೆ ಮರಳುವುದಿಲ್ಲ ಎಂದಿದ್ದರು.

Comments are closed.