ಕರಾವಳಿ

ಧಾನ್ಯ, ಬೆಳೆಗಳಲ್ಲಿ ಹುಳುಗಳಾಗದಂತೆ ತಡೆಯಲು ಕೆಲವು ಸುಲಭ ಟಿಪ್ಸ್

Pinterest LinkedIn Tumblr

.

ನಾವು ಬೇಳೆ ಕಾಳು, ಅಕ್ಕಿ, ಗೋಧಿ, ಜೋಳ ಇಂತಹ ಹಲವು ಪದಾರ್ಥಗಳನ್ನ ಒಂದು ತಿಂಗಳಿಗೆ ಆಗುವಷ್ಟು ಅಥವಾ ಅದಕ್ಕಿಂತಲೂ ಹೆಚ್ಚಾಗಿ ತಂದು ಶೇಖರಿಸಿಟ್ಟಿರುತ್ತವೆ. ತರಕಾರಿಗಳನ್ನಾದರೆ ನಾವು ಸ್ವಲ್ಪ ಸ್ವಲ್ಪವೇ ತಂದು ಬಳಸುತ್ತೇವೆ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುತ್ತೇವೆ, ಆದರೆ ಧಾನ್ಯಗಳನ್ನ ಹಾಗೆ ಬೇಕಾದಾಗ ಸ್ವಲ್ಪ ಸ್ವಲ್ಪವೇ ತಂದು ಬಳಸುವುದು ಕಷ್ಟ. ಹೀಗೆ ನಾವು ಹೆಚ್ಚಾಗಿ ತಂದಿರುವ ಧಾನ್ಯಗಳಲ್ಲಿ ಹುಳುಗಳಾಗದಂತೆ ತಡೆಯಲು ಇಲ್ಲಿವೆ ನೋಡಿ ಕೆಲವು ಸುಲಭ ಟಿಪ್ಸ್.

* ನಾವು ದಿನ ಹೆಚ್ಚಾಗಿ ಬಳಸುವಂತಹ ಅಕ್ಕಿಯನ್ನ ಹೆಚ್ಚಾಗಿ ತಂದು ಶೇಖರಿಸಿತ್ತಿರುತೇವೆ, ಇವುಗಳಲ್ಲಿ ಹುಳಗಳು ಬಹು ಬೇಗನೆ ಆಗುತ್ತವೆ, ಇದನ್ನ ತಡೆಯಲು ನಾವು ಅಕ್ಕಿಯನ್ನ ಒಂದು ಗಾಳಿಯಾಡದ ( ಏರ್ ಟೈಟ್ ) ಡಬ್ಬದಲ್ಲಿ ಹಾಕಿ ಅದಕ್ಕೆ ತುಂಬು ತೆಗೆದ 5 ರಿಂದ 6 ಒಣಮೆಣಸಿನ ಕಾಯಿಯನ್ನ ಹಾಕಿಡಬೇಕು. ಒಣಮೆಣಸಿನ ಕಾಯಿಯ ಘಾಟ್ ಗೆ ಹುಳುಗಳು ಬರುವುದಿಲ್ಲ.

* ಕೆಲವೊಮ್ಮೆ ಒಣಮೆಣಸಿನ ಕಾಯಿಯಲ್ಲೂ ಹುಳುಗಳಾಗುವ ಸಾಧ್ಯತೆ ಇರುತ್ತದೆ, ಅದನ್ನ ತಡೆಯಲು ಒಣಮೆಣಸಿನ ಕಾಯಿಯನ್ನ ಸ್ವಲ್ಪ ಎಣ್ಣೆ ಹಾಕಿ ಹುರಿದು ತಣ್ಣಗಾದ ಮೇಲೆ ಗಾಳಿಯಾಡದ ( ಏರ್ ಟೈಟ್ ) ಡಬ್ಬದಲ್ಲಿ ಹಾಕಿಟ್ಟರೆ ಹುಳು ಹತ್ತುವುದಿಲ್ಲ.

* ಹೆಸರು ಕಾಳು, ಹೆಸರು ಬೇಳೆ. ಕಡಲೆ ಬೇಳೆ, ಹುರುಳಿ ಕಾಳು, ಇನ್ನು ಹಲವು ಬಗೆಯ ಕಾಳುಗಳಿಗೆ ಹುಳುಗಳು ಸೇರದಿರಲು ಕಾಳುಗಳನ್ನ ಒಂದು ಕವರ್ ಗೆ ಹಾಕಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಅದನ್ನ ಫ್ರಿಜ್ ನಲ್ಲಿಟ್ಟರೆ ಹುಳುಗಳು ಹತ್ತುವುದಿಲ್ಲ.

* ಹುಣಸೆ ಹಣ್ಣಿಗೂ ಸಹ ಹುಳುಗಳು ಹತ್ತುತ್ತವೆ, ಅದನ್ನ ತಡೆಯಲು, ಹುಣಸೆ ಹಣ್ಣಿನಲ್ಲಿರುವ ಬೀಜಗಳನ್ನೆಲ್ಲ ತೆಗೆದು ಸ್ವಚ್ಛಗೊಳಿಸಿ ಚನ್ನಾಗಿ ಬಿಸಿಲಿಗೆ ಒಣಗಿಸಿ ಅದಕ್ಕೆ ಸ್ವಲ್ಪ ಉಪ್ಪನ್ನ ಬೆರೆಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಡಬೇಕು.

* ಅಕ್ಕಿಯಲ್ಲಿ ಹುಳುಗಳಾಗದಿರಲು ಒಣಗಿದ ಬೇವಿನ ಸೊಪ್ಪನ್ನ ಸಹ ಹಾಕಿ ಇಡಬಹುದು.

Comments are closed.