ಕರಾವಳಿ

ನಿಮ್ಮ ಸ್ಮಾರ್ಟ್ ಮೊಬೈಲ್‌ನಲ್ಲಿ ಈ ಆಪ್ ಇದೆಯಾ?..ಹಾಗಾದ್ರೆ ಎಚ್ಚರ!

Pinterest LinkedIn Tumblr

ಗೂಗಲ್ ಪ್ಲೇ ಸ್ಟೋರ್‌ನಿಂದ ಯಾವುದೇ ಆಪ್‌ಗಳನ್ನು ಇನ್‌ಸ್ಟಾಲ್ ಮಾಡುವ ಮುನ್ನ ಆ ಆಪ್‌ಗಳು ಅಸಲಿಯೇ ಎಂಬುದನ್ನು ನೋಡುವುದು ನೋಡುವುದು ಒಳಿತು. ಇಲ್ಲದಿದ್ದರೆ, ಜನಪ್ರಿಯ ಸೇವೆಗಳ ಹೆಸರಿನಲ್ಲಿ ಫೇಕ್ ಆಪ್‌ಗಳು ನಿಮ್ಮ ಮೊಬೈಲ್ ಸೇರಿಬಿಡುತ್ತದೆ. ಇದಕ್ಕೆ ಉದಾಹರಣೆ ಎಂದರೆ 50.000 ಕ್ಕಿಂತಲೂ ಹೆಚ್ಚು ಮಂದಿ ಇನ್‍ಸ್ಟಾಲ್ ಮಾಡಿರುವ ‘PDF converter’.!

ಹೌದು, ಅಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್‌ನಿಂದ ಇನ್‍ಸ್ಟಾಲ್ ಮಾಡಿದ ಫೇಕ್ ಆಪ್‌ಗಳಲ್ಲಿ PDF converter (PDF to Word Doc) ಎಂಬ ಫೇಕ್ ಆಪ್‌ ಅನ್ನು 50000ಕ್ಕಿಂತಲೂ ಹೆಚ್ಚು ಮಂದಿ ಇನ್‍ಸ್ಟಾಲ್ ಮಾಡಿದ್ದಾರೆ. ತದನಂತರ ಇದು ಆಪ್ ಫೇಕ್ ಎಂದು ತಿಳಿದು ನಂತರವೂ ಈ ಆಪ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಆಪ್‌ ಸ್ಟೋರ್‌ಗಳಲ್ಲಿ ಫೇಕ್ ಆಪ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಅಧಿಕೃತ ಆಪ್‌ಸ್ಟೋರ್‌ನಿಂದ ಮಾತ್ರ ಡೌನ್‌ಲೋಡ್ ಮಾಡುವುದು ಒಳ್ಳೆಯದು. ಆದರೆ, ಅದರಲ್ಲೂ ಸಹ ಕೆಲ ಫೇಕ್ ಆಪ್‌ಗಳು ಇರಬಹುದು. ಹಾಗಾಗಿ, ಬಳಕೆದಾರರು ನೀಡಿರುವ ರಿವ್ಯೂವ್ ಮತ್ತು ತಪ್ಪು ಮಾಹಿತಿಯನ್ನು ಕಂಡುಹಿಡಿದು ಕೊಂಡು ಅವುಗಳ ಬಗ್ಗೆ ಎಚ್ಚರಿಕೆ ವಹಿಸಿಸಬೇಕು ಎಂದು ವರದಿ ತಿಳಿಸಿದೆ.

ಯಾವುದೇ ಆಪ್ ಡೌನ್‌ಲೋಡ್ ಮಾಡುವ ಮುನ್ನ ಆ ಆಪ್‍ ಬಗ್ಗೆ ಬಳಕೆದಾರರು ನೀಡಿರುವ ರಿವ್ಯೂವ್‌ಗಳನ್ನು ಓದಿ. ಅದೊಂದು ಫೇಕ್ ಆಪ್ ಆಗಿದ್ದರೆ ಬಳಕೆದಾರರು ಆ ಬಗ್ಗೆ ಬರೆದಿರುತ್ತಾರೆ. ಯಾವುದೇ ಆಪ್‍ ಆಗಲಿ ಬಳಕೆದಾರರು ಅದು ಹೇಗಿದೆ?, ಅದರ ಪ್ಲಸ್ / ಮೈನಸ್ ಪಾಯಿಂಟ್ ಎಲ್ಲವನ್ನೂ ಇಲ್ಲ ಬರೆಯುತ್ತಾರೆ. ಇದನ್ನೆಲ್ಲಾ ಓದಿದ ನಂತರವೇ ಆ ಆಪ್ ಇನ್‍ಸ್ಟಾಲ್ ಮಾಡಿ.

ಆಪ್ ಡೆವಲಪರ್ ಯಾರು ಎಂಬುದನ್ನು ಸಹ ತಿಳಿದುಕೊಳ್ಳಿ. ಆ ಡೆವಲಪರ್‌ಗಳ ವೆಬ್‌ಸೈಟ್‌ಗೆ ಭೇಟಿ ನೀಡಿ. ಆ ಡೆವಲಪರ್‌ಗಳು ಯಾವುದೇ ಸಾಮಾಜಿಕ ಮಾಧ್ಯಮಗಳ ಲಿಂಕ್‌ಗಳನ್ನು ಹೊಂದಿಲ್ಲ ಎಂದಾದರೆ ಆ ಆಪ್ ಇನ್‍ಸ್ಟಾಲ್ ಮಾಡದಿದ್ದರೆ ಒಳ್ಳೆಯದು. ಇನ್ನು ಆ ಆಪ್ ವಿವರಣೆ ವ್ಯಾಕರಣ ದೋಷ,ಅಕ್ಷರ ತಪ್ಪುಗಳಿಂದ ಕೂಡಿದ್ದರೆ ಅದೊಂದು ಫೇಕ್ ಆಪ್ ಎಂದು ತಿಳಿಯಿರಿ.

Comments are closed.