ಕರಾವಳಿ

ರಕ್ತ ನೀಡಲು ಬಂದ ರಕ್ತದಾನಿಗಳು ಅನುಸರಿಸಲೇಬೇಕಾದ ಕೆಲವು ಸಲಹೆಗಳು.

Pinterest LinkedIn Tumblr

ಒಬ್ಬ ವ್ಯಕ್ತಿ ಸ್ವ ಇಚ್ಚೆಯಿಂದ ರಕ್ತ ನೀಡಲು ಬಂದಾಗ ರಕ್ತದಾನ ಪ್ರಕ್ರಿಯೆ ನಡೆಯುತ್ತದೆ. ಅಂತಹ ರಕ್ತವನ್ನು ರಕ್ತವರ್ಗಾವಣೆಗಳಿಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಕ್ತದಾನಿಗಳು ಹಣವನ್ನು ತೆಗೆದುಕೊಳ್ಳದೆ ಸ್ವ ಇಚ್ಛೆಯಿಂದ ಸಮೂಹ ಪೂರೈಕೆಗೆಂದು ರಕ್ತದಾನ ಮಾಡುತ್ತಾರೆ. ಆದರೆ ಬಡ ರಾಷ್ಟ್ರಗಳಲ್ಲಿ ವ್ಯವಸ್ಥಿತ ರಕ್ತಪೂರೈಕೆಯು ಬಹಳ ಕಡಿಮೆ ಮತ್ತು ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತವರ್ಗಾವಣೆಯ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ. ರಕ್ತದಾನಿಗಳು ತಮ್ಮದೇ ಭವಿಷ್ಯದ ಅಗತ್ಯಕ್ಕಾಗಿಯೂ ತೆಗೆದಿರಿಸಬಹುದು. ಹಾಗಾಗಿ ರಕ್ತದಾನಿಗಳು ಅನುಸರಿಸಬೇಕಾದ ಕೆಲವು ಸಲಹೆಗಳು ಇಲ್ಲಿವೆ.

1. ರಕ್ತದಾನ ಮಾಡುವ ಕನಿಷ್ಠ 3 ಗಂಟೆಗಳ ಮೊದಲು ಉತ್ತಮವಾದ ಊಟವನ್ನು ಮಾಡಿ.
2. ದಯವಿಟ್ಟು ರಕ್ತದಾನದ ನಂತರ ನೀಡಿರುವ ತಿಂಡಿಗಳನ್ನು ಸ್ವೀಕರಿಸಿ. ನಂತರ ಉತ್ತಮವಾದ ಊಟವನ್ನು ಮಾಡಿ.
3. ರಕ್ತದಾನ ಮಾಡುವ ಒಂದು ದಿನ ಮೊದಲೇ ಧೂಮಪಾನ ತಪ್ಪಿಸಿ. ಹಾಗೆಯೇ ರಕ್ತದಾನದ 3 ಗಂಟೆಗಳ ನಂತರ ಧೂಮಪಾನ ಮಾಡಬಹುದು.
4. ರಕ್ತದಾನದ 48 ಗಂಟೆಗಳ ಮೊದಲು ನೀವು ಆಲ್ಕೋಹಾಲ್ ಸೇವಿಸಿದರೆ ರಕ್ತವನ್ನು ನೀಡಲು ನೀವು ಅರ್ಹರಾಗಿರುವುದಿಲ್ಲ.
5. ಗರ್ಭಿಣಿ ಅಥವಾ ಹಾಲುಣಿಸುವ ಹೆಂಗಸರು ಮತ್ತು ಇತ್ತೀಚೆಗೆ ಗರ್ಭಪಾತವಾದವರು ರಕ್ತದಾನ ಮಾಡಬಾರದು.

Comments are closed.