ಕರಾವಳಿ

ಕೋಟೇಶ್ವರದಲ್ಲಿ ನಡೆಯಿತು ‘ಅಂದ ರಂಗೋಲಿ ಚಂದದ ತೋರಣ’!

Pinterest LinkedIn Tumblr

ಕುಂದಾಪುರ: ಶ್ರೀ ಮಹತೋಭಾರ ಕೋಟೀಲಿಂಗೆಶ್ವರ ದೇವರ ದೀಪಾವಳಿ ಅಮವಾಸ್ಯೆ ಸ್ನಾನದ ಪ್ರಯಕ್ತ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ (ರಿ) ದೊಡ್ಡೋಣಿ ವತಿಯಿಂದ ದೊಡ್ಡೋಣಿ ಪರಸರದ ಜನರಿಗಾಗಿ ದೊಡ್ಡೋಣಿ ಪ್ರಮುಖ ರಸ್ತೆಯಲ್ಲಿ ಶ್ರೀ ದೇವರು ಬರುವ ದಾರಿಯಲ್ಲಿ ‘ಅಂದ ರಂಗೋಲಿ ಚಂದದ ತೋರಣ’ ಎಂಬ ಸಂಸ್ಕಾರಯುತವಾದ ಕಾರ್ಯಕ್ರಮವನ್ನು ನಡೆಸಲಾಯಿತು.

75ಕ್ಕೂ ಹೆಚ್ಚು ರಂಗೋಲಿ 25 ಕ್ಕೂ ಹೆಚ್ಚು ತರಳಿರು ತೋರಣಗಳಿದ್ದು ಎಲ್ಲಾ ಸ್ಪರ್ಧಾಳುಗಳಿಗೆ ಪ್ಲಾಸ್ಟಿಕ್ ನಿಷೇಧಿಸಿ ಎಂಬ ಸಂದೇಶದೊಂದಿಗೆ ಬಟ್ಟೆ ಕೈ ಚೀಲ ಹಾಗೂ ಹಣತೆಗಳನ್ನು ನೀಡಲಾಯಿತು. ಜೊತೆಗೆ ಮಹಾಲಿಂಗೇಶ್ವರ ಭಜನೆ ಹಾಗು ಚಂಡೆ ಬಳಗದವರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.

ರಂಗೋಲಿ ಸ್ಪರ್ಧೆಯಲ್ಲಿ
ಪ್ರಥಮ: ಶ್ರೀ ಲಕ್ಷ್ಮೀ ಗಾಣಿಗ
ದ್ವಿತೀಯ : ಕಲ್ಪನಾ ದೊಡ್ಡೋಣಿ ಮತ್ತು ಸುಚೇತಾ ದೇವಾಡಿಗ
ತೃತೀಯ: ಅಶ್ವಿನಿ ಪೂಜಾರಿ
ಸಮಾದನಕರ ಬಹುಮಾನ:
ಪ್ರಥ್ವಿನಿ ದೇವಾಡಿಗ ಹಾಗು ಅಥಿತಿ ಭಂಡಾರಿ

ತಳಿರು ತೋರಣ ಸ್ಪರ್ಧೆಯಲ್ಲಿ 
ಪ್ರಥಮ : ಲೋಕೇಶ್ ಮತ್ತು ತಂಡ 
ದ್ವೀತಿಯ: ಸ್ವರಾಜ್ ಫ್ರೆಂಡ್ಸ್ ದೊಡ್ಡೋಣಿ
ಸಮಾಧಾನಕರ ಬಹುಮಾನ : ದೀವ್ಯಲಕ್ಷ್ಮೀ ಮತ್ತು ತಂಡ
ಸುರೇಶ್ ದೇವಾಡಿಗ
ಗೋಪಾಲ್ ಆಚಾರ್ಯ

ಹಾಗೇ ತೀರ್ಮಾನಕಾರರಾಗಿ ಕಲಾವಿದ ಕೃಷ್ಣಮೂರ್ತಿ ಕೋಟೇಶ್ವರ ಹಾಗು ಉಪನ್ಯಾಸಕಿ ಶ್ರೀಮತಿ ಅಡಿಗ ದೊಡ್ಡೋಣಿ ಇದ್ದರು.

Comments are closed.