ಉಡುಪಿ: ಕೊರೋನಾ ಪಾಸಿಟಿವ್ ವ್ಯಕ್ತಿಗೆ ಯಾವುದೇ ಯಾವುದೇ ಲಕ್ಷಣಗಳಿಲ್ಲದಿದ್ದರೆ ಅಂತಹ ವ್ಯಕ್ತಿಗಳನ್ನು ಹೋಂ ಐಸೋಲೇಶನ್ ನಲ್ಲಿಡಲು ರಾಜ್ಯ ಸರಕಾರವೇ ಸೂಚಿಸಿದೆ. ಈಗಾಗಾಲೇ ಉಡುಪಿ ಜಿಲ್ಲೆಯಲ್ಲಿ 200 ಮಂದಿ ಈ ಹೋಂ ಐಸೋಲೇಶನ್ ವ್ಯವಸ್ಥೆಯಲ್ಲಿದ್ದಾರೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಕೋಟದಲ್ಲಿ ಹೇಳಿದರು.
ಸೋಂಕಿನ ಲಕ್ಷಣ ಇಲ್ಲದವರು ಮತ್ತು ಕಡಿಮೆ ಲಕ್ಷಣವುಳ್ಳವರಿಗೆ ಹೋಂ ಐಸೋಲೇಶನ್ ಮಾಡುವುದರಿಂದ ಅಂತವರಿಗು ಅನುಕೂಲ. ಆಸ್ಪತ್ರೆಗಳಲ್ಲಿ ಬೆಡ್ ಮೊದಲಾದ ಸೌಕರ್ಯಗಳು ಸಿಗಲ್ಲವೆನ್ನುವ ಸಮಸ್ಯೆಯಿರಲ್ಲ. ಮನೆಯಲ್ಲೇ ಸೋಂಕಿತ ಇರುವುದರಿಂದ ಯಾರಿಗೂ ಸಮಸ್ಯೆಯಿರಲ್ಲ. ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿಗಳು ನಿಗಾ ಇಡಲು ಅನುಕೂಲವಾಗುತ್ತದೆ. ಹೀಗಾಗಿ ಹೆಚ್ಚು ಹೋಂ ಐಸೋಲೇಶನ್ ವ್ಯವಸ್ಥೆಗೆ ಒತ್ತು ನೀಡಬೇಕು ಎಂದರು.
Comments are closed.