ಕರಾವಳಿ

ಈ ಕಾಯಿ ಮಾತ್ರವಲ್ಲ ಇದರ ಬೀಜವು ದೇಹಕ್ಕೆ ಅರೋಗ್ಯಕರ

Pinterest LinkedIn Tumblr

ಹೌದು ನಮಗೆ ಕುಂಬಳ ಕಾಯಿಯ ಬಗ್ಗೆ ಮಾತ್ರ ಗೊತ್ತು. ಕುಂಬಳ ತಂದು ಪಲ್ಲೆ ,ಸಾಂಬಾರ್ ಮಾಡಿ ತಿನ್ನುತ್ತೇವೆ ಆದರೆ ಅದರ ಬೀಜವನ್ನು ಬಿಸಾಡುತ್ತೇವೆ ಆದರೆ ಆ ಬೀಜದಲ್ಲೂ ನಮ್ಮ ದೇಹಕ್ಕೆ ಸಿಗುವ ಹಲವಾರು ಆರೋಗ್ಯಕಾರಿ ಲಾಭಗಳಿವೆ ಆದ್ದರಿಂದ ಏನಿದೆ ಅಂತ ತಿಳಿದು ಬಳಸಿ ಅದರ ಲಾಭ ಪಡೆದುಕೊಳ್ಳಿ.

ತ್ವಚೆಯ ಆರೋಗ್ಯಕ್ಕೆ ಉತ್ತಮ:ಹೌದು ಕುಂಬಳಕಾಯಿ ಬೀಜ ತ್ವಚೆಯಲ್ಲಿ ಕೊಲೆಜಿನ್​ ಉತ್ಪತ್ತಿಯನ್ನು ಹೆಚ್ಚಿಸಿ ಚರ್ಮದಲ್ಲಿನ ಸುಕ್ಕು ನಿವಾರಿಸಿ ತ್ವಚೆ ಯಂಗ್​ ಆಗಿ ಕಾಣಲು ಸಹಾಯ ಮಾಡುತ್ತದೆ ಮತ್ತು ತ್ವಚೆಯ ಆರೋಗ್ಯವನ್ನು ಸಹ ಕಾಪಾಡುತ್ತದೆ.

ದೇಹದ ಸೌಂದರ್ಯವನ್ನು ಹೆಚ್ಚಿಸುತ್ತದೆ: ಕುಂಬಳಕಾಯಿ ಬೀಜವನ್ನು ನಾವು ಬಳಸುವುದರಿಂದ ಬೀಜದಲ್ಲಿರುವ ವಿಟಮಿನ್ಸ್​, ಮಿನರಲ್ಸ್​, ಫ್ಯಾಟಿ ಆ್ಯಸಿಡ್ಸ್​ನಂತಹ ಅಂಶಗಳು ನೈಸರ್ಗಿಕವಾಗಿಯೇ ನಮ್ಮದೇಹದ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತವೆ.

ಕಲೆಯನ್ನು ನಿವಾರಿಸುತ್ತದೆ: ಕುಂಬಳ ಬೀಜದಲ್ಲಿರುವ ಆ್ಯಂಟಿಆಕ್ಸಿಡೆಂಟ್​ಗಳು ಚರ್ಮದ ಕಲೆ ನಿವಾರಣೆಗೆ ಸಹಕಾರಿಯಾಗಿವೆ ಕಾರಣ ಕುಂಬಳಕಾಯಿ ಬೀಜದಲ್ಲಿ ಆ್ಯಂಟಿಆಕ್ಸಿಡೆಂಟ್​ಗಳು ಸಮೃದ್ಧವಾಗಿದೆ. ಹೀಗಾಗಿ ಈ ಬೀಜದ ಬಳಕೆಯಿಂದ ಚರ್ಮದ ಮೇಲಿನ ಚಿಕ್ಕಪುಟ್ಟ ಕಲೆಗಳನ್ನು ನಿವಾರಿಸುತ್ತದೆ.

ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ:ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ವಿಟಮಿನ್​ ಮತ್ತು ಮಿನರಲ್ಸ್​ ಕುಂಬಳಕಾಯಿ ಬೀಜದಲ್ಲಿದೆ ಆದ್ದರಿಂದ ಕೂದಲಿನ ಅರೋಗ್ಯ ಹೆಚ್ಚಿಸುವುದಲ್ಲದೆ ಕೂದಲು ತುಂಡಾಗುವುದನ್ನು ತಪ್ಪಿಸುತ್ತದೆ.

ಬಿಳಿ ಕೂದಲನ್ನು ತಡೆಯುತ್ತದೆ: ಕುಂಬಳಕಾಯಿ ಬೀಜದಲ್ಲಿರುವ ಮಿನರಲ್ಸ್​ಗಳು ಮೆಲೆನಿನ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಕೂದಲು ತನ್ನ ನೈಸರ್ಗಿಕ ಕಪ್ಪು ಬಣ್ಣವನ್ನು ಹಿಡಿದಿಟ್ಟುಕೊಳ್ಳಲು ಸಹಕಾರಿಯಾಗುವ ಮೂಲಕ ಬಿಳಿ ಕೂದಲನ್ನು ಬರದಂತೆ ತಡೆಯುತ್ತದೆ.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ: ಕುಂಬಳಕಾಯಿ ಬೀಜದಲ್ಲಿ ವಿಟಮಿನ್​ ಇ ಇರುವುದರಿಂದ ಇದು ಚರ್ಮ ಕಾಂತಿಯುಕ್ತವಾಗಿರುವಂತೆ ಮಾಡುತ್ತದೆ.

ಹೀಗೆ ಕುಂಬಳಕಾಯಿ ಬಳಕೆ ನಂತರ ಬಿಸಾಡುವ ಈ ಬೀಜಗಳು ದೇಹದ ಸೌಂದರ್ಯ ಜೊತೆಗೆ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತವೆ.

Comments are closed.