ಮನೋರಂಜನೆ

ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಕೈ ಟ್ವಿಸ್ಟ್ ಮಾಡಿದ ಬಾಲಿವುಡ್ ಗಾಯಕ ಸೋನು ನಿಗಂ ! ವಿಡಿಯೋ ವೈರಲ್

Pinterest LinkedIn Tumblr

ಮುಂಬೈ: ಬಾಲಿವುಡ್ ಗಾಯಕ ಸೋನು ನಿಗಂ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ಅಭಿಮಾನಿಯ ಕೈ ಟ್ವಿಸ್ಟ್ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

 

https://www.instagram.com/p/Bs3U9wHjAjc/?utm_source=ig_embed

ಅಭಿಮಾನಿಯೊಬ್ಬ ಸೋನು ನಿಗಂ ಬರುತ್ತಿರುವುದನ್ನು ನೋಡಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಅಭಿಮಾನಿ ತನ್ನ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸುತ್ತಿರುವುದು ಸೋನು ನಿಗಮ್ ಗೆ ಇಷ್ಟವಾಗಿರಲಿಲ್ಲ. ಹೀಗಾಗಿ ಸೋನು ನಿಗಂ ಹೆಗಲ ಮೇಲೆ ಕೈ ಹಾಕಿದ ಅಭಿಮಾನಿಯ ಕೈ ತಿರುಗಿಸಿ ಆತನ ಹೆಗಲ ಮೇಲೆ ಕೈ ಹಾಕಿ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಸೋನು ನಿಗಂ ಅವರ ಈ ವರ್ತನೆ ನೋಡಿ ಮೊದಲಿಗೆ ಏನು ನಡೆಯುತ್ತಿದೆ ಎಂಬುದು ಯಾರಿಗೂ ಅರ್ಥವಾಗಲಿಲ್ಲ. ಎಲ್ಲರು ಸೋನು ಕೋಪಗೊಂಡಿದ್ದಾರೆ ಎಂದು ತಿಳಿದುಕೊಂಡಿದ್ದರು. ಆದರೆ ಸ್ವತಃ ಸೋನು ನಿಗಂ ಅಭಿಮಾನಿಯ ಹೆಗಲ ಮೇಲೆ ಕೈ ಹಾಕಿ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದನ್ನು ನೋಡಿ ಎಲ್ಲರು ಸುಮ್ಮನಾದರು.

ಸೋನು ಅಭಿಮಾನಿಯ ಕೈ ತಿರುಗಿಸಿ ಸೆಲ್ಫಿ ಕ್ಲಿಕ್ಕಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಕೆಲವರು ಸೋನು ನಿಗಂ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರೆ, ಮತ್ತೆ ಕೆಲವರು ಸೋನು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎಂದು ಬರೆದು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Comments are closed.