ಕರಾವಳಿ

ಸಿಂಪಲ್ಲಾಗಿ ನಡೆದ ಉಪನಯನ- ಕೂಡಿಟ್ಟ ಹಣ, ಉಡುಗೊರೆಯ 25 ಸಾವಿರ ಗೋಶಾಲೆಗೆ ಕೊಟ್ಟ ವಟುಗಳು!

Pinterest LinkedIn Tumblr

ಕುಂದಾಪುರ: ಉಪನಯ ಕಾರ್ಯಕ್ರಮದಲ್ಲಿ ವಟುವಿಗೆ ಬಂದ ಭಿಕ್ಷೆ ಹಣ, ಉಡುಗೊರೆ ಮೂಲಕ ಬಂದ ಹಣ ಮತ್ತು ಸಮಾರಂಭದಲ್ಲಿ ಉಳಿದ ಹಣವನ್ನು ಇಬ್ಬರು ಉಪನಯ ಸಂಸ್ಕಾರ ಪಡೆದ ಯುವಕರು ಗೋಶಾಲೆಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಗಂಗೊಳ್ಳಿಯ ಉದ್ಯಮಿ ಎಂ.ಜಿ.ಪ್ರಕಾಶ ಪೈ ಮತ್ತು ಜ್ಯೋತಿ ಯಾನೆ ರೇಣುಕಾ ಪೈ ದಂಪತಿಯ ಪುತ್ರ ಎಂ.ಜಿ.ಪ್ರಜ್ವಲ್ ಪ್ರಕಾಶ ಪೈ ಮತ್ತು ಟಿ. ಗಣೇಶ ಪೈ ಮತ್ತು ಪ್ರಮೋದಾ ಪೈ ದಂಪತಿ ಪುತ್ರ ಟಿ.ಭುವನೇಂದ್ರ ಗಣೇಶ ಪೈ ಅವರ ಅವರ ಉಪನಯ ಸಮಾರಂಭವನ್ನು ಅದ್ದೂರಿಯಾಗಿ ನಡೆಸದೆ ಉಪನಯಕ್ಕಾಗಿ ಕೂಡಿಟ್ಟ ಹಣದಲ್ಲಿ ಉಳಿಸಿ ಅದರೊಟ್ಟಿಗೆ ಉಪನಯದಲ್ಲಿ ವಟುವಿಗೆ ಬಂದ ಭಿಕ್ಷೆ ಹಣ, ಉಡುಗೊರೆ ರೂಪದಲ್ಲಿ ಬಂದ ಹಣವನ್ನು ಒಟ್ಟು ಸೇರಿಸಿ ಒಟ್ಟು ೨೫೦೦೦.೦೦ ರೂ.ಗಳನ್ನು ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.

ಎಂ.ಜಿ.ಪ್ರಜ್ವಲ್ ಪ್ರಕಾಶ ಪೈ ಅವರು ೧೫ ಸಾವಿರ ರೂ.ಗಳ ಚೆಕ್ ಮತ್ತು ಟಿ.ಭುವನೇಂದ್ರ ಗಣೇಶ ಪೈ ಅವರು ೧೦ ಸಾವಿರ ರೂ.ಗಳನ್ನು ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಗೆ ಗಂಗೊಳ್ಳಿಯಲ್ಲಿ ಬುಧವಾರ ಹಸ್ತಾಂತರಿಸಿದರು. ಎಂ.ಜಿ.ಪ್ರಕಾಶ ಪೈ, ಎಂ.ಜಿ.ಪ್ರಸನ್ನ ಪೈ, ಪ್ರಮೋದಾ ಪೈ, ಹಿಂದು ಜಾಗರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷ ವಾಸುವೇದ ದೇವಾಡಿಗ, ಬೈಂದೂರು ಕಾರ್ಯಕಾರಣಿ ಸದಸ್ಯ ರತ್ನಾಕರ ಗಾಣಿಗ, ಬೈಂದೂರು ಪ್ರಧಾನ ಕಾರ್ಯದರ್ಶಿ ನವೀನ ದೊಡ್ಡಹಿತ್ಲು, ಸಹ ಕಾರ್ಯದರ್ಶಿ ಮೋಹನ ಖಾರ್ವಿ, ಸಹ ಕಾರ್ಯದರ್ಶಿ ರಾಘವೇಂದ್ರ ಗಾಣಿಗ, ಯಶವಂತ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Comments are closed.