ಕರಾವಳಿ

ದಂಪತಿಗಳ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಜೀವನ ಅನ್ಯೋನ್ಯತೆಯಿಂದ ಕೂಡಿರುತ್ತೆ ಗೋತ್ತೆ..?

Pinterest LinkedIn Tumblr

ಇತ್ತೀಚಿನ ದಿನಗಳಲ್ಲಿ ಹಲವಾರು ಕಾರಣಗಳಿಂದ ಮದುವೆ ಆಗುವ ದಂಪತಿಗಳ ನಡುವೆ ವಯಸ್ಸಿನ ಅಂತರ ತುಂಬಾ ಇರುತ್ತದೆ. ಈ ವಯಸ್ಸಿನ ಅಂತರವು ಅವರ ಜೀವನದ ವೈವಾಹಿಕ ಸಂಭಂದದ ಅನ್ಯೋನ್ಯತೆಯನ್ನು ಹೇಳುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತಿದೆ. ಹಾಗಾದರೆ ಏನು ನೋಡೋಣ ಬನ್ನಿ.

ಅಟ್ಲಾಂಟಾ ಯುನಿವರ್ಸಿಟಿ ನಡೆಸಿದ ಸಂಶೋಧನೆಯ ಪ್ರಕಾರ ಗಂಡ ಹೆಂಡತಿ ನಡುವೆ ವಯಸ್ಸಿನ ಅಂತರ ಹೆಚ್ಚಿದ್ದಷ್ಟು ಡಿವೋರ್ಸ್ ಸಾಧ್ಯತೆ ಹೆಚ್ಚಾಗಿರುತ್ತದೆ. ವಿವಿಧ ವಯಸ್ಸಿನ ಅಂತರ ಸುಮಾರು 3000 ಜೋಡಿಗಳ ಮೇಲೆ ಈ ಸಂಶೋಧನೆ ನೆಡಸಿದೆ. ಅದರ ಪ್ರಕಾರ ಒಂದು ವರ್ಷದಷ್ಟು ವಯಸ್ಸಿನ ಅಂತರವಿರುವ ಗಂಡ ಹೆಂಡತಿ ಹೆಚ್ಚು ಅನ್ಯೋನ್ಯವಾಗಿರುತ್ತಾರೆ.

ಆದರೆ ವಯಸ್ಸಿನ ಅಂತರ 3 ರಿಂದ 5 ವರ್ಷ ಹೆಚ್ಚಿದ್ದಾಗ ಈ ಅನ್ಯೋನ್ಯತೆ ಇರಲ್ಲ. 5 ರಿಂದ 10 ವರ್ಷದ ಗ್ಯಾಪ್‌ನಲ್ಲಂತೂ ಸಾಮರಸ್ಯ ಬಹಳ ಕಡಿಮೆ. ವಯಸ್ಸಿನ ಅಂತರ ಹೆಚ್ಚಾದಷ್ಟೂ ದಂಪತಿಗಳಲ್ಲಿ ವಿರಸ ಹೆಚ್ಚು, ಸಮರಸ ಕಡಿಮೆ ಅಂತ ಈ ಸಂಶೋಧನೆ ಹೇಳುತ್ತಿದೆ. ಆದರೆ ಇದಕ್ಕೆ ಅಪವಾದದಂತಿರುವ ಎಷ್ಟೋ ಜೋಡಿ ಭಾರತದಲ್ಲಿ ಸಿಗಬಹುದು. ಆದರೆ ಇದು ಈ ಕಾಲದ ಜೋಡಿಗಳ ಕತೆಯಾಗಿದೆ. ಅದೇ ರೀತಿ ಮಗುವಿಲ್ಲದ ಜೋಡಿಗಳು ಬೇಗ ಸಪರೇಟ್ ಆಗ್ತಾರೆ. ಮಗುವಿರುವವರು ಬೇರ್ಪಡುವ ಬಗ್ಗೆ ಕೊಂಚ ಯೋಚಿಸುತ್ತಾರೆ ಅನ್ನುವ ವಿವರಗಳೂ ಈ ಸಂಶೋಧನೆಯಿಂದ ಲಭ್ಯವಾಗಿವೆ.

Comments are closed.