ಕರಾವಳಿ

ಸದಾ ಯೌವನವಾಗಿರಲು ಕೇವಲ ಮೂರು ದಿನ ಈ ಟಿಪ್ಸ್ ಪಾಲಿಸಿ

Pinterest LinkedIn Tumblr

ವಯಸ್ಸಾಗುತ್ತಿದ್ದಂತೆ ತ್ವಚೆಯಲ್ಲಿ ಯೌವನದ ಕಳೆ ಕಡಿಮೆಯಾಗುವುದು. ಆದರೆ ತ್ವಚೆ ಆರೈಕೆ ಮಾಡಿದರೆ ಕಾಂತಿಯುತ ಯೌವನದ ಚೆಲುವು ಕಾಪಾಡಬಹುದು.ಬ್ಯೂಟಿ ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು ಮನೆಯಲ್ಲೇ ಈ ರೀತಿ 3 ದಿನ ಮಾಡಿ ತ್ವಚೆ ಕಾಂತಿ ಹೆಚ್ಚಿಸಿಕೊಳ್ಳಬಹುದು ನೋಡಿ:

ಡೇ-1 ಬಾಳೆಹಣ್ಣನ್ನು ಕೈಯಿಂದ ಹಿಸುಕಿ ಪೇಸ್ಟ್‌ ರೀತಿ ಮಾಡಿ ಅದಕ್ಕೆ 1 ಚಮಚ ಹಸಿ ಹಾಲು ಹಾಕಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.

ಡೇ-2 ಅರ್ಧ ಗ್ಲಾಸ್‌ ಅಕ್ಕಿಯನ್ನು ನೀರಿಗೆ ನೆನೆ ಹಾಕಿ ಅರ್ಧ ಗಂಟೆಯ ಬಳಿಕ ಆ ನೀರಿನಿಂದ ಮುಖ ತೊಳೆಯಿರಿ, ಆ ನೀರು ಮುಖದಲ್ಲಿ ಹಾಗೇ ಒಣಗಲಿ. ಅರ್ಧ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಡೇ-3 ಒಂದು ಆಲೂಗಡ್ಡೆಯನ್ನು ತೆಗೆದುಕೊಂಡು ಅದರ ಸಿಪ್ಪೆ ಸುಲಿದು ತುರಿಯಿರಿ. ಈಗ ಇದಕ್ಕೆ ಅರ್ಧ ದಾಳಿಂಬೆಯ ಬೀಜಗಳನ್ನು ಹಾಕಿ 1 ಚಮಚ ನೀರು ಹಾಕಿ ಗ್ರೈಂಡ್‌ ಮಾಡಿ, ನಂತರ 1 ಚಮಚ ನಿಂಬೆ ಸರ ಸೇರಿಸಿ. ನಂತರ ಇವುಗಳನ್ನು ಐಸ್ ಕ್ಯೂಬ್‌ ಟ್ರೇಗೆ ಹಾಕಿ ಫ್ರೀಜರ್‌ನಲ್ಲಿ ಇಡಿ. ದಿನಾ ಒಂದೊಂದು ಐಸ್ ಕ್ಯೂಬ್‌ ತೆಗೆದು 5 ನಿಮಿಷ ಮಸಾಜ್‌ ಮಾಡಿ ನಂತರ ಅರ್ಧ ಗಂಟೆಯ ಬಳಿಕ ಮುಖ ತೊಳೆಯಿರಿ.

Comments are closed.