ಕರಾವಳಿ

ಅಶೋಕ ಚಕ್ಕೆಯ ಚೂರ್ಣಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸಿದರೆ ರಕ್ತ ಪಿತ್ತ ಸಮಸ್ಯೆ ನಿವಾರಣೆ

Pinterest LinkedIn Tumblr

ಸ್ತ್ರೀಯರ ಮಾಸಿಕ ಅತಿಸ್ರಾವ ಹತೋಟಿಗೆ: 2೦ ಗ್ರಾಂ ಅಶೋಕ ಮರದ ಚಕ್ಕೆಯನ್ನು ಚೆನ್ನಾಗಿ ಜಜ್ಜಿ 250 ಮಿಲೀ ಹಾಲಿನಲ್ಲಿ ಹಾಕಿ ಕಷಾಯ ಮಾಡುವುದು. ತಣ್ಣಗಾದ ಮೇಲೆ ಕಷಾಯವನ್ನು ಶೋಧಿಸಿ ಕೆಂಪು ಕಲ್ಲುಸಕ್ಕರೆ ಪುಡಿ ಸೇರಿಸಿ ಹೊತ್ತಿಗೆ ನಾಲ್ಕು ಟೀ ಚಮಚ ಸೇವಿಸಬೇಕು.

ಸಂತಾನ ಪ್ರಾಪ್ತಿಗೆ: ಸ್ತ್ರೀಯರ ಋತುಚಕ್ರ ಸರಿಯಿದ್ದು ಅಶೋಕ ಮರದ ಎಲೆಗಳನ್ನು ಒಂದು ವಾರ ಸೇವಿಸಿದರೆ ಸಂತಾನ ಭಾಗ್ಯ ಲಭಿಸುವುದು.

ಮುಟ್ಟಿನ ಶೂಲೆ ಮತ್ತು ಗರ್ಭಸ್ರಾವ ತಡೆಗೆ: ಗ್ರಾಂ ಅತಿಮಧುರ,20 ಗ್ರಾಂ ಅಶೋಕ ಮರದ ಚಕ್ಕೆಯನ್ನು ನುಣ್ಣಗೆ ಚೂರ್ಣ ಮಾಡಿ ಎರಡು ಲೋಟ ನೀರು ಹಾಕಿ ಕಾಯಿಸಿ ಕಾಲು ಭಾಗ ಉಳಿಯುವಂತೆ ಕಷಾಯ ಮಾಡುವುದು. ತಣ್ಣಗಾದ ಮೇಲೆ ಈ ಕಷಾಯಕ್ಕೆ ಸ್ವಲ್ಪ ಕಲ್ಲುಸಕ್ಕರೆ ಸೇರಿಸಿ ದಿವಸಕ್ಕೆ 2 ಬಾರಿ 2 ಟೀ ಚಮಚ ಸೇವಿಸುವುದರಿಂದ ಸಮಸ್ಯೆ ಹತೋಟಿಗೆ ಬರುತ್ತದೆ.

ಬಿಳಿಸ್ರಾವಕ್ಕೆ:-10 ಗ್ರಾಂ ಅಶೋಕ ಚಕ್ಕೆಯನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರು ಸೇರಿಸಿ ಕಷಾಯ ಮಾಡಿ ಅದಕ್ಕೆ ಸ್ವಲ್ಪ ಬೆಲ್ಲ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಬೇಕು.
– ಅತಿಮಧುರ ಚೂರ್ಣ, ಬೂದುಗುಂಬಳದ ಬೇರಿನ ಚೂರ್ಣ,ಅಶ್ವಗಂಧಿ ಚೂರ್ಣ ಮತ್ತು ಉದ್ದಿನ ಹಿಟ್ಟು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ, 5 ಗ್ರಾಂ ಚೂರ್ಣವನ್ನು ಕಲ್ಲುಸಕ್ಕರೆ ಪುಡಿ ಸೇರಿಸಿದ ಹಾಲಿನಲ್ಲಿ ದಿವಸಕ್ಕೆ ಎರಡು ಬಾರಿ ತೆಗೆದುಕೊಂಡಲ್ಲಿ ಶ್ವೇತ ಪದರ ಹತೋಟಿಗೆ ಬರುತ್ತದೆ.

ರಕ್ತ ಪಿತ್ತದ ನಿವಾರಣೆಗೆ: ಅರ್ಧ ಟೀ ಚಮಚ ನುಣ್ಣಗಿರುವ ಜೀರಿಗೆ ಪುಡಿ ಮತ್ತು ಒಂದು ಟೀ ಚಮಚ ಅಶೋಕ ಚಕ್ಕೆಯ ಚೂರ್ಣಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ನೀರಿನೊಂದಿಗೆ ಸೇವಿಸಿದರೆ ಪರಿಹಾರ ದೊರಕುವುದು.

Comments are closed.