ಕರಾವಳಿ

ದೇವರ ಮುಂದೆ ಅಗರಬತ್ತಿ ಹಚ್ಚುವುದರ ಹಿಂದಿನ ಇಂಟ್ರೆಸ್ಟಿಂಗ್ ವಿಚಾರ ನಿಮಗೆ ಗೋತ್ತೆ.?

Pinterest LinkedIn Tumblr

ಹೌದು ನಾವು ನೀವು ಪ್ರತಿಯೊಬ್ಬರೂ ಸಹ ಅನಾದಿಕಾಲದಿಂದ ಅಗರಬತ್ತಿಯನ್ನು ಹಚ್ಚಿ ಪೂಜೆ ಮಾಡುತ್ತಾರೆ ಆದ್ರೆ ಈ ಅಗರಬತ್ತಿಯನ್ನೇ ಯಾಕೆ ಬಳಸುತ್ತಾರೆ ಅನ್ನುವ ಇಂಟ್ರೆಸ್ಟಿಂಗ್ ವಿಚಾರ ನೀವು ತಿಳ್ಕೊಬೇಕೆ ಇಲ್ಲಿದೆ ನೋಡಿ ಯಾಕೆ ಅಂತ.

ನಾವು ಪೂಜೆ ಮಾಡುವ ಸ್ಥಳ ಉತ್ತಮ ರೀತಿಯಲ್ಲಿರ ಬೇಕು ಹಾಗು ಶಾಂತತೆಯನ್ನು ಹೊಂದಿರಬೇಕು ನಾವು ಮಾಡುವಂತ ಪೂಜೆ ದೇವರನ್ನು ತಲುಪುವಂತಿರ ಬೇಕು ಅನ್ನೋದು ನಮ್ಮ ನಂಬಿಕೆ ಕೂಡ.

ಅದಕ್ಕಾಗಿ ಪ್ರತಿ ಪೂಜೆಯಲ್ಲೂ ಆಗರ ಬತ್ತಿಯನ್ನು ಬಳಸುತ್ತೇವೆ, ಅಗರಬತ್ತಿಯನ್ನು ಹಚ್ಚುವುದರಿಂದ ಆ ಹೊಗೆಯ ಮೂಲಕ ನಮ್ಮ ಮೊರೆ ದೇವರನ್ನು ತಲುಪುತ್ತದೆ ಅನ್ನೋ ನಂಬಿಕೆ. ಇದೆ ನಂಬಿಕೆ ಇಂದಲೇ ಒಂದು ವೇಳೆ ಶಾಸೋಕ್ತವಾಗಿ ಪೂಜೆ ಮಾಡಲು ಸಾಧ್ಯವಾಗದೆ ಇದ್ದರೆ ಬೆಳಿಗ್ಗೆ, ಸಂಜೆ ದೇವರ ಫೋಟೋಕ್ಕೆ ಕೈಮುಗಿಯುವಾಗಲಾದರೂ ಗಂಧದಕಡ್ಡಿ ಹಚ್ಚುತ್ತಾರೆ.

ಮತ್ತೊಂದು ಕಾರಣ ಏನೆಂದರೆ ಪೂಜೆಯ ಸ್ಥಳದಲ್ಲಿರುವ ಕೆಟ್ಟ ವಾಸನೆಗಳನ್ನು ಪರಿಹರಿಸಿ ಒಳ್ಳೆಯ ಪರಿಮಳ ಹರಡುವ ಮೂಲಕ ಪೂಜೆ ಮಾಡುವವರ ಮನಸ್ಸು ಪ್ರಸನ್ನವಾಗಿರುವಂತೆ ನೋಡಿಕೊಳ್ಳುತ್ತದೆ ಎಂಬುದು ಮತ್ತೊಂದು ಪ್ರಮುಖ ಕಾರಣ.

ದೇವರನ್ನು ನಾವು ಕಂಡಿದ್ದೇವೋ ಇಲ್ಲವೋ ಗೊತ್ತಿಲ್ಲ, ಆದರೆ ಎಲ್ಲವು ನಂಬಿಕೆಯ ಆಧಾರದ ಮೇಲೆ ನಡೆಯುತ್ತದೆ . ಹಾಗಾಗಿ ನಾವು ಪೂಜೆಗೆ ಬಳಸುವಂತ ಆಗರ ಬತ್ತಿಯನ್ನು ಈ ರೀತಿಯಾಗಿ ಬಳಸಿದರೆ ದೇವರು ನಮ್ಮ ಮೊರೆಯನ್ನು ಕೇಳಬಹುದು ಅನ್ನೋ ನಂಬಿಕೆ.

ಅಗರಬತ್ತಿಯನ್ನು ಮನೆಯಲ್ಲಿ ಬಳಸುವುದರಿಂದ ಮನೆಯಲ್ಲಿ ಕ್ರಿಮಿಕೀಟಗಳು ಸಹ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಕೆಟ್ಟ ವಾಸನೆ ಇಲ್ಲದಂತೆ ಮನೆಯ ತುಂಬಾ ಪರಿಮಳದ ಸೊಬಗನ್ನು ಬೀರುತ್ತದೆ.

Comments are closed.