ಕರಾವಳಿ

ದೇಹದಲ್ಲಿನ ನಟ್ಟಿಗೆ ತೆಗುವುದು ಆರೋಗ್ಯಕ್ಕೆ ಒಳ್ಳೆಯದೇ, ಕೆಟ್ಟದೇ.. ತಿಳಿಯಿರಿ..?

Pinterest LinkedIn Tumblr

ಹೆಚ್ಚೊತ್ತು ಕೆಲಸ ಮಾಡಿದಾಗ ಕೈ ಬೆರಳ ನಟ್ಟಿಗೆ ಮುರಿಯುವುದು ಸಹಜ, ಎಲ್ಲ ಭಾರವನ್ನು ಒಂದೇ ಸಲ ತೆಗೆದು ಹಾಕಿದಷ್ಟು ಈ ಕಾರ್ಯ ನೆಮ್ಮದಿ ಕೊಡುತ್ತದೆ. ಯಾವುದೋ ವಾದ್ಯದಿಂದ ಹೊರಡಿದ ಶಬ್ಧ ಮನಸ್ಸಿಗೆ ಮುದ ನೀಡಿದರೆ, ಸಮಸ್ಯೆಯನ್ನೂ ತಂದಿಡುತ್ತೆ ಎಂಬುವುದು ಗೊತ್ತಾ? ಓದಿ ಈ ಸುದ್ದಿಯನ್ನು…

ನಟ್ಟಿಗೆ ಶಬ್ಧ ಏಕೆ ಬರುತ್ತದೆ?

ಕೈ ಬೆರಳುಗಳ ಸಂಧಿಯಲ್ಲಿ ‘ಪಾಕೆಟ್ ಆಫ್ ಗ್ಯಾಸ್’ ಜಾಗದಲ್ಲಿ ಗಾಳಿ ತುಂಬಿರುತ್ತದೆ. ನಟ್ಟಿಗೆ ಮುರಿದಾಕ್ಷಣ ಲಟ ಲಟ ಎಂಬ ಸದ್ದು ಹೊರಡಿಸುತ್ತದೆ ಇದೆ. ಕೈ ಹಾಗೂ ಕಾಲು ಬೆರಳುಗಳ ನಟ್ಟಿಗೆ ತೆಗೆದರೆ ಏನೂ ತೊಂದರೆಯಿಲ್ಲ. ಆದರೆ…..ಕುತ್ತಿಗೆ ಭಾಗದಲ್ಲಿ ಮಾಡುವುದು ಸರಿಯಲ್ಲ. ಏಕೆಂದರೆ ನಟ್ಟಿಗೆ ತೆಗೆದ ನಂತರ ಬೆನ್ನು ಭಾಗದ ಸ್ನಾಯು ಮೇಲೆ ಒತ್ತಡ ಹೇರಿದಂತಾಗುತ್ತದೆ. ಇದರಿಂದ ಕುತ್ತಿಗೆ ಉಳುಕುವುದು ಅಥವಾ ಸೊಂಟ ನೋವು ಕಾಣಿಸುವ ಸಾಧ್ಯತೆ ಇರುತ್ತದೆ.

ಕೂತ ಜಾಗದಲ್ಲಿಯೇ ಹೆಚ್ಚು ಸಮಯ ಕಳಯುವವರಲ್ಲಿ ಇಂಥ ಲಕ್ಷಣ ಕಾಣಿಸುತ್ತದೆ. ಕತ್ತು ನೋವೆಂದು ಕುತ್ತಿಗೆ ಭಾಗದಲ್ಲಿ ನಟ್ಟಿಗೆ ತೆಗೆಯುವಾಗ ಮೆದುಳಿನ ಮೇಲೂ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಇಂಥದ್ದನ್ನು ಮಾಡದಿದ್ದರೇ ಒಳಿತು.

ರಿಲ್ಯಾಕ್ಸ್ ಆಗಬೇಕೆಂದರೆ ಕೂತ ಜಾಗದಿಂದ ಎದ್ದು ಓಡಾಡಿ. ಕೈ-ಕಾಲುಗಳನ್ನು ಅಲ್ಲಾಡಿಸಿ. ಸುದೀರ್ಘ ಉಸಿರೆಳೆದುಕೊಂಡು ಬಿಡಿ. ಪ್ರಾಣಾಯಾಮ ಮಾಡಿ. ಇವೆಲ್ಲವೂ ಅಷ್ಟೇ ರಿಲ್ಯಾಕ್ಸ್ ನೀಡುವಂಥ ಕ್ರಿಯೆಗಳಾಗಿದ್ದು, ಪ್ರಾಣಕ್ಕೇ ಕುಂದು ತರುವಂಥ ನಟ್ಟಿಕೆ ತೆಗೆದುಕೊಳ್ಳಲು ಸುಖಾ ಸುಮ್ಮನೆ ಮುಂದಾಗಬೇಡಿ.

Comments are closed.