ಕರ್ನಾಟಕ

ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ʼಬಿಗ್ ಶಾಕ್ʼ

Pinterest LinkedIn Tumblr

ಬೀದರ್ ಜಿಲ್ಲೆಯಲ್ಲಿ ಕುಟುಂಬಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಗಳಿದ್ದು ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.

ಅಂದ ಹಾಗೆ, ಬಿಪಿಎಲ್ ಕಾರ್ಡ್ ಪಡೆದ ಬಡವರು ಪಡಿತರ ಅಂಗಡಿಗಳಲ್ಲಿ ಪಡೆದ ಅಕ್ಕಿಯನ್ನು ಊಟಕ್ಕೆ ಬಳಸಿದರೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದ ಸ್ಥಿತಿವಂತರು ಪ್ರತಿ ಕೆಜಿಗೆ 13 ರೂಪಾಯಿಯಂತೆ ಅಕ್ಕಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆರ್ಥಿಕವಾಗಿ ಸದೃಢರಾದವರು, ಪ್ರಭಾವಿಗಳು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡು ವಂಚಿಸಿದ್ದಾರೆ. ಬೀದರ್ ಜಿಲ್ಲೆಯಲ್ಲಿ 3,04,803 ಬಿಪಿಎಲ್, 36,648 ಅಂತ್ಯೋದಯ ಕಾರ್ಡ್ ದಾರರಿದ್ದು, ಬಹಳಷ್ಟು ಮಂದಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.

ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಿತಿವಂತರು, ಪ್ರಭಾವಿಗಳು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದು ಸರ್ಕಾರಕ್ಕೆ ವಂಚಿಸಿದ್ದಾರೆ. ಸೆಪ್ಟೆಂಬರ್ 30 ರೊಳಗೆ ಅನರ್ಹರಿಗೆ ಬಿಪಿಎಲ್ ಕಾರ್ಡ್ ಹಿಂತಿರುಗಿಸುವಂತೆ ಕಾಲಾವಕಾಶ ನೀಡಿದ್ದರೂ, ಅನೇಕರು ಇನ್ನೂ ಹಿಂತಿರುಸದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಪಡೆದುಕೊಂಡ ಅನರ್ಹರ ಪತ್ತೆಗೆ ಕ್ರಮಕೈಗೊಂಡಿದ್ದು, ಅಂತಹ ಕಾರ್ಡ್ ದಾರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎನ್ನಲಾಗಿದೆ.

Comments are closed.