ಕರಾವಳಿ

ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸುವಲ್ಲಿ ಈ ಹಣ್ಣು ಸಹಕಾರಿ

Pinterest LinkedIn Tumblr

ಹೌದು ಕ್ಯಾನ್ಸರ್ ನಿವಾರಣೆಗೆ ಹಲವು ರೀತಿಯಾದ ವಿಧಾನಗಳು ಮತ್ತು ಹಲವು ಬಗೆಯ ಔಷಧಿಗಳು ನಮ್ಮಲ್ಲಿವೆ ಅದೇ ರೀತಿಯಾಗಿ ಈ ಬೆರ್ರಿ ಹಣ್ಣು ಸಹ ಒಂದಾಗಿದೆ ಇದು ಯಾವ ರೀತಿಯಾಗಿ ನಿಮ್ಮ ಕ್ಯಾನ್ಸರ್‌ ನಿವಾರಕ ಅನ್ನೋದು ಇಲ್ಲಿದೆ ನೋಡಿ.

ಕ್ಯಾನ್ಸರ್‌ನಿಂದ ದೂರ ಇರಲು ಬೆರ್ರಿ ಹಣ್ಣುಗಳನ್ನು ಹೆಚ್ಚು ಸೇವಿಸಿ. ಆ್ಯಂಟಿ ಆಕ್ಸಿಡೆಂಟ್‌ ಗುಣ ಹೊಂದಿರುವ ಬೆರ್ರಿ ಹಣ್ಣುಗಳ ಸೇವನೆಯಿಂದ ಜೀರ್ಣ ಕ್ರಿಯೆ ವೃದ್ಧಿಯಾಗುವುದರ ಜತೆ, ಸಮತೋಲನ ತೂಕ ಕಾಪಾಡಲು ಇದು ಸಹಕಾರಿ. ಇದೀಗ ಕ್ಯಾನ್ಸರ್‌ ವಿರುದ್ಧವೂ ಹೋರಾಟ ನಡೆಸುವಲ್ಲಿ ಇವು ಸಹಕಾರಿ ಎಂದಿದೆ ಇತ್ತೀಚಿನ ಸಂಶೋಧನೆ.

ತೂಕ ಹೆಚ್ಚಳದಿಂದ ಲಿವರ್‌ ಸಮಸ್ಯೆ: ಮೂರು ವರ್ಷದ ಮಗು 8 ವರ್ಷದಷ್ಟು ಬೆಳವಣಿಗೆ ಹೊಂದಿದ್ದರೆ ಅಥವಾ ಬೊಜ್ಜಿನ ದೇಹ ಹೊಂದಿದ್ದರೆ ಆ ಬಗ್ಗೆ ಗಮನ ಕೊಡಿ. ಏಕೆಂದರೆ ಇದು ಲಿವರ್‌ ಆರೋಗ್ಯಕ್ಕೆ ಅಪಾಯ ಎಂದು ಎಚ್ಚರಿಸಿದೆ ಇತ್ತೀಚಿನ ಅಧ್ಯಯನ.

ಪಾಸ್ತಾದಿಂದ ತೂಕ ಹೆಚ್ಚಲ್ಲ: ನೀವು ಸೇವಿಸುವ ಪಾಸ್ತಾ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ ಎಂದು ನಂಬಿದ್ದರೆ ಅದರಿಂದ ಹೊರ ಬನ್ನಿ. ಏಕೆಂದರೆ ತೂಕ ಹೆಚ್ಚಳವಾಗುವುದಕ್ಕೂ ನೀವು ಸೇವಿಸುವ ಪಾಸ್ತಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ ಇತ್ತೀಚಿನ ಅಧ್ಯಯನ. ಇದು ಕೂಡ ಆರೋಗ್ಯಕರ ಡಯಟ್‌ ವಿಧಾನವೆಂದೆನಿಸಿದೆ. ಹಾಗಂತ ಅದರ ಮೇಲೆ ಅವಲಂಬಿತರಾಗಬೇಡಿ. ಅತಿಯಾದರೆ ಪಾಸ್ತಾ ಕೂಡ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

Comments are closed.