ಕರಾವಳಿ

ವ್ಯಾಯಾಮ ಮತ್ತು ಆಹಾರ ಜೊತೆ ಡಿಟಾಕ್ಸ್ ಡ್ರಿಂಕ್ಸ್ ಸೇವೆನೆಯ ಪ್ರಯೋಜನಗಳು

Pinterest LinkedIn Tumblr

ದೇಹತೂಕ ಇಳಿಸಲು ನಾವು ಮಾಡುವ ಸರ್ಕಸ್ ಒಂದೆರೆಡಲ್ಲ. ಅದಕ್ಕಾಗಿ ನಾವು ವ್ಯಾಯಾಮ ಮತ್ತು ಸಮತೋಲನ ಆಹಾರ ಪಾಲಿಸು ವುದರ ಜೊತೆ ಈ ಡಿಟಾಕ್ಸ್ ಡ್ರಿಂಕ್ಸ್ ಮಾಡಿ ಕುಡಿದರೆ ಅವು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಉಪಯೋಗಗಳು:
ಇದು ದೇಹದ ಉರಿಯನ್ನು ಕಡಿಮೆ ಮಾಡುತ್ತದೆ ಮತ್ತು ಇಡೀ ದಿನ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಪಾನೀಯ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ದೇಹದ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.
ಇದು ಲಿವರ್‌ ಅನ್ನು ಸ್ವಚ್ಛ ಮಾಡಿ ಅದರಲ್ಲಿರುವ ವಿಷ ವಸ್ತುಗಳನ್ನು ಹೊರ ಹಾಕುತ್ತದೆ.
ಈ ಡಿಟಾಕ್ಸ್ ಪೇಯದಲ್ಲಿ 48 ಕ್ಯಾಲೊರಿ, 0.5 ಗ್ರಾಂ ಪ್ರೋಟೀನ್‌, 0.4 ಗ್ರಾಂ ಕೊಬ್ಬು, 11 ಗ್ರಾಂ ಕಾರ್ಬೊಹೈಡ್ರೇಟ್ಸ್‌, 1.2 ಗ್ರಾಂ ನಾರು ಮತ್ತು 6 ಗ್ರಾಂ ಸಕ್ಕರೆ ಇವೆ.

ಮಾಡುವ ವಿಧಾನ:
ಒಂದು ಗ್ಲಾಸ್‌ ಬಿಸಿ ನೀರಿಗೆ ಎರಡು ಟೇಬಲ್‌ ಸ್ಪೂನ್‌ ಆ್ಯಪಲ್‌ ಸೈಡರ್‌ ವಿನಿಗರ್‌, ಒಂದು ಟೀ ಸ್ಪೂನ್‌ ಶುಂಠಿ ತುರಿ, ಕಾಲು ಟೀ ಸ್ಪೂನ್‌ ಚಕ್ಕೆ ಪುಡಿ ಮತ್ತು ಒಂದು ಚಿಟಿಕೆ ಕೆಂಪು ಮೆಣಸಿನ ಪುಡಿ ಹಾಕಿ ತಿರುವಿ. ನಂತರ ಇದಕ್ಕೆ ಎರಡು ಟೇಬಲ್‌ ಸ್ಪೂನ್‌ ನಿಂಬೆ ರಸ ಮತ್ತು ಒಂದು ಟೀ ಸ್ಪೂನ್‌ ಜೇನುತುಪ್ಪ ಹಾಕಿ ಮಿಕ್ಸ್‌ ಮಾಡಿ 30 ನಿಮಿಷ ಬಿಡಿ. ಆಮೇಲೆ ಈ ಆರೋಗ್ಯಕರ ಡಿಟಾಕ್ಸ್‌ ಪಾನೀಯ ಸೇವಿಸಿ.

Comments are closed.