ಕರಾವಳಿ

ಪದೇ ಪದೇ ಕಾಡುವ ಆಸಿಡ್ ರಿಫ್ಲಕ್ಸ್‌ನ್ನೂ ನಿರ್ಲಕ್ಷಿಸಿದರೆ… ಸಮಸ್ಯೆ ಕಟ್ಟಿಟ್ಟಬುತ್ತಿ..

Pinterest LinkedIn Tumblr

ಆಸಿಡ್ ರಿಫ್ಲಕ್ಸ್ ಹೊಟ್ಟೆ ಮತ್ತು ಪಿತ್ತಜನಕಾಂಗದಲ್ಲಿ ಅತಿಯಾದ ಜೀರ್ಣಕಾರಿ ಆಮ್ಲಗಳು ಅಥವಾ ಪಿತ್ತರಸ ಉತ್ಪಾದನೆಯಾಗುವ ಸ್ಥಿತಿಯನ್ನು  ಆಸಿಡ್ ರಿಫ್ಲಕ್ಸ್ ಎಂದೂ ಕರೆಯಲ್ಪಡುವ ಅಸಿಡಿಟಿಯು ಜೀರ್ಣಾಂಗದ ಕಾಯಿಲೆಯಾಗಿದೆ .ಇದು ವಿಶೇಷವಾಗಿ ವಯಸ್ಕರಲ್ಲಿ ತುಂಬಾ ಸಾಮಾನ್ಯವಾದ ಸಮಸ್ಯೆಯಾಗಿದೆ.ಹಾಗು ತಮ್ಮ ಆಹಾರ ಪದ್ಧತಿ ಆರೋಗ್ಯಕರವಾಗಿಲ್ಲದ ಮಕ್ಕಳು ಕೂಡ ಅಸಿಡಿಟಿಯನ್ನು ಅನುಭವಿಸಬಹುದು.

ಆಮ್ಲ ಪ್ರಕೃತಿಯ ಕಾರಣದಿಂದಾಗಿ ಇದು ಹೊಟ್ಟೆ ಮತ್ತು ಕರುಳಿನ ಒಳಗಿರುವ ಪದರಗಳನ್ನು ಕಿರಿಕಿರಿಗೊಳಿಸುತ್ತದೆ.

ಮಾನವನ ದೇಹದಲ್ಲಿ ಉತ್ಪತ್ತಿಯಾಗುವಂತಹ ಆಮ್ಲಗಳು ಪ್ರಬಲವಾಗಿಲ್ಲ ಎಂಬ ಅಭಿಪ್ರಾಯವನ್ನು ನಮ್ಮಲ್ಲಿ ಹಲವಾರು ಜನರು ಹೊಂದಿರಬಹುದು . ಆದರೆ ವಾಸ್ತವವಾಗಿ ಜೀರ್ಣಕಾರಿ ಆಮ್ಲಗಳು ತುಂಬಾ ಶಕ್ತಿಯುತವಾಗಿರುತ್ತವೆ ಏಕೆಂದರೆ ಅವುಗಳು ನಾವು ಸೇವಿಸುವ ವಿವಿಧವಾದ ಆಹಾರಗಳನ್ನು ಒಡೆದು ಹಾಕುವಷ್ಟು ಪ್ರಬಲವಾಗಿರಲೇಬೇಕು.

ಅಸಿಡಿಟಿ ಸಮಸ್ಯೆ ಇದೆಯೇ? ಇಲ್ಲಿದೆ ನೋಡಿ 11 ಪವರ್‌ಫುಲ್ ಪವರ್‌ಫುಲ್ ಮನೆ ಔಷಧಿಗಳು

ಜೀರ್ಣಕಾರಿ ದ್ರವಗಳು ಮತ್ತು ಆಮ್ಲಗಳು ಅಧಿಕವಾಗಿ ಉತ್ಪತ್ತಿಯಾದಾಗ,ಈ ಬಲವಾದ ಆಮ್ಲಗಳು ಹೊಟ್ಟೆಯ ಒಳಪದರಗಳಲ್ಲಿ ಕಿರಿಕಿರಿ ಮತ್ತು ಹೊಟ್ಟೆಯ ಉರಿಯೂತವನ್ನು ಉಂಟುಮಾಡಬಹುದು, ಇದು ಎದೆಯುರಿ ಆಗುವಂತೆ ಮಾಡುತ್ತದೆ. ಬಹಳಷ್ಟು ಜನರು ಅಸಿಡಿಟಿ ಕೇವಲ ಒಂದು ಸಾಮಾನ್ಯವಾದ ಸಣ್ಣ ಕಾಯಿಲೆ ಎಂದು ಭಾವಿಸಿ ಅವರು ಈ ಸ್ಥಿತಿಯನ್ನು ನಿರ್ಲಕ್ಷಿಸುತ್ತಾರೆ.

ಆದರೆ ಅಸಿಡಿಟಿಯನ್ನು ನಿರ್ಲಕ್ಷಿಸುವುದು ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಏಕೆಂದರೆ ಜೀರ್ಣಾಂಗ ವ್ಯವಸ್ಥೆಯು ದೇಹದ ಪ್ರಮುಖವಾದ ಕ್ರಿಯಾತ್ಮಕ ಭಾಗಗಳಲ್ಲಿ ಒಂದಾಗಿದೆ. ಆದ್ದರಿಂದ ಅಸಿಡಿಟಿ ಮುಂದುವರಿದರೆ, ತಕ್ಷಣವೇ ವೈದ್ಯಕೀಯ ಆರೈಕೆ ಬಹಳ ಅಗತ್ಯ. ಅಸಿಡಿಟಿಯು ಅದೇ ಒಂದು ಸ್ಥಿತಿಯಾಗಿರಬಹುದು ಅಥವಾ ಬೇರೆ ಹಲವು ರೋಗಗಳ ಲಕ್ಷಣವೂ ಆಗಿರಬಹುದು.

ಅಸಿಡಿಟಿ ಯನ್ನು ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು ಏಕೆಂದರೆ ಅದು ಈ ಕೆಳಗಿನ ರೋಗಗಳನ್ನು ಉಂಟುಮಾಡಬಹುದು ಅಥವಾ ಅದರ ಸೂಚನೆಯನ್ನು ಕೊಡಬಹುದು.

1. ಹೊಟ್ಟೆ ಹುಣ್ಣು
2. ಈಸೊಫಗೈಟಿಸ್
3. ಹಿಯಾಟಲ್ ಹರ್ನಿಯಾ
4. ಹೊಟ್ಟೆ ಕ್ಯಾನ್ಸರ್
5. ಹೃದಯಾಘಾತ
6. ಪಿತ್ತಗಲ್ಲು
7. GERD

1.ಹೊಟ್ಟೆ ಹುಣ್ಣು
ನಾವು ಮೊದಲೇ ಓದಿದಂತೆ, ಹೊಟ್ಟೆಯಲ್ಲಿ ಉತ್ಪತ್ತಿಯಾದ ಜೀರ್ಣಕಾರಿ ಆಮ್ಲಗಳು ಬಹಳ ಬಲವಾಗಿರುತ್ತವೆ. ಆದ್ದರಿಂದ ಅಸಿಡಿಟಿ ಇರುವ ವ್ಯಕ್ತಿಗಳ ಹೊಟ್ಟೆಯಲ್ಲಿ ಹೆಚ್ಚುವರಿ ಜೀರ್ಣಕಾರಿ ಆಮ್ಲಗಳ ನಿರಂತರ ಉತ್ಪಾದನೆಯಾದಾಗ,ಅದು ಹೊಟ್ಟೆಯ ಒಳಪದರದಕ್ಕೆ ನಿರಂತರವಾಗಿ ಕಿರಿಕಿರಿಯಾಗುವಂತೆ ಮಾಡುತ್ತದೆ.ಕ್ರಮೇಣವಾಗಿ ಇದು ಹೊಟ್ಟೆಯ ಹುಣ್ಣುಗಳಾಗಿ ಬದಲಾಗಬಹುದು ಮತ್ತು ಅದೇ ಒಂದು ಗಂಭೀರವಾದ ಆರೋಗ್ಯ ಸಮಸ್ಯೆಯಾಗುತ್ತದೆ.

2.ಈಸೊಫಗೈಟಿಸ್
ಅನ್ನನಾಳವು ಸ್ನಾಯುವಿನಿಂದ ಕೂಡಿದ ಕೊಳವೆಯಾಗಿದ್ದು ಇದು ಗಂಟಲಿನಿಂದ ಹೊಟ್ಟೆಗೆ ಸಂಪರ್ಕವನ್ನು ನೀಡುತ್ತದೆ , ಇದರ ಮೂಲಕವೇ ನಾವು ಆಹಾರ ಮತ್ತು ನೀರನ್ನು ಸೇವಿಸುತ್ತೇವೆ.ಒಬ್ಬ ವ್ಯಕ್ತಿಯು ನಿರಂತರವಾಗಿ ಅಸಿಡಿಟಿಯನ್ನು ಹೊಂದಿರುವ ಸಂದರ್ಭದಲ್ಲಿ ಅವನು ಸರಿಯಾದ ವೈದ್ಯಕೀಯ ಸಹಾಯ ತೆಗೆದುಕೊಳ್ಳದೆ ಇದ್ದರೆ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ಆಮ್ಲಗಳು ಅನ್ನನಾಳಕ್ಕೆ ಪುನಃ ವಾಪಸ್ಸಾಗುತ್ತವೆ ಮತ್ತು ಇದರಿಂದ ಅನ್ನನಾಳವು ಉರಿಯುವಂತೆ ಮತ್ತು ಕಿರಿಕಿರಿಯಾಗುವಂತೆ ಮಾಡುತ್ತವೆ,ಈ ಸ್ಥಿತಿಯನ್ನು ಈಸೊಫಗೈಟಿಸ್ ಎಂದು ಕರೆಯುತ್ತಾರೆ. ಇದರ ರೋಗಲಕ್ಷಣಗಳೆಂದರೆ ಗಂಟಲು ನೋವು,ಆಹಾರವನ್ನು ನುಂಗುವುದರಲ್ಲಿ ಕಷ್ಟವಾಗುವುದು,ಎದೆ ನೋವು,ಉಸಿರಾಟದ ತೊಂದರೆ,ಜ್ವರ ಇತ್ಯಾದಿ.

3. ಹಿಯಾಟಲ್ ಹರ್ನಿಯಾ
ಹೊಟ್ಟೆಯ ಸ್ನಾಯುವಿನ ಒಂದು ಭಾಗವು ಡಯಾಫ್ರಾಮ್ (ಎದೆ ಮತ್ತು ಹೊಟ್ಟೆಯನ್ನು ಬೇರ್ಪಡಿಸುವ ಸ್ನಾಯು ಪದರ) ಮೂಲಕ ಮೇಲಕ್ಕೆ ಹಿಸುಕಿದಾಗ ಅದು ಹಿಯಾಟಲ್ ಹರ್ನಿಯಾ ಎಂಬ ಕಾಯಿಲೆಯನ್ನು ಉಂಟುಮಾಡುತ್ತದೆ. ಈ ಕಾಯಿಲೆಯನ್ನು ಹೊಂದಿರುವ ಜನರಿಗೆ,ಆಹಾರ ಮತ್ತು ಜೀರ್ಣಕಾರಿ ಆಮ್ಲಗಳು ಹೊಟ್ಟೆಯಿಂದ ಡಯಾಫ್ರಾಮ್ನ ಮೂಲಕ ಎದೆಗೆ ವಾಪಸ್ಸು ಹೋಗುವಂತೆ ಆಗಬಹುದು.ಹಾಗಾಗಿ ಅಸಿಡಿಟಿಯು ಹಿಯಾಟಲ್ ಹರ್ನಿಯಾದ ಲಕ್ಷಣವಾಗಿರಬಹುದು ಮತ್ತು ಇದು ತಕ್ಷಣ ವೈದ್ಯಕೀಯ ಆರೈಕೆಯ ಅಗತ್ಯವನ್ನು ಸೂಚಿಸುತ್ತದೆ.

4. ಹೊಟ್ಟೆ ಕ್ಯಾನ್ಸರ್
ನೀವು ಅಸಿಡಿಟಿಯನ್ನು ಪದೇ ಪದೇ ಅನುಭವಿಸುತ್ತಾ ಇದ್ದರೆ, ಅದನ್ನು ಸಂಪೂರ್ಣವಾಗಿ ಪರಿಶೀಲಿಸುವುದು ಒಳ್ಳೆಯದು.ಹೊಟ್ಟೆಯ ಕ್ಯಾನ್ಸರ್ ನ ಪ್ರಾರಂಭಿಕ ರೋಗಲಕ್ಷಣಗಳಲ್ಲಿ ಅಸಿಡಿಟಿ ಕೂಡ ಒಂದು,ಏಕೆಂದರೆ ಕ್ಯಾನ್ಸರ್ ನ ಕೋಶಗಳು ಹೊಟ್ಟೆಯಪದರಗಳಲ್ಲಿ ಬಹಳವಾಗಿ ಕಿರಿಕಿರಿಯನ್ನುಂಟು ಮಾಡಿ ಅತಿಯಾದ ಜೀರ್ಣಕಾರಿ ದ್ರವಗಳ ಉತ್ಪಾದನೆಗೆ ಕಾರಣವಾಗುತ್ತವೆ.ಹಾಗಾಗಿ ನಿರಂತರವಾಗಿ ಅಸಿಡಿಟಿಯನ್ನು ನಿರ್ಲಕ್ಷಿಸುವುದರಿಂದ ಒಂದು ವೇಳೆ ಹೊಟ್ಟೆಯ ಕ್ಯಾನ್ಸರ್ ಇದ್ದರೂ ಅದರ ರೋಗನಿರ್ಣಯವನ್ನು ಕಂಡುಹಿಡಿಯಲು ತಡವಾಗಬಹುದು.ಆದ್ದರಿಂದ ಅಸಿಡಿಟಿ ಮುಂದುವರೆದರೆ ವೈದ್ಯಕೀಯ ಪರೀಕ್ಷೆ ಮಾಡಿಸುವುದು ತುಂಬಾ ಅವಶ್ಯಕ.

5. ಹೃದಯಾಘಾತ
ನಮಗೆಲ್ಲಾ ಹೆಚ್ಚಾಗಿ ತಿಳಿಯದೇ ಇರುವ ವಿಷಯವೆಂದರೆ ಅಸಿಡಿಟಿ ಅಥವಾ ಎದೆಯುರಿ ಹೃದಯಾಘಾತದ ಆರಂಭಿಕ ಚಿಹ್ನೆಯಾಗಿರಬಹುದು.ಎದೆಯುರಿ,ಎದೆಯಲ್ಲಿನ ಬಿಗಿತ,ಉಬ್ಬುವುದು,ಮುಂತಾದ ಹೃದಯಾಘಾತದ ಚಿಹ್ನೆಗಳು ಅಸಿಡಿಟಿಯನ್ನು ಹೋಲುತ್ತವೆ. ಹಾಗಾಗಿ ಜನರು ಇದು ಕೇವಲ ಅಸಿಡಿಟಿ ಎಂದುಕೊಂಡು ನಿರ್ಲಕ್ಷಿಸುತ್ತಾರೆ.ಆದ್ದರಿಂದ ನಿಮ್ಮ ನಿರಂತರವಾದ ಅಸಿಡಿಟಿಯನ್ನು ಪರಿಶೀಲಿಸಲು ನೀವು ಪ್ರಯತ್ನಿಸಿದರೆ, ನೀವು ಹೃದಯಾಘಾತವಾಗುವ ಅಪಾಯವನ್ನು ಕಂಡುಹಿಡಿಯಬಹುದು ಮತ್ತು ಅದನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬಹುದು!

6.ಪಿತ್ತಗಲ್ಲು
ಪಿತ್ತಕೋಶದಲ್ಲಿ ಜೀರ್ಣಕಾರಿ ದ್ರವಗಳ ಘನೀಕರಣ ಮತ್ತು ಶೇಖರಣೆಯಾದಾಗ ಅದು ಪಿತ್ತಗಲ್ಲುಗಳನ್ನು ಉಂಟುಮಾಡುತ್ತದೆ.ಒಂದು ಅಥವಾ ಹೆಚ್ಚಿನ ಪಿತ್ತಗಲ್ಲುಗಳು ಪಿತ್ತರಸದ ನಾಳವನ್ನು ಬಂಧಿಸಿದಾಗ ಅದು ಜೀರ್ಣ ದ್ರವಗಳನ್ನು ಹೊಟ್ಟೆಗೆ ತಳ್ಳುತ್ತದೆ, ಇದರಿಂದಾಗಿ ಅಸಿಡಿಟಿ ಉಂಟಾಗುತ್ತದೆ.ಆದ್ದರಿಂದ ಅಸಿಡಿಟಿಯನ್ನು ನಿರ್ಲಕ್ಷಿಸುವುದರಿಂದ ಪಿತ್ತಗಲ್ಲುಗಳನ್ನು ಪತ್ತೆಹಚ್ಚುವುದನ್ನು ಕೂಡ ನೀವು ನಿರ್ಲಕ್ಷಿಸಿದಂತೆ ಆಗುತ್ತದೆ,ಪಿತ್ತಗಲ್ಲುಗಳನ್ನು ಬೇಗ ಕಂಡುಹಿಡಿದರೆ ಅವನ್ನು ಬೇಗವೇ ಗುಣಪಡಿಸಬಹುದು.

7.GERD (ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಡಿಸೀಸ್)
ಇದು ಅಸಿಡಿಟಿಯ ಪೋಷಕ ರೋಗವಾಗಿದ್ದು,ಅಸಿಡಿಟಿ ಮತ್ತು GERDಸಾಮಾನ್ಯವಾಗಿ ಒಟ್ಟೊಟ್ಟಿಗೆ ಇರುತ್ತವೆ.ಈ ಜೀರ್ಣಕಾರಿ ಸ್ಥಿತಿಯಲ್ಲಿ ಅತಿಯಾದ ಜೀರ್ಣಕಾರಿ ದ್ರವಗಳು ಉತ್ಪತ್ತಿಯಾಗುತ್ತವೆ ಮತ್ತು ಅವು ಹೊಟ್ಟೆಯ ಒಳಗಿನ ಪದರವನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಇದರಿಂದ ಅಸಿಡಿಟಿಯಾಗುತ್ತದೆ.ಸ್ವಲ್ಪ ಸಮಯದವರೆಗೆ ಅಸಿಡಿಟಿ ಇದ್ದರೆ ಅದು GERDನ ಉಪಸ್ಥಿತಿಯನ್ನು ಸೂಚಿಸುವುದಿಲ್ಲ ಮತ್ತು ಸಾಮಾನ್ಯವಾಗಿ ಅನಾರೋಗ್ಯಕರ ಆಹಾರವನ್ನು ಸೇವಿಸುವ ದಿನದಂದು ಅಸಿಡಿಟಿ ಉಂಟಾಗುತ್ತದೆ.ಆದರೆ ಆಹಾರ ಪದ್ಧತಿಗಳು ಆರೋಗ್ಯಕರವಾಗಿದ್ದರೂ ಸಹ ನಿರಂತರವಾದ ಅಸಿಡಿಟಿ ಉಂಟಾದರೆ, ಅದು GERD ರೋಗದ ಮುಖ್ಯವಾದ ಲಕ್ಷಣವಾಗಿರುತ್ತದೆ ಮತ್ತು ಇದಕ್ಕೆ ಶೀಘ್ರದಲ್ಲೇ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ.

Comments are closed.