ಕರಾವಳಿ

ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಎಲಕ್ಕಿ ಸೇವಿಸಿದರೆ ಹೊಟ್ಟೆನೋವು ಮಾಯಾ…

Pinterest LinkedIn Tumblr

ಮುಖ್ಯವಾಗಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಾಡುವುದು ಮಹಿಳೆಯರನ್ನು. ಸಮಯಕ್ಕೆ ಸರಿಯಾಗಿ ತಿಂಡಿ, ಊಟ ಮಾಡದೆ ಸದಾ ಮನೆಕೆಲಸ, ಹೊರಗಿನ ಕೆಲಸಗಳು ಇದರ ಜೊತೆಗೆ ತಿಂಗಳ ಸಮಸ್ಯೆ ಅವರನ್ನು ರಕ್ತಹೀನತೆ ದೂಡುತ್ತದೆ. ಆದರೆ ಚಿಂತಿಸಬೇಕಾಗಿಲ್ಲ. ಇದಕ್ಕೆ ಮದ್ದು ಅಡುಗೆಮನೆಯಲ್ಲೇ ಇದೆ. ರಕ್ತಹೀನತೆ ಏಲಕ್ಕಿ ರಾಮಬಾಣ ಇದ್ದಂತೆ ಎಂಬುದನ್ನು ನೆನಪಿಡಿ.

* ಏಲಕ್ಕಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಬಾಯಿ ಹುಣ್ಣು ಗುಣವಾಗುತ್ತದೆ.

* ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.

* ಏಲಕ್ಕಿಯ ಎಲೆ ಮತ್ತು ಬೇರಿನ ಕಷಾಯವನ್ನು ಸೇವಿಸಿದರೆ ಭೇದಿ ನಿಲ್ಲುತ್ತದೆ.

* ಹೊಟ್ಟೆ ನೋವಿನಲ್ಲಿ ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

* ಎರಡರಿಂದ ಮೂರು ಏಲಕ್ಕಿ ಹಾಕಿ ಮಾಡಿದ ಕಷಾಯಕ್ಕೆ 4ರಿಂದ 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.

* ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿನದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.

* ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.

* ವಾತ, ಪಿತ್ತ, ಕಫ್, ದಂತ ರೋಗ ಮತ್ತು ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಉತ್ತಮ ಪರಿಹಾರ.

* ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ನಿವಾರಣೆಯಾಗುತ್ತದೆ.

Comments are closed.