ಕರಾವಳಿ

ಬ್ಲಾಕ್​ ಟೀ, ಗ್ರೀನ್​ ಟೀ ಅರೊಗ್ಯಕರ, ಬ್ಲೂ ಟೀ ಆರೋಗ್ಯಕರವೇ..?ತಿಳಿಯಿರಿ.

Pinterest LinkedIn Tumblr

 ಗ್ರೀನ್​ ಟೀ ಕುಡಿಯೋ ಮೂಲಕ ಸಾಕಷ್ಟು ಹೆಲ್ತ್​​ ಬೆನಿಫಿಟ್ಸ್​ ಪಡೆಯಬಹುದು ಅನ್ನೋದು ಗೊತ್ತಿರೋ ವಿಚಾರ. ಅದೇ ರೀತಿ ನೋಡೋಕೆ ಸುಂದರವಿರೋ ಶಂಕಪುಷ್ಪಕ್ಕೆ ಬ್ಲಾಕ್​ ಟೀ, ಗ್ಲೀನ್​ ಟೀಯನ್ನು ಮೀರಿಸುವ ಗುಣಗಳಿವೆ.ಬ್ಲಾಕ್​ ಟೀ, ಗ್ರೀನ್​ ಟೀ ಆರೋಗ್ಯಕ್ಕೇ ತುಂಬಾನೇ ಉತ್ತಮ. ಶಂಕ ಪುಪ್ಪಗಳಿಂದ ಬ್ಲೂ ಟೀ ತಯಾರಿಸಬಹುದು. ಹೇಗೆ ಶಂಕ ಪುಷ್ಪ ಸುಂದರವಾಗಿ ಕಾಣುತ್ತದೋ ಹಾಗೆನೇ ಬ್ಲೂ ಟೀ ಬಣ್ಣ ತುಂಬಾ ಆಕರ್ಷಣೀಯ. ಶಂಕ ಪುಪ್ಪದಿಂದ ಹರ್ಬಲ್​ ಟೀ ತಯಾರಿಸಬಹುದು. ಅಲ್ಲದೆ ಬಟ್ಟೆಗಳಿಗೆ ಕೆಮಿಕಲ್​ಯುಕ್ತ ನೀಲಿ ಬಣ್ಣದ ಬದಲು ನ್ಯಾಚುರಲ್ ನೀಲಿ ಬಣ್ಣವ​​ನ್ನು ರೆಡಿ ಮಾಡಬಹುದು. ಶಂಕ ಪುಷ್ಪವನ್ನು ಒಣಗಿಸಿ ನಂತರ ಅದರಿಂದ ಬ್ಲೂ ಟೀ ತಯಾರು ಮಾಡುತ್ತಾರೆ. ಉತ್ತಮ ರಿಸಲ್ಟ್​ಗಾಗಿ ಬ್ಲೂ ಟೀಗೆ ಶುಂಠಿ, ಜೇನುತುಪ್ಪ ಅಥವಾ ಪ್ಯಾಶನ್​ ಫ್ರೂಟ್​ ಮಿಶ್ರಣ ಮಾಡಬಹುದು. ಬ್ಲೂ ಟೀಯನ್ನು ಊಟದ ನಂತರ ಸೇವಿಸಬೇಕು.

1. ಕೇವಲ ಗ್ರೀನ್​ ಟೀ, ಬ್ಲಾಕ್​ ಟೀಗಳಲ್ಲಿ ಮಾತ್ರವಲ್ಲದೆ ಬ್ಲೂ ಟೀಯಲ್ಲೂ ಌಂಟಿ-ಆಕ್ಸಿಡೆಂಟ್​ ಗುಣ ಇದೆ. ಶಂಕಪುಷ್ಪದಲ್ಲಿರುವ ಌಂಟಿ-ಆಕ್ಸಿಡೆಂಟ್​ ಚರ್ಮದ ಸುಕ್ಕುಗಳನ್ನ ತಡೆಯುತ್ತದೆ. ಅದಲ್ಲದೆ 30 ವರ್ಷ ವಯಸ್ಸಿನ ನಂತರ ಕಂಡುಬರುವ ಏಜಿಂಗ್​ ಲೈನ್ಸ್​ ತಡೆಯುತ್ತೆ.

2. ದೇಹದಲ್ಲಿ ರಕ್ತ ಸಂಚಲನ ಸರಿಯಾದ ರೀತಿಯಲ್ಲಿ ಆಗಬೇಕಿದ್ದರೆ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರಬೇಕು. ಸಕ್ಕರೆ ಪ್ರಮಾಣ ಹೆಚ್ಚಾದ್ರೂ ಕಷ್ಟ, ಕಡಿಮೆಯಾದ್ರೂ ತೊಂದರೆ. ಬ್ಲೂ ಟೀಯಲ್ಲಿರುವ ಪೌಷ್ಠಿಕಾಂಶಗಳು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತೆ.

3. ಅತಿಯಾದ ಒತ್ತಡ, ಚಿಂತೆಗಳು ಹಲವು ರೋಗಗಳಿಗೆ ಆಹ್ವಾನ ನೀಡುತ್ತೆ. ಬ್ಲೂ ಟೀ ನಮ್ಮನ್ನು ಆರೋಗ್ಯವಂತರಾಗಿಡುವಲ್ಲಿ ಸಹಕಾರಿಯಾಗಿದೆ. ಯಾಕೆಂದ್ರೆ ಬ್ಲೂ ಟೀಗೆ ಒತ್ತಡವನ್ನು ನಿಯಂತ್ರಿಸುವ ಶಕ್ತಿಯಿದೆ.

4. ನಮ್ಮ ದೈನಂದಿನ ಜೀವನದಲ್ಲಿ ತಂತ್ರಜ್ಞಾನಗಳ ಮಹತ್ವ ಅಪಾರವಾದದ್ದು. ಸಣ್ಣ-ಪುಟ್ಟ ಕೆಲಸಗಳಿಗೆ ನಾವು ಕಂಪ್ಯೂಟರ್​, ಮೊಬೈಲ್​ ಫೋನ್​ನಂತಹ ತಂತ್ರಜ್ಞಾನದ ಮೊರೆ ಹೋಗುತ್ತೇವೆ. ಹೆಚ್ಚು ಕಂಪ್ಯೂಟರ್​, ಲ್ಯಾಪ್​ಟಾಪ್​ ಬಳಕೆಯಿಂದ ಕಣ್ಣಿನ ದೃಷ್ಟಿಗೆ ತೊಂದರೆ ಉಂಟಾಗಬಹುದು. ಪ್ರತಿನಿತ್ಯ ಬ್ಲೂ ಟೀ ಸೇವಿಸೋದ್ರಿಂದ ಕಣ್ಣಿನ ನರಗಳಲ್ಲಿ ರಕ್ತದ ಸಂಚಲನ ಸರಿಯಾಗಿ ಆಗುತ್ತೆ. ಹಾಗಾಗಿ ಕಣ್ಣಿನ ನೋವು ಮತ್ತು ಇತರ ಸಮಸ್ಯೆಗಳಿಂದ ದೂರವಿರಬಹುದು. ಅದಲ್ಲದೆ ಬ್ಲೂ ಟೀ ಮೆದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ.

5. ದಟ್ಟವಾದ, ಕಪ್ಪಾದ ಕೂದಲು ಯಾರಿಗೆ​ ತಾನೇ ಇಷ್ಟವಿಲ್ಲ. ಅಪ್ಪಿ ತಪ್ಪಿ ನಮ್ಮ ಕಪ್ಪು ಕೇಶಾರಾಶಿ ಮಧ್ಯೆ ಒಂದು ಬಿಳಿ ಕೂದಲು ಕಂಡ್ರೆ ಲೋಕವೇ ತಲೆಯ ಮೇಲೆ ಬಿದ್ದಂತೆ ಆಡುತ್ತೇವೆ. ಬ್ಲೂ ಟೀ ಸೇವನೆಯಿಂದ ಬಿಳಿ ಕೂದಲು ತೊಂದರೆಯಿಂದ ಮುಕ್ತಿ ಪಡೆಯಬಹುದು.

6. ಮಹಿಳೆಯರಿಗೆ ಪೀರಿಯಡ್ಸ್​​ ದಿನಗಳಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತೆ. ಮುಟ್ಟಿನ ಆ ದಿನಗಳಲ್ಲಿ ಬ್ಲೂ ಟೀ ಸೇವಿಸೋದ್ರಿಂದ ನೋವುಗಳಿಂದ ಸ್ವಲ್ಪ ಆರಾಮ ಸಿಗುತ್ತದೆ.

Comments are closed.