ಕರಾವಳಿ

ಅಜೀರ್ಣದಿಂದ ಉಂಟಾದ ವಾಂತಿ ನಿವಾರಣೆಗೆ ಪ್ರಥಮ ಚಿಕಿತ್ಸೆ ಮಾಹಿತಿ.

Pinterest LinkedIn Tumblr

ವಾಂತಿಯಾಗಲು ಕಾರಣವೇನು ಗೊತ್ತಾ, ಸಾಮಾನ್ಯವಾಗಿ ಅಜೀರ್ಣ ಉಂಟಾದಾಗ ವಾಂತಿಯಾಗುವುದು ಸಹಜ, ಆದರೆ ಕೆಲವು ಬಾರಿ ವಾಂತಿ ನಿಲ್ಲುವುದೇ ಇಲ್ಲ,ಈ ಸಂಧರ್ಭದಲ್ಲಿ ನೀಡಬಹುದಾದ ಪ್ರಥಮ ಚಿಕಿತ್ಸೆ ಜೊತೆ ಕೆಲವು ಸಲಹೆ ಮತ್ತು ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

ಅತಿಯಾದ ವಾಂತಿ ಆದಾಗ ನಿಂಬೆಹಣ್ಣನ್ನು ಮುಸಿ ನೋಡಬೇಕು, ಆಗ ವಾಂತಿ ಹತೋಟಿಗೆ ಬರುವುದು.

ಜಜ್ಜಿದ ಈರುಳ್ಳಿಯನ್ನು ವಾಸನೆ ನೋಡಿದಾಗ ವಾಂತಿ ನಿಲ್ಲುವುದು.

ವಾಂತಿ ಆದಾಗ ದೇಹದಲ್ಲಿ ನೀರಿನ ಅಂಶ ಕಡಿಮೆ ಯಾಗುವುದು, ಆಗ ಯಾವುದಾದರೂ ಹಣ್ಣಿನ ರಸ, ಕಾಯಿಸಿ ಆರಿಸಿದ ನೀರಿಗೆ ಸೇರಿಸಿ ಕುಡಿಸಬೇಕು, ಆಗ ದೇಹವು ಲವಲವಿಕೆಯಿಂದ ಕೂಡಿರುತ್ತದೆ.

ಎಳನೀರಿಗೆ ಏಲಕ್ಕಿ ಪುಡಿ, ಜೇನು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ವಾಂತಿ ಶಮನಗೊಳ್ಳುವುದು.

ಸೌತೆಕಾಯಿಯನ್ನು ತುರಿದ ರಸವನ್ನು ಹಿಂಡಿಕೊಂಡು ಅದಕ್ಕೆ ಗ್ಲೂಕೋಸ್ ಮತ್ತು ನಿಂಬೆರಸ ಬೆರೆಸಿ ಕುಡಿಯುವುದರಿಂದ ವಾಂತಿ ನಿಲ್ಲುವುದು.

ಜೀರಿಗೆ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ಪಿತ್ತದಿಂದ ಉಂಟಾದ ವಾಂತಿ ನಿಲ್ಲುವುದು.

ಗಮನಿಸಿ : ವಾಂತಿಯಾದಾಗ ದೇಹದಲ್ಲಿರುವ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.

Comments are closed.