
ಮಂಗಳೂರು,ಅಕ್ಟೋಬರ್.24: ನಗರದ ಜನನಿಬಿಡ ಪ್ರದೇಶವಾದ ಸೆಂಟ್ರಲ್ ಮಾರ್ಕೆಟ್ ಮುಂಭಾಗದ ಮೆಡಿಕಲ್ ಶಾಪ್ವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ.ಗಳ ಸೊತ್ತು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.

ಸೆಂಟ್ರಲ್ ಮಾರ್ಕೆಟ್ ರಸ್ತೆಯ ಯುನಿಟಿ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿರುವ ರತ್ನಾಕರ ಪುತ್ರನ್ ಎಂಬವರ ಪತ್ನಿ ಶೋಭಾ ಎಂಬವರ ಮಾಲಕತ್ವದ ಶೆಶ್ಮಾ ಮೆಡಿಕಲ್ ಶಾಪ್ನಲ್ಲಿ ಈ ಅವಘಡ ಸಂಭವಿಸಿದ್ದು, ಮೆಡಿಕಲ್ನಲ್ಲಿದ್ದ ಔಷಧಗಳು, ಪೀಠೋಪಕರಣಗಳು ಬೆಂಕಿಯಿಂದ ಸಂಪೂರ್ಣ ಭಸ್ಮವಾಗಿವೆ.


ಘಟನೆ ಬಗ್ಗೆ ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು. ಈ ಮೆಡಿಕಲ್ಗೆ ತಾಗಿಕೊಂಡು ಪಕ್ಕದಲ್ಲಿ ಹಲವಾರು ವ್ಯಾಪರ ಮಳಿಗೆಗಳಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕೂಡಲೇ ಬೆಂಕಿಯನ್ನು ತಹಬದಿಗೆ ತರುವ ಮೂಲಕ ಬೆಂಕಿಯ ಕೆನ್ನಾಲಗೆ ವ್ಯಾಪಿಸಿದಂತ ಮುನ್ನೆಚ್ಚರಿಕೆ ವಹಿಸಿದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಈ ಅಗ್ನಿ ಅಕಸ್ಮಿಕ ದಿಂದ ಸುಮಾರು 15 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments are closed.