ಕರಾವಳಿ

ಕುಲಶೇಖರ : ಲೋಕ ಕಲ್ಯಾಣಾರ್ಥ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು: ಕುಲಶೇಖರ ಕೈಕಂಬ ಹಿಂದೂ ಯುವ ಸೇನೆ ಆಶ್ರಯದಲ್ಲಿ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥ ಡಿ.23 ರಿಂದ 30ರ ವರೆಗೆ ಪದವು ಮೇಗಿನ ಮನೆ ವಠಾರದಲ್ಲಿ ಹಮ್ಮಿಕೊಂಡಿರುವ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗವನ್ನು ಸೋಮವಾರ ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ್ ರಾವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ದೇವರ ಅನುಗ್ರಹದಿಂದ ಧನಾತ್ಮಕ ಶಕ್ತಿಲಭಿಸಿ ಮನುಷ್ಯ ಎತ್ತರಕ್ಕೇರಲು ಸಾಧ್ಯ. ನಮ್ಮ ವ್ಯವಹಾರದಲ್ಲಿ ಗಳಿಸಿದ ಲಾಭದಲ್ಲಿ ಒಂದಂಶವನ್ನು ಸಮಾಜದ ಒಳಿತಿಗೆ ವಿನಿಯೋಗಿಸಿದಾಗ ದೇವರು ಆಶೀರ್ವದಿಸುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸಿ ಶುಭಾ ಹಾರೈಸಿದರು. ಮೇಯರ್ ಕೆ.ಭಾಸ್ಕರ್ ಶುಭಾ ಕೋರಿದರು. ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಪಿ.ಕರುಣಾಕರ್ ಆಳ್ವ, ಯಶೋಧರ ಚೌಟ, ಸಂಚಾಲಕ ರಾಮಚಂದ್ರ ಚೌಟ ಪದವು, ಗೌರವಾಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ, ಉಪಾಧ್ಯಕ್ಷರಾದ ಜನಾರ್ಧನ ಅರ್ಕುಳ, ಉಮೆಶ್ ರೈ ಪದವು ಮೇಗಿನ ಮನೆ ,ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಅಶ್ವಿತ್ ಕೊಟ್ಟಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯ ಅರುಣ್ ಉಪಸ್ಥಿತರಿದ್ದರು.

ಸಮಿತಿ ಕಾರ್ಯಧ್ಯಕ್ಷ ಎಚ್.ಕೆ.ಪುರುಷೋತ್ತಮ ಸ್ವಾಗತಿಸಿದರು. ಖಜಾಂಜಿ ಭಾಸ್ಕರಚಂದ್ರ ಶೆಟ್ಟಿ ವಂದಿಸಿದರು. ಮಾದ್ಯಮ ಸಮಿತಿ ಸಂಚಾಲಕ ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ಬಾಳಂಭಟ್ ಮನೆತನದ ವೇ.ಮೂ.ನಾರಾಯಣ ಭಟ್ ಪೌರೋಹಿತ್ಯದಲ್ಲಿ 80ಕ್ಕೂ ಹೆಚ್ಚು ವೈದಿಕರ ತಂಡದಿಂದ ಯಾಗ ಆರಂಭ ಗೊಂಡಿದ್ದು,.ಡಿ 29 ರಂದು ಬೆಳಗ್ಗೆ 11ಕ್ಕೆ ಪೂರ್ಣಾಹುತಿ. ಡಿ.30 ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ, ವಿಸರ್ಜನ ಪೂಜೆ, ಸಂಜೆ 6ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಲಿದೆ.

__Sathish Kapikad

Comments are closed.